ಮಡಿಕೇರಿ, ಮೇ ೨೩: ದಕ್ಷಿಣ ಕೊಡಗಿನ ದೇವರಪುರದಲ್ಲಿ ನಡೆಯುವ ವಾರ್ಷಿಕ ಬೇಡು ಹಬ್ಬ ಎಲ್ಲರ ಗಮನ ಸೆಳೆಯುತ್ತ ಬಂದಿದೆ. ದಕ್ಷಿಣ ಕೊಡಗು ಭಾಗದಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದ ವೇಷಧಾರಿಗಳು ಇದೀಗ ಜಿಲ್ಲೆಯ ವಿವಿಧೆಡೆಗಳಲ್ಲಿ ಕಂಡು ಬರುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಮಡಿಕೇರಿಯಲ್ಲಿಯೂ ಬಗೆ ಬಗೆ ವೇಷ ತೊಟ್ಟ ಪುರುಷರು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಜನರಿಂದ ಹಣ ಪಡೆಯುತ್ತಾರೆ.

ಈ ವರ್ಷವೂ ವೈವಿಧ್ಯಮಯ ವೇಷಭೂಷಣ ತೊಟ್ಟವರು ನಗರದಲ್ಲಿ ಕಂಡು ಬಂದರು. ಮೈಗೆ ಬಣ್ಣ, ಮಹಿಳೆಯರ ಉಡುಪು ಧರಿಸಿ ಡ್ರಂ ಬಾರಿಸುತ್ತ, ಹೆಜ್ಜೆ ಹಾಕುತ್ತ ಜನರನ್ನು ಬೈಯುತ್ತ ಹಣಕ್ಕೆ ಬೇಡಿಕೆಯಿಟ್ಟರು.