ಕೂಡಿಗೆ, ಮೇ. ೨೨: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಂಡೆಬೆಟ್ಟ ಜೇನು ಕುರುಬ ಜನಾಂಗದ ಯುವಕರು ಕೂಡಿಗೆ ಮತ್ತು ಕೂಡುಮಂಗಳೂರು ವ್ಯಾಪ್ತಿಯಲ್ಲಿ ಸಾಂಪ್ರದಾಯಿಕ ಬೇಡು ಹಬ್ಬ ಆಚರಣೆ ಮಾಡಿದರು.

ವಿವಿಧ ಬಗೆಯ ವೇಷಭೂಷಣದ ವಸ್ತುಗಳನ್ನು ಧರಿಸಿ ಪ್ಲಾಸ್ಟಿಕ್ ಡ್ರಂಗಳನ್ನು ವಾದ್ಯಗಳ ಮಾದರಿಯಲ್ಲಿ ಬಳಕೆ ಮಾಡಿಕೊಂಡು ಕುಣಿಯುತ್ತಾ ಬೇಡು ಹಬ್ಬವನ್ನು ಕೂಡಿಗೆ, ಕೂಡುಮಂಗಳೂರು ವ್ಯಾಪ್ತಿಯ ಹಾಸನ ಹೆದ್ದಾರಿಯಲ್ಲಿ ಆಚರಣೆ ಮಾಡಿದರು.