ಮಡಿಕೇರಿ, ಮೇ ೨೨: ಕೊಡಗಿನ ಭಾಗಮಂಡಲ ಮೂಲದ ಪೊಲೀಸ್ ಅಧಿಕಾರಿ ಮುರುಳೀಧರ್ ಎಂಬವರಿಗೆ ಸೇರಿದ ಸುಮಾರು ರೂ. ೧೬ ಲಕ್ಷದಷ್ಟು ಹಣವನ್ನು ಸೈಬರ್ ಕ್ರೆöÊಂ ಮೂಲಕ ಅನಾಮಧೇಯರು ಎಗರಿಸಿದ್ದಾರೆ. ಮಡಿಕೇರಿ ಕೆನರಾ ಬ್ಯಾಂಕ್ನಲ್ಲಿ ಹಾಗೂ ಈ ಬ್ಯಾಂಕ್ಗೆ ವಿಲೀನಗೊಂಡ ಭಾಗಮಂಡಲದಲ್ಲಿನ ಸಿಂಡಿಕೇಟ್ ಬ್ಯಾಂಕ್ನಲ್ಲಿದ್ದ ಸೇವಿಂಗ್ಸ್ ಖಾತೆ ಹಣವನ್ನು ದೋಚಲಾಗಿದೆ.
ಈ ಹಿಂದೆ ಕೊಡಗು ಜಿಲ್ಲಾ ಅಪರಾಧ ಪತ್ತೆದಳದಲ್ಲಿ ಅಧಿಕಾರಿಯಾಗಿದ್ದ ಮುರಳೀಧರ್ ಅವರು ಇದೀಗ ಹಾಸನದಲ್ಲಿ ಡಿವೈಎಸ್ಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮೇ ೨೦ರಂದು ಖದೀಮರು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಹಂತ ಹಂತವಾಗಿ ಹಣವನ್ನು ಮುರುಳೀಧರ್ ಅವರ ಖಾತೆಯಿಂದ ತಮ್ಮ ಖಾತೆಗೆ ಒಟ್ಟು ೧೫.೯೦ ಲಕ್ಷದಷ್ಟು ವರ್ಗಾಯಿಸಿಕೊಂಡಿದ್ದಾರೆ. ಈ ಕುರಿತು ಘಟನೆಯ ಹಿನ್ನೆಲೆ ಬಗ್ಗೆ ಮಾಹಿತಿ ಬಯಸಿದಾಗ ಹಾಸನದ ಡಿವೈಎಸ್ಪಿ ಮುರಳೀಧರ್ ಅವರು ಈ ಕೆಳಗಿನಂತೆ ವಿವರಿಸಿದರು.
“ತಾ.೨೦ರಂದು ನಾನು ಬೆಳಿಗ್ಗೆಯಿಂದಲೇ ತೀವ್ರ ಬಿಝಿಯಾಗಿದ್ದೆ. ಪ್ರಾಣಿ ದಯಾ ಸಂಘಕ್ಕೆ ಸಂಬAಧಿಸಿದ ಮೊಕದ್ದಮೆಯೊಂದರ ಹಿನ್ನೆಲೆಯಲ್ಲಿ ರಾಜ್ಯ ಉಚ್ಚನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕಾಗಿತ್ತು. ಬೆಳಿಗ್ಗೆ ೪ ಗಂಟೆಯಿAದಲೇ ಕಂಪ್ಯೂಟರ್ ಮುಂದೆ ಕುಳಿತು ಅದಕ್ಕೆ ಸಂಬAಧಿಸಿದ ವರದಿಗಳನ್ನು ಟೈಪ್ ಮಾಡುತ್ತಿದ್ದೆ. ಅಲ್ಲದೇ ಅದೇ ದಿನ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಒಂದು ವರ್ಗದ ವಿರುದ್ಧ ಕೆಲವರು ಪ್ರಚೋದನಾತ್ಮಕ ಬರಹಗಳನ್ನು ಪೋಸ್ಟ್ ಮಾಡಿದ್ದ ಹಿನ್ನೆಲೆಯಲ್ಲಿ ವರದಿ ತಯಾರಿಸಬೇಕಾಗಿತ್ತು. ರಾಜ್ಯ ಉಚ್ಚನ್ಯಾಯಾಲಯಕ್ಕೂ ಈ ಕುರಿತು ವರದಿ ಸಲ್ಲಿಸಬೇಕಾಗಿತ್ತು. ಅಲ್ಲದೇ ಈ ಸಂಬAಧ ಪ್ರಚೋದನೆಗೆ ಒಳಗಾಗಿ ನೊಂದಿದ್ದ ಒಂದು ವರ್ಗದ ಮಂದಿ ಪ್ರತಿಭಟನೆಯನ್ನು ಕೂಡ ಹಮ್ಮಿಕೊಂಡಿದ್ದರು. ಈ ಎಲ್ಲಾ ಪ್ರಕರಣಗಳ ತನಿಖೆಯಲ್ಲಿ ಮಗ್ನನಾಗಿ ನಾನು ಸಂಬAಧಿಸಿದ ವರದಿ ತಯಾರಿಸಲು ತೊಡಗಿಸಿಕೊಂಡಿದ್ದೆ. ಮಧ್ಯಾಹ್ನ ಸುಮಾರು ೧ ಗಂಟೆವರೆಗೂ ಇದೇ ಕಾರ್ಯದಲ್ಲಿ ಗಮನ ಹರಿಸಿದ್ದು, ರಾಜ್ಯ ಉಚ್ಚನ್ಯಾಯಾಲಯಕ್ಕೆ ತೆರಳಲು ತಯಾರಿ ಮಾಡಿಕೊಂಡಿದ್ದ ಸಂದರ್ಭ ಒಮ್ಮೆ ನನ್ನ
(ಮೊದಲ ಪುಟದಿಂದ) ಮೊಬೈಲನ್ನು ಅವಲೋಕಿಸಿದಾಗ ನನಗೆ ತೀವ್ರ ಆಘಾತ ಉಂಟಾಯಿತು. ಸುಮಾರು ೩೫ ಮೆಸೇಜ್ಗಳು ಬಂದಿದ್ದು, ಆ ಮೆಸೇಜ್ಗಳಲ್ಲಿ ಕೊಡಗಿನ ಬ್ಯಾಂಕ್ಗಳಲ್ಲಿದ್ದ ನನ್ನ ಹಣವನ್ನೆಲ್ಲಾ ಯಾರೋ ಡ್ರಾ ಮಾಡಿರುವುದು ಪತ್ತೆಯಾಯಿತು. ಒಂದಾದರೊAದರAತೆ ಬಂದಿದ್ದ ೩೫ ಮೆಸೇಜ್ಗಳಲ್ಲಿ ೧೦ ಸಾವಿರದಿಂದ ಪ್ರಾರಂಭಗೊAಡು ೫೦ ಸಾವಿರದವರೆಗೂ ಆಗಿಂದಾಗ್ಗೆ ಡ್ರಾ ಮಾಡಿ ಸುಮಾರು ರೂ. ೧೫.೯೦ ಲಕ್ಷ ಹಣ ನನ್ನ ಖಾತೆಯಿಂದ ಮಾಯವಾಗಿತ್ತು. ಬೆಳಿಗ್ಗೆ ೧೦ ಗಂಟೆಯಿAದ ಮಧ್ಯಾಹ್ನ ೧ ರವರೆಗೆ ಈ ದುಷ್ಕೃತ್ಯ ನಡೆದಿದೆ. ಮಡಿಕೇರಿಯ ಕೆನರಾ ಬ್ಯಾಂಕ್ ಖಾತೆಯಿಂದ ಸುಮಾರು ರೂ. ೧೨ ಲಕ್ಷ ಹಾಗೂ ಕೆನರಾ ಬ್ಯಾಂಕ್ಗೆ ವಿಲೀನಗೊಂಡಿದ್ದ ಸಿಂಡಿಕೇಟ್ ಬ್ಯಾಂಕ್ ಖಾತೆಯಲ್ಲಿದ್ದ ಸುಮಾರು ರೂ. ೪ ಲಕ್ಷ ಹಣ ಮಾಯವಾಗಿತ್ತು.
ಈ ಬಗ್ಗೆ ಮಡಿಕೇರಿಯ ಕೆನರಾ ಬ್ಯಾಂಕ್ ವ್ಯವಸ್ಥಾಪಕರಿಗೆ ತಕ್ಷಣ ದೂರವಾಣಿ ಮೂಲಕ ದೂರು ನೀಡಿ ಹಾಸನದ ಸೈಬರ್ ಪೊಲೀಸರಿಗೂ ಪುಕಾರು ನೀಡಿದೆ. ಅಲ್ಲಿಂದ ಬ್ಯಾಂಕ್ ಖಾತೆ ವ್ಯವಹಾರವನ್ನು ಸ್ಥಗಿತಗೊಳಿಸಲಾಯಿತು.
ಇನ್ಶುರೆನ್ಸ್ ಹಣ
“ಈ ಹಿಂದೆ ೫೫ ವರ್ಷಕ್ಕೆ ನಿವೃತ್ತಿ ವಯೋಮಿತಿ ಇತ್ತು. ಆಗಿನ ಸಂದರ್ಭ ಪೊಲೀಸರಿಗೆ ಕರ್ನಾಟಕ ಸರ್ಕಾರದ ಇನ್ಶುರೆನ್ಸ್ ಯೋಜನೆ ಇತ್ತು. ನನ್ನ ಖಾತೆಯಿಂದ ಪ್ರತಿ ತಿಂಗಳು ವೇತನದಿಂದ ಆ ಇನ್ಶುರೆನ್ಸ್ ಖಾತೆಗೆ ನಿಗದಿತ ಹಣ ಹೋಗುತ್ತಿತ್ತು. ಕಳೆದ ನವಂಬರ್ನಲ್ಲಷ್ಟೆ ನನಗೆ ೫೫ ತುಂಬಿದ ಹಿನ್ನೆಲೆಯಲ್ಲಿ ಇನ್ಶುರೆನ್ಸ್ ಹಣವನ್ನು ಮಡಿಕೇರಿಯ ಬ್ಯಾಂಕ್ ಖಾತೆಗೆ ಸರ್ಕಾರದಿಂದ ವರ್ಗಾಯಿಸಲಾಗಿತ್ತು. ಅದೇ ರೀತಿ ಭಾಗಮಂಡಲದಲ್ಲಿ ನನ್ನ ಪೂರ್ವಿಕರ ಕಾಲದಿಂದಲೂ ಬೆಳೆದಿದ್ದ ಏಲಕ್ಕಿ ಮಾರಾಟದ ಹಣ ಇತ್ಯಾದಿಯನ್ನು ಆಗ ಇದ್ದ ಸಿಂಡಿಕೇಟ್ ಬ್ಯಾಂಕ್ನಲ್ಲಿ ಇರಿಸಲಾಗಿತ್ತು. ಬಳಿಕ ಸಿಂಡಿಕೇಟ್ ಬ್ಯಾಂಕ್ ಕೆನರಾ ಬ್ಯಾಂಕ್ನೊAದಿಗೆ ವಿಲೀನಗೊಂಡಾಗ ಕೆನರಾ ಬ್ಯಾಂಕ್ ಅಪ್ಲಿಕೇಷನ್ ನನ್ನ ಮೊಬೈಲ್ಗೆ ಅಳವಡಿಸಲಾಗಿತ್ತು. ಭಾಗಮಂಡಲದ ಹಣವನ್ನು ಅದಕ್ಕೆ ಕೆನರಾ ಬ್ಯಾಂಕ್ನವರು ವರ್ಗಾಯಿಸಿದ್ದರು. ಕಳೆದ ಕೆಲವು ವರ್ಷಗಳ ಹಿಂದೆ ಬಹುತೇಕ ಕೊಡಗಿನ ಪೊಲೀಸ್ ಇಲಾಖೆ ಸಿಬ್ಬಂದಿಗಳ ಹಣ ವಹಿವಾಟಿನ ಖಾತೆಗಳನ್ನು ಕೆನರಾ ಬ್ಯಾಂಕ್ನಲ್ಲಿಯೆ ತೆರೆಯಲಾಗಿತ್ತು. ಅದೇ ರೀತಿ ನಾನು ಕೂಡ ಅಲ್ಲಿಯೇ ಖಾತೆ ತೆರೆದಿದ್ದೆ. ಈಗ ಕೆಲವು ದಿನಗಳ ಹಿಂದೆ ನನ್ನ ಗಮನಕ್ಕೆ ಬಂದAತೆ ಹಾಸನ, ಶಿವಮೊಗ್ಗ, ಬೇಲೂರು ಮೊದಲಾದ ಕಡೆ ಅಲ್ಲಲ್ಲಿನ ಕೆನರಾ ಬ್ಯಾಂಕ್ನಲ್ಲಿ ಕೆಲವು ಗ್ರಾಹಕರ ಖಾತೆಗಳಿಗೆ ದುಷ್ಕರ್ಮಿಗಳು ಲಗ್ಗೆ ಹಾಕಿ ಹಣವನ್ನು ಡ್ರಾ ಮಾಡಿರುವುದು ಕಂಡು ಬಂದಿದೆ. ಕೆನರಾ ಬ್ಯಾಂಕ್ ಕೂಡ ಈ ಬಗ್ಗೆ ಜಾಗ್ರತೆ ವಹಿಸಬೇಕಾಗಿದೆ. ಏಕೆಂದರೆ, ಗ್ರಾಹಕರು ತಮ್ಮ ಬ್ಯಾಂಕ್ ಖಾತೆ ತೆರೆಯುವಾಗ ತಮ್ಮೆಲ್ಲ ಖಾಸಗಿ ಮಾಹಿತಿ ದಾಖಲೆಗಳನ್ನು ಬ್ಯಾಂಕ್ಗೆ ಸಲ್ಲಿಸಿರುತ್ತಾರೆ. ಬ್ಯಾಂಕ್ನ ಮಾನಿಟರ್ ಕಮಿಟಿ ಗ್ರಾಹಕರ ಖಾತೆಯಿಂದ ಎಡೆÀಬಿಡದೆ ಹಣ ವರ್ಗಾವಣೆಗೊಂಡಾಗ ಎಚ್ಚರಗೊಳ್ಳಬೇಕಾಗುತ್ತದೆ. ಅಲ್ಲದೆ, ಗ್ರಾಹಕರ ಖಾಸಗಿ ಮಾಹಿತಿಗಳು ಬ್ಯಾಂಕ್ ಒಳಗಿನ ವ್ಯವಸ್ಥೆಯಲ್ಲಿ ಬಹಿರಂಗಗೊಳ್ಳದAತೆ ಡಿಜಿಟಲ್ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.
“ಡಿಜಿಟಲ್ ವ್ಯವಸ್ಥೆಯಲ್ಲಿನ ಲೋಪ ದೋಷಗಳಿಂದಾಗಿ, ದುಷ್ಕೃತ್ಯಗಳಿಂದಾಗಿ ಡಿಜಿಟಲ್ ವ್ಯವಹಾರದಲ್ಲಿ ಬ್ಯಾಂಕ್ಗಳಲ್ಲಿ ಹಣವಿರಿಸುವುದೇ ಆತಂಕಕಾರಿ ಎನ್ನುವ ಬೆಳವಣಿಗೆ ಕಂಡು ಬಂದಿದೆ. ಇದೀಗ ಕೆನರಾ ಬ್ಯಾಂಕ್ ಆಡಳಿತ ವರ್ಗವೂ ಕೂಡ ಸೂಕ್ತ ಪರಿಹಾರೋಪಾಯವನ್ನು ಕಲ್ಪಿಸುವ ಭರವಸೆ ನೀಡಿದೆ.” ಎಂದು ಮುರಳೀಧರ್ ವಿವರಿಸಿದರು. ವರದಿ: “ಚಕ್ರವರ್ತಿ”