ನೆನಪಿದೆಯೇ... "ಕೋವಿಡ್ ಸೋಂಕಿಗೆ ಸುರಕ್ಷತೆಯಾಗಿ ಲಸಿಕೆಯನ್ನು ತಪ್ಪದೇ ಹಾಕಿಸಿಕೊಳ್ಳಿ... ಲಸಿಕೆ ಇಲ್ಲದೇ ಹೋದಲ್ಲಿ ಪ್ರಯಾಣವೂ ಸಾಧ್ಯವಿಲ್ಲ... ಪಡಿತರವೂ ದೊರಕದು... ಲಸಿಕೆ ಹಾಕಿದ್ದಕ್ಕೆ ದಾಖಲೆ ಇರಿಸಿಕೊಂಡರೆ ಮಾತ್ರ ನಿಮಗೆ ಸೌಲಭ್ಯ ದೊರಕುತ್ತದೆ."

ಹೀಗೆಲ್ಲಾ ಹೇಳಿ... ಕೇಳಿದ್ದಕ್ಕೆ ವರ್ಷಗಳೇ ಆಗಿವೆ. ಕೋವಿಡ್ ಎಂಬ ಮಹಾಮಾರಿ ವಿಶ್ವವನ್ನು ವ್ಯಾಪಿಸಿ ಜೀವಕ್ಕೆ ತಲ್ಲಣ ಉಂಟು ಮಾಡಿದ ಸಂದರ್ಭ ಭಾರತದಲ್ಲಿ ಕೋವಿಡ್ ಸೋಂಕು ನಿರೋಧಕ ಅಥವಾ ಕೋವಿಡ್ ಎಂಬ ಸೋಂಕಿನಿAದ ರಕ್ಷಣೆ ಪಡೆಯಲು ಲಸಿಕೆ ಹಾಕುವ ಅಭಿಯಾನ ಯುದ್ದೋಪಾದಿಯಲ್ಲಿಯೇ ಪ್ರಾರಂಭವಾಯಿತು. ಲಸಿಕೆ ಹಾಕಿಸಿಕೊಳ್ಳದವರು ಭಾರತೀಯರೇ ಅಲ್ಲ ಎಂಬAತೆ ಬಿಂಬಿಸಲಾಗಿತ್ತು.

ಕೋವಿಡ್ ಮಹಾಮಾರಿಗೆ ಯಾವುದೇ ಔಷಧಿ ಅಥವಾ ರೋಗ ನಿರೋಧಕ ಚಿಕಿತ್ಸೆ ಇಲ್ಲದ ದಿನಗಳಲ್ಲಿ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಎಂಬ ಲಸಿಕೆಗಳೇ ಭಾರತೀಯರ ಪಾಲಿಗೆ ವರದಾನ, ಸಂಜೀವಿನಿಯAತೆ ಗೋಚರಿಸಿತ್ತು.

ಈಗ ನೆನಪಾಯಿತೇ? ಲಸಿಕೆ ಪಡೆಯಲು ಜನ ಮಾರುದ್ದ ಸಾಲುಗಟ್ಟಿ ನಿಂತರು ಮೊದಲ ಡೋಸ್ ಎರಡನೇ ಡೋಸ್ ಕಡ್ಡಾಯ ಎಂದಾದ ಬಳಿಕ ಮತ್ತೆ ಬೂಸ್ಟರ್ ಡೋಸ್ ಎಂದು ಮೂರನೇ ಸಲ ಲಸಿಕೆ ಅಭಿಯಾನ ಕೂಡ ಆರಂಭವಾಗಿತ್ತು. ಆಗ ಲಸಿಕೆ ಹಾಕಿಸಿಕೊಂಡವರಿಗೆ ಈಗ ಬಂದಿದೆ ನೋಡಿ ತಾಪತ್ರಯ. ಲಸಿಕೆ ತಯಾರಿಸಿದ ಕಂಪೆನಿಗಳು ಈಗ ತಮ್ಮ ಲಸಿಕೆಗಳಿಂದಾಗಿ ಜನರಲ್ಲಿ ಆರೋಗ್ಯ ಸಮಸ್ಯೆ ಉಂಟಾಗಬಹುದು ಎಂಬ ಸತ್ಯ ಒಪ್ಪಿಕೊಂಡಿವೆ.

ಕೋವಿಶೀಲ್ಡ್ ಎಂಬ ಲಸಿಕೆಯನ್ನು ಬ್ರಿಟನ್ ಮೂಲದ ಆಸ್ಟಾçಜೆನಿಕಾ ಎಂಬ ಸಂಸ್ಥೆ ತಯಾರಿಸಿ, ಭಾರತದಲ್ಲಿ ಸೀರಂ ಇನ್ಸ್ಟಿಟ್ಯೂಟ್ ಇದನ್ನು ವಿತರಿಸಿತ್ತು.

ಅಂತೆಯೇ ಭಾರತದಲ್ಲಿಯೇ ತಯಾರಾಗಿದೆ ಎಂಬ ಸ್ವದೇಶಿ ಮಂತ್ರ ಹೇಳಿಕೊಂಡು ಜನಪ್ರಿಯವಾಗಿದ್ದ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಕಂಪೆನಿಯ ಉತ್ಪಾದನೆಯಾಗಿದ್ದ ಕೋವ್ಯಾಕ್ಸಿನ್ ಕೂಡ ಈ ದೇಶದಲ್ಲಿ ಸಾಕಷ್ಟು ಮಂದಿಯಿAದ ಮನ್ನಣೆ ಪಡೆದಿತ್ತು.

ಇದೀಗ ಸ್ಟಿರಗರ್ ನೇಚರ್ ಎಂಬ ನಿಯತಕಾಲಿಕೆಯಲ್ಲಿ ಬಹಿರಂಗವಾದ ಅಧ್ಯಯನ ವರದಿ ಹೇಳುವುದೇನೆಂದರೆ:-

ಕೋವ್ಯಾಕ್ಸಿನ್ ಪಡೆದ ಶೇ.೩೦ ರಷ್ಟು ಜನರಲ್ಲಿ ಲಸಿಕೆ ಪಡೆದ ೧ ವರ್ಷದ ನಂತರ ವಿಭಿನ್ನ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆ. ಮುಖ್ಯವಾಗಿ ಶ್ವಾಸಕೋಷ ಸಮಸ್ಯೆ, ನರ ಸಮಸ್ಯೆ, ಚರ್ಮ ಸಂಬAಧಿ ಕಾಯಿಲೆಗಳು ಸಾಮಾನ್ಯವಾಗಿ ಕಾಣಿಸಿಕೊಂಡಿದೆ. ಸಾಕಷ್ಟು ಅಡ್ಡ ಪರಿಣಾಮಗಳು ಕೂಡ ಲಸಿಕೆ ಪಡೆದವರಲ್ಲಿ ಕಂಡು ಬಂದಿದೆ ಎಂದು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಸಂಶೋಧಕರ ತಂಡ ನಡೆಸಿದ ಅಧ್ಯಯನದಿಂದ ತಿಳಿದಿದೆ. ಕೋವಿಶೀಲ್ಡ್ ಎಂಬ ಲಸಿಕೆ ಕೂಡ ಅಡ್ಡ ಪರಿಣಾಮಗಳಿಗೆ ಕಾರಣವಾಗುತ್ತದೆ ಎಂದು ಇದೀಗ ಆ ಲಸಿಕೆ ತಯಾರಿಸಿದ್ದ ಬ್ರಿಟನ್‌ನ ಅಸ್ಟಾçಜೆನಿಕಾ ಸಂಸ್ಥೆ ಬಹಿರಂಗವಾಗಿ ಹೇಳಿಕೊಂಡಿದೆ, ಲಸಿಕೆ ಪಡೆದವರು ಥ್ರೋಂಬೋಸಿಸ್ ಎಂಬ ಆರೋಗ್ಯ ಸಮಸ್ಯೆಗೆ ತುತ್ತಾಗುವ ಸಾಧ್ಯತೆ ಇದೆ, ರಕ್ತ ಹೆಪ್ಪುಗಟ್ಟುವಿಕೆ, ಪೆಟ್ಲೇಲೆಟ್‌ಗಳ ಸಂಖ್ಯೆಯಲ್ಲಿ ಕುಸಿತ ಉಂಟಾಗುವುದು ಇದರ ಲಕ್ಷಣವಾಗಿದೆ ಎಂದು ಸಂಸ್ಥೆ ಬ್ರಿಟನ್ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದೆ. ಕೋವಿಶೀಲ್ಡ್ ಲಸಿಕೆ ಪಡೆದುಕೊಂಡ ನಂತರ ರಕ್ತ ಹೆಪ್ಪುಗಟ್ಟುವಿಕೆ ಹೆಚ್ಚಾಗಿದ್ದು, ಸಾವಿಗೂ ಕಾರಣವಾಗಿರುವ ಪ್ರಕರಣಗಳ ಬಗ್ಗೆ ಬ್ರಿಟನ್‌ನ ವಿವಿಧ ಕೋರ್ಟ್ಗಳಲ್ಲಿ ಮೊಕದ್ದಮೆ ದಾಖಲಾತಿಯಾಗುತ್ತಿದ್ದಂತೆಯೇ ಈ ಬಗ್ಗೆ ಲಸಿಕೆ ತಯಾರಿಸಿದ ಸಂಸ್ಥೆ ತನ್ನ ಹೇಳಿಕೆ ನೀಡಿದೆ. ಹೇಳಿಕೆ ಬೆನ್ನಲ್ಲೆ ತಾನು ಹೊಸ ಲಸಿಕೆ ಉತ್ಪಾದಿಸಿದ್ದಾಗಿ ಹೇಳಿಕೊಂಡು ಸಂಸ್ಥೆಯು ಕೋವಿಶೀಲ್ಡ್ನ್ನು ಮಾರುಕಟ್ಟೆಯಿಂದ ಹಿಂಪಡೆದುಕೊAಡಿರುವುದು ಕೂಡ ಗಮನಾರ್ಹವಾಗಿದೆ. ಕೋವಿಡ್ ಸಂಬAಧಿತ ಹೊಸ ರೂಪಾಂತರ ತಳಿಗಳು ಕಂಡುಬರುತ್ತಿರು ವುದು ಮತ್ತು ವಿಶ್ವವ್ಯಾಪಿ ಕೋವಿಡ್ ಸೋಂಕಿಗೆ ಹೊಸದ್ದಾಗಿ ಲಸಿಕೆಗಳು ಉತ್ಪಾದಿಸಲ್ಪಟ್ಟಿರುವುದ ರಿಂದಾಗಿ ಕೋವಿಶೀಲ್ಡ್ನ್ನು ಮಾರುಕಟ್ಟೆಯಿಂದ ೨೦೨೧ರಲ್ಲಿಯೇ ವಾಪಾಸ್ ಪಡೆದುಕೊಳ್ಳಲಾಗಿತ್ತು ಎಂದು ಸ್ಪಷ್ಟನೆ ನೀಡಿರುವ ಸೀರಂ ಸಂಸ್ಥೆಯು ಮತ್ತೊಂದು ಅಚ್ಚರಿಯ ಹೇಳಿಕೆ ನೀಡಿದೆ. ಕೋವಿಶೀಲ್ಡ್ ಲಸಿಕೆಯು ಅಡ್ಡ ಪರಿಣಾಮಗಳಿಗೆ ಕಾರಣವಾದೀತು ಎಂದು ಲಸಿಕೆಯ ಪ್ಯಾಕೆಟ್ ಮೇಲೆ ಸಂಸ್ಥೆಯು ಸ್ಪಷ್ಟವಾಗಿ ನಮೂದಿಸಿತ್ತು. ಹೀಗಾಗಿ ಅಡ್ಡಪರಿಣಾಮಗಳನ್ನು ನಾವಂತು ಅಲ್ಲಗಳೆಯುವುದಿಲ್ಲ ಎಂದು ಸಂಸ್ಥೆಯು ತನ್ನ ಹೊಣೆಯಿಂದ ಜಾರಿಕೊಂಡಿದೆ. ಸಿಗರೇಟ್ ಪ್ಯಾಕೆಟ್ ಮೇಲೆ ಎಚ್ಚರಿಕೆ ಮುದ್ರಿಸಿದ್ದರೂ ಧೂಮಪಾನಿಗಳು ಎಷ್ಟು ಪ್ರಮಾಣದಲ್ಲಿ ಅದನ್ನು ಓದುತ್ತಾರೆ ಎಂಬ ಪ್ರಶ್ನೆಯಂತೆಯೇ ೨೦೨೦ ರಲ್ಲಿ ಎಲ್ಲರೂ ಲಸಿಕೆ ಪಡೆದುಕೊಳ್ಳಲೇಬೇಕು ಎಂದು ಕಟ್ಟಾಜ್ಞೆ ಹೊರಡಿಸಿದ ಸಂದರ್ಭ ಎಷ್ಟು ಜನರು ಲಸಿಕೆ ಪ್ಯಾಕೆಟ್ ಮೇಲೆ ಏನಿದೆ ಎಂದು ಓದಿರುತ್ತಾರೆ ಎಂಬ ಪ್ರಶ್ನೆಯೂ ಉದ್ಬವಿಸುತ್ತದೆ. ಇಷ್ಟಕ್ಕೂ ಲಸಿಕೆ ಪಡೆಯಲು ದೌಡಾಯಿಸಿದವರಿಗೆ ಹೀಗೆಲ್ಲಾ ಓದಲು ಅವಕಾಶವಿತ್ತೇ? ಸಾಧ್ಯವಿತ್ತೇ? ಮುಖಕ್ಕೆ ಮಾಸ್ಕ್ ಹಾಕಿಕೊಂಡು ಕೋವಿಡ್ ಸೋಂಕು ಬಾರದಂತೆ ಲಸಿಕೆ ಪಡೆಯಲು ನಾ ಮುಂದು ತಾ ಮುಂದು ಎಂದು ಓಡಿ ಸರತಿ ಸಾಲಿನಲ್ಲಿ ನಿಂತವರು ಲಸಿಕೆಯಿಂದ ಅಡ್ಡಪರಿಣಾಮ ಉಂಟಾದೀತು ಎಂದು ಕಲ್ಪಿಸಿಕೊಂಡಿರಲಿಲ್ಲ. ಲಸಿಕೆ ಪಡೆದುಕೊಂಡು ಮೂರು ವರ್ಷಗಳ ಬಳಿಕ ಈಗ ಹೊಸ ಹೊಸ ಅಡ್ಡಪರಿಣಾಮಗಳ ಬಗ್ಗೆ ಸ್ಪಷ್ಟ ಮಾಹಿತಿಗಳು ಹೊರಬರುತ್ತಿವೆ.

ಭಾರತದಲ್ಲಿಯೇ ಕೋವಿಶೀಲ್ಡ್ನ್ನು ೧೭೪ ಕೋಟಿ ಮಂದಿ ಲಸಿಕೆ ರೂಪದಲ್ಲಿ ಪಡೆದಿದ್ದರು ಎಂಬುದೂ ಗಮನಾರ್ಹ. ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಎಂಬ ಎರಡು ಲಸಿಕೆಗಳು ಭಾರತ ಮಾತ್ರವಲ್ಲ ವಿಶ್ವವ್ಯಾಪಿ ಕೋಟ್ಯಂತರ ಜನರ ಜೀವ ಉಳಿಸುವಲ್ಲಿ ನೆರವಾಗಿದೆ, ಮಾತ್ರವಲ್ಲ ಕೋವಿಡ್ ನಿಂದ ರಕ್ಷಣೆ ಪಡೆಯಲು ತಮಗೆ ಲಸಿಕೆ ನೆರವಾಗಿದೆ ಎಂಬ ಮಾನಸಿಕ ಧೈರ್ಯವನ್ನು ಈ ಲಸಿಕೆಗಳು ಉಂಟು ಮಾಡಿವೆ. (ನೆನಪಿರಲಿ... ಕೋವಿಡ್ ಸೋಂಕಿನ ವಿರುದ್ಧ ಹೋರಾಡಲು ಜಾಗಟೆ, ತಮಟೆ, ಗಂಟೆ ಬಾರಿಸಿರಲಿಲ್ಲವೇ... ಈ ಮೂಲಕ ಮಾನಸಿಕವಾಗಿ ಧೈರ್ಯ ತೆಗೆದುಕೊಳ್ಳಲಿಲ್ಲವೇ? ಅದೇ ರೀತಿ ಇದು ಕೂಡ!)

ಯಾವುದೇ ಔಷಧಿ ಅಥವಾ ಲಸಿಕೆಗಳು ಮಾರುಕಟ್ಟೆಗೆ ಬಿಡುಗಡೆಯಾಗಿ ಜನರ ಬಳಕೆಗೆ ಬರಬೇಕಾಗಿದ್ದರೆ ಸಾವಿರಾರು ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ಲಸಿಕೆಗಳು ಕೂಡ ಇಂಥ ನಾನಾ ಪರೀಕ್ಷೆ, ಪ್ರಯೋಗಗಳನ್ನು ಕ್ರಮಿಸಿಯೇ ಮಾರುಕಟ್ಟೆಗೆ ಲಭಿಸಿದೆ. ಹೀಗಿರುವಾಗ ಕೆಲವರನ್ನು ಮಾತ್ರ ಸಂದರ್ಶಿಸಿ ಅಂಥವರಲ್ಲಿಯೂ ಕೆಲವರಿಗೆ ಮಾತ್ರ ಅಡ್ಡಪರಿಣಾಮ ಕಂಡು ಬಂದಿದೆ ಎಂದ ಕೂಡಲೇ ಲಸಿಕೆಗಳೇ ವ್ಯರ್ಥ ಎನ್ನುವುದು ಸರಿಯಲ್ಲ ಎಂಬ ವಾದವೂ ಔಷಧಿ ತಯಾರಿಕಾ ಸಂಸ್ಥೆಗಳಿAದ ಕೇಳಿಬಂದಿದೆ

ಗಮನಾರ್ಹ ಎಂದರೆ, ಸಾಮಾನ್ಯವಾಗಿ ಯಾವುದೇ ಕಾಯಿಲೆಗೆ ಸಂಬAಧಿಸಿದAತೆ ಔಷಧಿ, ಲಸಿಕೆಗಳು ಉತ್ಪಾದನೆಯಾಗಬೇಕಾದರೇ ಸಾಕಷ್ಟು ವರ್ಷಗಳ ಕಾಲ ಪ್ರಯೋಗಗಳು ನಡೆಯುತ್ತವೆ. ಪ್ರಾಣಿಗಳ ಮೇಲೆ ಇಂತಹ ಔಷಧಿಯನ್ನು ಪ್ರಯೋಗಿಸಿ ಯಾವುದೇ ಸಮಸ್ಯೆಗಳಿಲ್ಲ ಎಂದು ಗೊತ್ತಾದ ಬಳಿಕ ಕೆಲವು ವ್ಯಕ್ತಿಗಳ ಮೇಲೂ ಔಷಧಿಯ ಬಳಕೆಯನ್ನು ಮಾಡಿ ಅಲ್ಲಿಯೂ ಸಮಸ್ಯೆಗಳಿಲ್ಲ ಎಂದಾದ ಬಳಿಕವೇ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತದೆ.

ಆದರೆ ಕೋವಿಡ್ ಸಂದರ್ಭಧಲ್ಲಿ ಇಂಥ ಪ್ರಯೋಗಕ್ಕೆ ಹೆಚ್ಚಿನ ಸಮಾಯಾವಕಾಶವೇ ಇರಲಿಲ್ಲ. ಲಸಿಕೆಗಳಿಂದ ಭವಿಷ್ಯದಲ್ಲಿ ಉಂಟಾಗಬಹುದಾದ ಅಡ್ಡ ಪರಿಣಾಮಗಳು, ಲಸಿಕೆಗಳಿಂದ ಅದನ್ನು ಪಡೆದುಕೊಂಡವರಲ್ಲಿ ಉಂಟಾಗುವ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳ ಬಗ್ಗೆ ಪ್ರಯೋಗಾತ್ಮಕವಾಗಿ ಅರಿಯುವ ಮುನ್ನವೇ ತರಾತುರಿಯಲ್ಲಿ ಕೋವಿಡ್‌ಗೆ ಲಸಿಕೆ ಪಡೆದುಕೊಳ್ಳುವಂತೆ ಕೋರಲಾಯಿತು. ಇಷ್ಟೊಂದು ವೇಗವಾಗಿ, ಸುದೀರ್ಘ ಕಾಲದ ಪ್ರಯೋಗಗಳಿಗೆ ಅವಕಾಶವೇ ಇಲ್ಲದಂತೆ ಲಸಿಕೆಯೊಂದು ಜನಬಳಕೆಗೆ ಬಂದದ್ದು ಕೂಡ ಅದೇ ಪ್ರಥಮ ಎಂಬAತಾಗಿತ್ತು. ಸರಕಾರಗಳೇ ಲಸಿಕೆ ಪಡೆದುಕೊಳ್ಳಿ ಎಂದು ಜನರ ಮೇಲೆ ಒತ್ತಡ ಹೇರಿದಾಗ ಯಾವುದೇ ಹಿಂಜರಿಕೆಯಿಲ್ಲದAತೆ ಬಹುಪಾಲು ಜನರು ಇಂಥ ಲಸಿಕೆ ಪಡೆದುಕೊಂಡದ್ದು ಸತ್ಯ.

ಈಗ ಆ ಲಸಿಕೆಗಳೇ ಜನರ ಮನದಲ್ಲಿ ಭೀತಿ ಉಂಟು ಮಾಡುವಂತಾಗಿ ರುವುದು ವಿಪರ್ಯಾಸ. ಯಾವುದೇ ಆರೋಗ್ಯ ಸಮಸ್ಯೆ ಎದುರಾದರೂ ಬಹುಷಃ ತಾವು ಲಸಿಕೆ ಪಡೆದ ಕಾರಣದಿಂದಲೇ ಹೀಗಾಗುತ್ತಿದೆಯೇನೋ ಎಂಬ ಕಾಯಿಲೆ ಪೀಡಿತರು ಭಾವಿಸುವಂತಾಗಿದೆ.

ಲಸಿಕೆಗಳಿAದಲೇ ಕೆಲವೊಂದು ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿದೆಯೇ? ಅಡ್ಡಪರಿಣಾಮಗಳಿಗೆ ನಿಜಕ್ಕೂ ಕೋವಿಡ್ ಲಸಿಕೆಗಳೇ ಕಾರಣವೇ ಎಂಬ ಬಗ್ಗೆ ಸ್ಪಷ್ಟ ನಿಲವು ಪ್ರಕಟಿಸಬೇಕಾದ ಆರೋಗ್ಯ ಇಲಾಖೆಗಳು, ಜಾಗತಿಕ ಮಟ್ಟದ ಆರೋಗ್ಯ ಸಂಸ್ಥೆಗಳು ಮಹಾ ಮೌನ ವಹಿಸಿದ್ದು ಮತ್ತಷ್ಟು ಗಾಬರಿಗೆ ಕಾರಣವಾಗಿದೆ. ಅಡ್ಡಪರಿಣಾಮ ಇರುತ್ತದೆ ಎಂದು ಲಸಿಕೆ ಬಾಟಲಿ ಮೇಲೆ ಮುದ್ರಿಸಿದ್ದೆವು, ಜಾಗರೂಕ ನಾಗರಿಕರಾಗಿ ನೀವು ಓದಬೇಕಾಗಿತ್ತು ಎಂಬ ಹೇಳಿಕೆ ಮೂಲಕ ಲಸಿಕೆ ತಯಾರಿಕಾ ಸಂಸ್ಥೆಗಳು ತಮ್ಮ ಹೊಣೆಯಿಂದ ಜಾರಿಕೊಂಡಿವೆ. ಕೋವಿಡ್ ಮಹಾಮಾರಿಯ ಅಟ್ಟಹಾಸದ ದಿನಗಳಲ್ಲಿ ವರದಾನ ಎಂಬAತೆ ಕಂಡಿದ್ದ ಲಸಿಕೆಗಳೇ ಈಗ ಅದನ್ನು ಪಡೆದವರಲ್ಲಿ ಭೀತಿ ಎಂಬ ಮಾನಸಿಕೆ ಕಾಯಿಲೆಗೆ ಕಾರಣವಾಗುತ್ತಿದೆ. ಸದ್ಯಕ್ಕೆ ಇಂಥ ಭೀತಿಗೆ ಔಷಧಿ (ಲಸಿಕೆ?) ಬೇಕಾಗಿದೆ. ಭಯ ಸೃಷ್ಟಿಸಿರುವ ಲಸಿಕೆಗಳಿಗೇ ಅಭಯ ಎಂಬ ಲಸಿಕೆ ಅನಿವಾರ್ಯವಾಗಿದೆ.

- ಅನಿಲ್ ಎಚ್.ಟಿ., ಮಡಿಕೇರಿ.