ಎಫ್.ಎಂ.ಸಿ. ಕಾಲೇಜಿಗೆ ಪ್ರಶಸ್ತಿ

ಗೋಣಿಕೊಪ್ಪಲು, ಮೇ ೨೩: ಸೋಲು-ಗೆಲುವು ಕ್ರೀಡೆಯ ಎರಡು ಕಣ್ಣುಗಳಂತೆ. ಆದರೆ ಕ್ರೀಡೆಯಲ್ಲಿ ಭಾಗವಹಿಸಿದ್ದೆ ಎಂಬ ಮನೋಭಾವ ಕ್ರೀಡಾಪಟುವಿನ ಮನದಲ್ಲಿರಬೇಕು ಎಂದು ಅಂರ‍್ರಾಷ್ಟಿçÃಯ ರಗ್ಬಿ ಪಟು ಮತ್ತು ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿ ಮಾದಂದ ತಿಮ್ಮಯ್ಯ ಅಭಿಪ್ರಾಯಪಟ್ಟರು.

ಸಂತ ಅನ್ನಮ್ಮ ಪದವಿ ಕಾಲೇಜು ವೀರಾಜಪೇಟೆಯ ಬಿ.ಬಿ.ಎ. ವಿಭಾಗ ಮತ್ತು ದೈಹಿಕ ಶಿಕ್ಷಣ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಪೊನ್ನಂಪೇಟೆ ಹಾಕಿ ಟರ್ಫ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ ಅಂತರ್ ಕಾಲೇಜು ರಾಜ್ಯಮಟ್ಟದ ಹಾಕಿ ಪಂದ್ಯಾಟದ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಫೈನಲ್ ಪಂದ್ಯಾಟವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ಸಂತ ಅನ್ನಮ್ಮ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಅವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಸಂಸ್ಥೆಯು ಶೈಕ್ಷಣಿಕ ಮತ್ತು ಕ್ರೀಡೆಗೆ ಸಮಾನ ಅವಕಾಶ ಕಲ್ಪಿಸಿದೆ. ಈ ನಿಟ್ಟಿನಲ್ಲಿ ದೈಹಿಕ ಶಿಕ್ಷಣ ವಿಭಾಗ ಮತ್ತು ಬಿ.ಬಿ.ಎ. ವಿಭಾಗ ಅಂತರ್ ಕಾಲೇಜು ಹಾಕಿ ಕ್ರೀಡಾಕೂಟವನ್ನು ಹಮ್ಮಿಕೊಂಡಿದೆ. ಅಂತರ್ ಕಾಲೇಜುಗಳ ವಿದ್ಯಾರ್ಥಿಗಳು ಪರಸ್ಪರ ಬೆರೆತು ಸ್ನೇಹ ವಿನಿಮಯ ಮಾಡಿಕೊಳ್ಳಬೇಕು ಎನ್ನುವ ಹಿನ್ನೆಲೆಯಲ್ಲಿ ಕ್ರೀಡಾಕೂಟ ಆಯೋಜಿಸಲಾಗಿದೆ. ರಾಜ್ಯದ ವಿವಿಧಡೆಗಳಿಂದ ಆಗಮಿಸಿದ ೧೬ ಕಾಲೇಜಿನ ೧೨೪ ವಿದ್ಯಾರ್ಥಿಗಳು ಕ್ರೀಡಾ ಉತ್ಸವದಲ್ಲಿ ಭಾಗವಹಿಸಿದ್ದಾರೆ. ಇದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿನ ವ್ಯವಸ್ಥಾಪಕ ಮೊದಲೈ ಮುತ್ತು ಅವರು ಕ್ರೀಡೆಗಳು ಸಾಮರಸ್ಯದ ಸಂಕೇತವಾಗಿದೆ. ಸಮಾನ ವಯಸ್ಕರ ಸಮಾನ ಮನೋಭಾವದ ವಿದ್ಯಾರ್ಥಿಗಳು ಕ್ರೀಡಾ ಸ್ಫೂರ್ತಿಯಿಂದ ಭಾಗವಹಿಸ ಬೇಕಾಗಿದೆ. ಕ್ರೀಡೆಗಳಲ್ಲಿ ಸಾಧನೆಗೈದು ದೇಶಕ್ಕೆ ಮುಡಿಪಾಗಿ ದೇಶದ ಹೆಸರನ್ನು ಉನ್ನತ್ತೀಕರಿಸಬೇಕು ಎಂದರು. ಆಯೋಜಕರಾದ ಮತ್ತು ಬಿ.ಬಿ.ಎ ವಿಭಾಗ ಮುಖ್ಯಸ್ಥೆ ಹೇಮಾ ಬಿ.ಡಿ., ದೈಹಿಕ ಶಿಕ್ಷಣ ನಿರ್ದೇಶಕರಾದ ಬಿ.ವಿ. ರಾಜ ರೈ, ಕ್ರೀಡಾ ನಾಯಕ ಧನಿಶ್ ಉಪಸ್ಥಿತರಿದ್ದರು. ಸಂತ ಅನ್ನಮ್ಮ ಕಾಲೇಜಿನ ಉಪನ್ಯಾಸಕರಾದ ದೃಶ್ಯ ಸ್ವಾಗತಿಸಿದರು. ದೇಚಮ್ಮ ವಂದಿಸಿದರು.

ಪAದ್ಯಾಟದಲ್ಲಿ ಒಟ್ಟು ೧೬ ಕಾಲೇಜುಗಳ ೧೨೪ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಥಮ ಸೆಮಿಫೈನಲ್ ಪಂದ್ಯಾಟವು ಕಾವೇರಿ ಕಾಲೇಜು ವೀರಾಜಪೇಟೆ ಎ ತಂಡ ಮತ್ತು ಮೂರ್ನಾಡು ಪ್ರಥಮ ಕಾಲೇಜು ಎ ತಂಡಗಳ ಮಧ್ಯೆ ನಡೆದು ೨-೦ ಗೋಲುಗಳಿಂದ ಮೂರ್ನಾಡು ಕಾಲೇಜು ಫೈನಲ್ ಪ್ರವೇಶ ಮಾಡಿತು.

ದ್ವಿತೀಯ ಸೆಮಿಫೈನಲ್ ಪಂದ್ಯಾಟವು ಕಾವೇರಿ ಕಾಲೇಜು ಬಿ ತಂಡ ಮತ್ತು ಎಫ್.ಎಂ.ಸಿ. ಕಾಲೇಜು ಮಡಿಕೇರಿ ಎ ತಂಡಗಳ ಮಧ್ಯೆ ನಡೆದು ೩-೦ ಗೋಲುಗಳಿಂದ ಕಾವೇರಿ ಕಾಲೇಜು ತಂಡವನ್ನು ಮಣಿಸಿ ಫೈನಲ್‌ಗೆ ಅರ್ಹತೆ ಪಡೆಯಿತು. ಫೈನಲ್ ಪಂದ್ಯಾಟವು ಹಲವು ರೋಚಕತೆ ಗಳಿಗೆ ಎಡೆಮಾಡಿತು. ಎಫ್.ಎಂ.ಸಿ. ಕಾಲೇಜು ಎ ಮಡಿಕೇರಿ ತಂಡ ಮತ್ತು ಮೂರ್ನಾಡು ಪ್ರಥಮ ದರ್ಜೆ ಕಾಲೇಜು ಎ ತಂಡಗಳ ಮಧ್ಯೆ ಪಂದ್ಯಾಟ ನಡೆಯಿತು. ಪಂದ್ಯಾಟದ ಪ್ರಥಮಾರ್ದದಲ್ಲಿ ಮೂರು ಗೋಲು ಗಳಿಸಿದ ಮಡಿಕೇರಿ ಎಫ್.ಎಂ.ಸಿ. ಕಾಲೇಜು ದ್ವಿತೀಯಾರ್ಧದಲ್ಲಿ ಗೋಲು ಗಳಿಸಲು ಶಕ್ತವಾಗಲಿಲ್ಲ. ಸಮಬಲ ವಾದ್ದರಿಂದ ತೀರ್ಪುಗಾರರು ಪೆನಾಲ್ಟಿ ಸ್ಟೊçÃಕ್‌ಗೆ ಮೊರೆ ಹೋದರು. ಪೆನಾಲ್ಟಿ ಸ್ಟೊçÃಕ್‌ನಲ್ಲಿ ೬-೫ ಗೋಲುಗಳಿಂದ ಎಫ್.ಎಂ.ಸಿ ಕಾಲೇಜು ಮಡಿಕೇರಿ ತಂಡ ಜಯಗಳಿಸಿತು. ವಿಜೇತ ತಂಡಗಳಿಗೆ ಟ್ರೋಫಿ ಮತ್ತು ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಪಂದ್ಯಾವಳಿಯ ಉತ್ತಮ ಗೋಲು ಕೀಪರ್ ಪ್ರಶಸ್ತಿಯನ್ನು, ಎಫ್.ಎಂ.ಸಿ ಕಾಲೇಜಿನ ಯಶ್ವಂತ್, ಪಂದ್ಯ ಪುರುಶೋತ್ತಮ ಪ್ರಶಸ್ತಿಯನ್ನು ಮೂರ್ನಾಡು ಪ್ರಥಮ ದರ್ಜೆ ಕಾಲೇಜಿನ ಸುಬ್ರಮಣಿ, ಸರಣಿ ಪುರುಶೋತ್ತಮ ಪ್ರಶಸ್ತಿಯನ್ನು ಎಫ್.ಎಂ.ಸಿ ಕಾಲೇಜಿನ ಸುಗುಣ, ಮತ್ತು ಶಿಸ್ತುಬದ್ಧ ಆಟಗಾರನಾಗಿ ಕಾವೇರಿ ಕಾಲೇಜಿನ ಪೊನ್ನಣ್ಣ ಅವರುಗಳು ವೈಯಕ್ತಿಕ ಪ್ರಶಸ್ತಿಗಳಿಗೆ ಪಾತ್ರರಾದರು.

ಕುಪ್ಪಂಡ ದಿಲನ್, ಕೋಡಿಮಣಿಯಂಡ ಅಪ್ಪಣ್ಣ, ಅಪ್ಪಚೊಟ್ಟಳಂಡ ಅಯ್ಯಪ್ಪ ಮತ್ತು ಕಾಳಿಮಾಡ ಕಿರಣ್ ಅವರುಗಳು ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು. ಮೂಕಚಂಡ ಬೊಳ್ಳಮ್ಮ ಅವರು ವೀಕ್ಷಕ ವಿವರಣೆಯನ್ನು ನೀಡಿದರು.

ಅಂತರ್ ಕಾಲೇಜು ಹಾಕಿ ಪಂದ್ಯಾಟದ ವೇಳೆಯಲ್ಲಿ ಸಂತ ಅನ್ನಮ್ಮ ಕಾಲೇಜಿನ ಬಿ.ಬಿ.ಎ ವಿಭಾಗ ಮತ್ತು ದೈಹಿಕ ವಿಭಾಗದ ಉಪನ್ಯಾಸಕರು, ಪದವಿ ವಿಭಾಗದ ಎಲ್ಲಾ ಉಪನ್ಯಾಸಕರು, ವಿದ್ಯಾರ್ಥಿಗಳು, ವಿವಿಧ ಕಾಲೇಜಿನ ಉಪನ್ಯಾಸಕರು ದೈಹಿಕ ಶಿಕ್ಷಕರು, ತಾಂತ್ರಿಕ ವಿಭಾಗದ ಸದಸ್ಯರು, ಕ್ರೀಡಾ ಪ್ರೇಮಿಗಳು ಹಾಜರಿದ್ದರು.