ಸೋಮವಾರಪೇಟೆ, ಮೇ ೨೨: ಕಾರಿನ ಕಿಟಕಿ ಗಾಜುಗಳಿಗೆ ಕನ್ನಡಿಯನ್ನು ಹೋಲುವಂತಹ ಟಿಂಟ್ ಪೇಪರ್ ಅಳವಡಿಸಿಕೊಂಡು ಸಂಚರಿಸುತ್ತಿದ್ದ ಕಾರಿನ ಮೇಲೆ ಪೊಲೀಸರು ಕ್ರಮ ಜರುಗಿಸಿ, ಮಾಲೀಕರಿಗೆ ದಂಡ ವಿಧಿಸಿದ್ದಾರೆ.
ಕಾರಿನ ಮುಂಭಾಗದ ಗಾಜನ್ನು ಹೊರತುಪಡಿಸಿ, ಉಳಿದ ಗಾಜುಗಳಿಗೆ ಟಿಂಟ್ ಅಳವಡಿಸಲಾಗಿತ್ತು. ಪೊಲೀಸರು ಪಟ್ಟಣದಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದ ಸಂದರ್ಭ ಈ ಕಾರು ಕಂಡುಬAದ ಹಿನ್ನೆಲೆ, ಪೊಲೀಸ್ ಠಾಣಾಧಿಕಾರಿ ರಮೇಶ್ ಕುಮಾರ್ ಅವರು ಟಿಂಟ್ ತೆಗೆಸಿ, ಮಾಲೀಕರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಿದರು.