ಅಮ್ಮತ್ತಿ, ಮೇ ೨೨: ಎಎಫ್‌ಸಿ ಕ್ಲಬ್ ವತಿಯಿಂದ ೪೦ ವರ್ಷ ಮೇಲ್ಪಟ್ಟವರಿಗೆ ನಡೆದ ತಾಲೂಕು ಮಟ್ಟದ ಲೆಜೆಂಡ್ ಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಭಜರಂಗಿ ಒಂಟಿಯAಗಡಿ ತಂಡ ಪ್ರಥಮ ಸ್ಥಾನ ಪಡೆದು ಚಾಂಪಿಯನ್ನಾಗಿ ಹೊರಹೊಮ್ಮಿದೆ. ವೀರಾಜ ಪೇಟೆಯ ಆಕ್ಸ್ಫರ್ಡ್ ತಂಡ ದ್ವಿತೀಯ ಬಹುಮಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಅಮ್ಮತ್ತಿ ಪ್ರೌಢಶಾಲಾ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆದ ಪಂದ್ಯಾಟದಲ್ಲಿ ವೀರಾಜಪೇಟೆ ತಾಲೂಕಿನ ಸುಮಾರು ೮ ತಂಡಗಳು ಪಾಲ್ಗೊಂಡಿದ್ದವು. ಭಾನುವಾರ ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಮುಖ್ಯ ಅತಿಥಿ ಬೊಮ್ಮಂಡ ರೋಷನ್ ಟ್ರೋಫಿ ಮತ್ತು ನಗದು ಬಹುಮಾನವನ್ನು ವಿತರಿಸಿದರು. ನಂತರ ಮಾತನಾಡಿದ ಅವರು, ೪೦ ವರ್ಷ ಮೇಲ್ಪಟ್ಟವರಿಗೆ ಮಾತ್ರ ಪಂದ್ಯಾವಳಿ ಮಾಡಿ ಹಿರಿಯ ಕ್ರೀಡಾಪಟುಗಳಿಗೆ ಉತ್ತೇಜನ ನೀಡಿರುವುದಕ್ಕೆ ಆಯೋಜಕರಿಗೆ ಅಭಿನಂದನೆ ಸಲ್ಲಿಸಿದರು ಹಾಗೂ ಮುಂದಿನ ವರ್ಷ ಇನ್ನು ಹೆಚ್ಚಿನ ತಂಡಗಳನ್ನು ಒಗ್ಗೂಡಿಸಿ ಪಂದ್ಯಾಟ ನಡೆಸಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ವೈಯಕ್ತಿಕವಾಗಿ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಬಹುಮಾನ ವಿತರಿಸಲಾಯಿತು. ಮುನ್ನಡೆ ಆಟಗಾರನಾಗಿ ಬೊಮ್ಮಂಡ ರೋಶನ್, ಉತ್ತಮ ಹಿನ್ನಡೆ ಆಟಗಾರನಾಗಿ ಒಂಟಿ ಯಂಗಡಿಯ ನವೀನ್, ಸರಣಿ ಪುರುಷೋತ್ತಮನಾಗಿ ರಜಾಕ್ ವೀರಾಜಪೇಟೆ, ಉತ್ತಮ ಗೋಲ್ ಕೀಪರ್ ಆಗಿ ವೀರಾಜಪೇಟೆಯ ಕುಮಾರ್ ಹಾಗೂ ಮೊಯ್ದಿನ್ ಒಂಟಿಯAಗಡಿ ಅತಿ ಹೆಚ್ಚು ಗೋಲ್ ಬಾರಿಸಿದ ಆಟಗಾರನಾಗಿ ವೈಯಕ್ತಿಕ ಬಹುಮಾನವನ್ನು ಪಡೆದುಕೊಂಡರು. ಪಂದ್ಯಾವಳಿಯ ಉತ್ತಮ ತಂಡವಾಗಿ ಅಮ್ಮತ್ತಿಯ ತಂಡರ್ಸ್ ಸ್ಟೆçöÊಕರ್ಸ್ ತಂಡಕ್ಕೆ ಬಹುಮಾನ ನೀಡಲಾಯಿತು. ಈ ಸಂದರ್ಭ ಕ್ಲಬ್ ಅಧ್ಯಕ್ಷ ಹೆರಾಲ್ಡ್, ಪಂದ್ಯಾಟ ಆಯೋಜಕರಾದ ಸಜೀರ್ ಅಮ್ಮತ್ತಿ ಸೇರಿದಂತೆ ಅಮ್ಮತ್ತಿ ಸ್ಪೋರ್ಟ್ಸ್ ಕ್ಲಬ್ ಪದಾಧಿಕಾರಿಗಳು, ಸದಸ್ಯರು ಇದ್ದರು.