ಮಡಿಕೇರಿ, ಮೇ ೨೩: ಕೊಡಗು ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ಏರ್ಪಡಿಸಲಾಗಿರುವ ಗೌಡ ಫುಟ್ಬಾಲ್ ಪಂದ್ಯಾವಳಿಯ ಪ್ರಯುಕ್ತ ನಾಲ್ಕು ಗ್ರಾಮಗಳಿಗಾಗಿ ನಡೆದ ಯುನಿಟಿ ಕಪ್ ಪಂದ್ಯಾವಳಿಯಲ್ಲಿ ಕಟ್ಟೆಮಾಡು ಹಾಗೂ ಅರೆಕಾಡು ಗ್ರಾಮ ತಂಡಗಳು ಫೈನಲ್ ಹಂತಕ್ಕೆ ಪ್ರವೇಶಿಸಿವೆ.
ಗ್ರಾಮಗಳ ನಡುವೆ ನಡೆಸಲಾಗುತ್ತಿರುವ ಮೂರನೇ ವರ್ಷದ ಯುನಿಟಿ ಕಪ್ ಪಂದ್ಯಾವಳಿಯ ಮೊದಲ ಪಂದ್ಯ ಮರಗೋಡು ಹಾಗೂ ಕಟ್ಟೆಮಾಡು ಗ್ರಾಮಗಳ ನಡುವೆ ನಡೆಯಿತು. ಇದರಲ್ಲಿ ಕಟ್ಟೆಮಾಡು ಹಾಗೂ ಮರಗೋಡು ತಂಡಗಳು ೨ ಗೋಲುಗಳ ಸಮಬಲ ಸಾಧಿಸಿದವು.
ಎರಡನೇ ಪಂದ್ಯ ಅರೆಕಾಡು ಹಾಗೂ ಹೊಸ್ಕೇರಿ ಗ್ರಾಮದ ತಂಡಗಳ ನಡುವೆ ನಡೆಯಿತು. ಇದರಲ್ಲಿ ಅರೆಕಾಡು ತಂಡವು ೨/೧ ಗೋಲುಗಳಿಂದ ಮೇಲುಗೈ ಸಾಧಿಸಿತು.
ಮೂರನೇ ಪಂದ್ಯದಲ್ಲಿ ಹೋಸ್ಕೇರಿ ಹಾಗೂ ಕಟ್ಟೆಮಾಡು ತಂಡಗಳ ನಡುವೆ ನಡೆದು ಎರಡು ತಂಡಗಳು ಯಾವುದೇ ಗೋಲು ದಾಖಲಿಸದೆ ಸಮಬಲ ಸಾಧಿಸಿತು.
ನಾಲ್ಕನೇ ಪಂದ್ಯ ಅರೆಕಾಡು ಹಾಗೂ ಮರಗೋಡು ತಂಡಗಳ ನಡುವೆ ನಡೆಯಿತು. ಇದರಲ್ಲಿ ಅರೆಕಾಡು ತಂಡವು ೧ ಗೋಲು ಹೊಡೆಯುವದರ ಮುಖಾಂತರ ಮೇಲುಗೈ ಸಾಧಿಸಿತು.
ಐದನೇ ಪಂದ್ಯ ಮರಗೋಡು ಹಾಗೂ ಹೊಸ್ಕೇರಿ ತಂಡಗಳ ನಡುವೆ ನಡೆಯಿತು. ಇದರಲ್ಲಿ ಹೊಸ್ಕೇರಿ ತಂಡವು ೧ ಗೋಲು ಹೊಡೆಯುವದರ ಮುಖಾಂತರ ಮೇಲುಗೈ ಸಾಧಿಸಿತು.
ಆರನೇ ಪಂದ್ಯ ಅರೆಕಾಡು ಹಾಗೂ ಕಟ್ಟೆಮಾಡು ತಂಡಗಳ ನಡುವೆ ನಡೆಯಿತು. ಇದರಲ್ಲಿ ಕಟ್ಟೆಮಾಡು ತಂಡ ೩-೧ ಗೋಲುಗಳಿಂದ ಮುನ್ನಡೆ ಸಾಧಿಸಿತು.
ತಾ.೨೬ ರಂದು ನಡೆಯುವ ಫೈನಲ್ ಪಂದ್ಯದಲ್ಲಿ ಕಟ್ಟೆಮಾಡು ಹಾಗೂ ಅರೆಕಾಡು ತಂಡಗಳು ಸೆಣೆಸಾಡಲಿವೆ.