ಸಿದ್ದಾಪುರ, ಮೇ ೨೨: ಇಲ್ಲಿನ ಸೆಂಟ್ಸ್ ಜೋಸೆಫ್ ಚರ್ಚ್ ವತಿಯಿಂದ ಪಾಧರ್ ಜೋನಾಸ್ ಜ್ಞಾಪಕಾರ್ಥವಾಗಿ ಜಿಲ್ಲೆಯ ಕ್ರಿಶ್ಚಿಯನ್ ಸಮಾಜ ಬಾಂಧವರಿಗೆ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟ ಏರ್ಪಡಿಸಲಾಗಿದೆ ಎಂದು ಪಂದ್ಯಾಟದ ಆಯೋಜಕ ಆಂಟನಿ ಜೋಸೆಫ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸಿದ್ದಾಪುರದ ಎಸ್‌ಬಿಸಿ ಇಂಡೋರ್ ಸ್ಟೇಡಿಯಂನಲ್ಲಿ ಜೂನ್ ೧ ಹಾಗೂ ೨ ರಂದು ಕೊಡಗು ಕ್ಯಾಥೋಲಿಕ್ ೪ನೇ ವರ್ಷದ ಪಂದ್ಯಾಟ ನಡೆಯಲಿದ್ದು ವಿವಿಧ ಶ್ರೇಣಿಗಳಲ್ಲಿ ಪಂದ್ಯಾಟ ನಡೆಯಲಿದೆ.

ಪುರುಷರ ಹಾಗೂ ಮಹಿಳೆಯರ ಸಿಂಗಲ್ಸ್ ಮತ್ತು ಡಬಲ್ಸ್ ವಿಭಾಗ, ೪೦+ ವಿಭಾಗ, ಮಿಕ್ಸೆಡ್ ಡಬಲ್ಸ್ ವಿಭಾಗ ಮತ್ತು ೧೬ ವರ್ಷದ ಒಳಗಿನ ಮಕ್ಕಳ ವಿಭಾಗದಲ್ಲಿ ಪಂದ್ಯಾಟ ಆಯೋಜಿಸಿದ್ದು, ವಿಜೇತರಿಗೆ ಆಕರ್ಷಕ ಟ್ರೋಫಿ ಮತ್ತು ನಗದು ಬಹುಮಾನವನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ೯೪೪೮೭೨೧೪೮೨, ೯೧೦೮೩೧೬೮೦೪, ೯೯೦೦೭೯೬೪೩೪ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸುವAತೆ ಕೋರಿದ್ದಾರೆ.