ಮಡಿಕೇರಿ. ಮೇ ೨೨: ಮರಗೋಡು ವಿನ ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ನಡೆಯುತ್ತಿರುವ ಏಳನೇ ವರ್ಷದ ಗೌಡ ಫುಟ್ಬಾಲ್ ಟ್ರೋಫಿ ಪಂದ್ಯಾವಳಿಯ ನಾಲ್ಕನೇ ದಿನದ ಪಂದ್ಯಾಟದಲ್ಲಿ ಕೊಳಂಬೆ ತಂಡ ಪ್ರಿ ಕ್ವಾರ್ಟರ್ ಹಂತಕ್ಕೆ ಪ್ರವೇಶ ಪಡೆದುಕೊಂಡಿದೆ.
ಇಂದು ನಡೆದ ಪಂದ್ಯಾವಳಿಯಲ್ಲಿ ಎಡಿಕೇರಿ ತಂಡ ಚೆರಿಯಮನೆ ತಂಡವನ್ನು ೧-೬ ಗೋಲಿನಿಂದ ಸೋಲಿಸಿತು. ಚೆರಿಯಮನೆ ತಂಡದ ಪರ ಚೇತನ್ ಹಾಗೂ ಎಡಿಕೇರಿ ತಂಡದ ಪರ ಗಗನ್ ೩, ರೋಷನ್, ಪ್ರಶಾಂತ್ ಹಾಗೂ ವೇದಾಂತ್ ತಲಾ ೧ ಗೋಲು ಬಾರಿಸಿದರು.
ಕೊಳಂಬೆ ತಂಡ ಪರಿಚನ ತಂಡವನ್ನು ೨-೩ ಗೋಲಿನಿಂದ ಸೋಲಿಸಿತು. ಪರಿಚನ ತಂಡದ ಪರ ದೀಕ್ಷೆ ಹಾಗೂ ಲೋಕೇಶ್ ತಲಾ ೧ ಗೋಲು, ಕೊಳಂಬೆ ತಂಡದ ಪರ ಜಗನ್, ಕವನ್ ಹಾಗೂ ಗಿರೀಶ್ ಗೊಲು ಬಾರಿಸಿದರು.
ಬಿದ್ರುಪಣೆ ಹಾಗೂ ಪಾರೇರ ತಂಡಗಳ ನಡುವಿನ ಪಂದ್ಯದಲ್ಲಿ ಯಾವದೇ ಗೋಲು ದಾಖಲಾಗದ ಹಿನ್ನೆಲೆಯಲ್ಲಿ ಟೈ ಬ್ರೇಕರ್ ನೀಡಲಾಯಿತು. ಇದರಲ್ಲಿ ಬಿದ್ರುಪಣೆ ಗೆದ್ದು ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು. ಬಡುವಂಡ್ರ ತಂಡ ಕೋಟೆರ ತಂಡವನ್ನು ೫-೦ ಗೋಲಿನಿಂದ ಸೋಲಿಸಿತು.
ಬಡುವಂಡ್ರ ತಂಡದ ಪರ ದುಶಾಂತ್ ೨, ಭರತ್ ೨, ಸುಜಯ್ ೧ ಗೋಲು ಬಾರಿಸಿದರು. ನಂಗಾರು ತಂಡ ಚೆಟ್ಟಿಮಾಡವನ್ನು ೩-೧ ಗೋಲಿ ನಿಂದ ಸೋಲಿಸಿತು. ನಂಗಾರು ತಂಡದ ಪರ ಅಭಿಷೇಕ್, ಚೇತು ಹಾಗೂ ಮೋಹಿತ್, ಚೆಟ್ಟಿಮಾಡ ತಂಡದ ಪರ ಹರ್ಷ ೧ ಗೋಲು ದಾಖಲಿಸಿದರು.
ಕಾಂಗೀರ ತಂಡ ಬಿಳಿಯಂಡ್ರ ತಂಡವನ್ನು ೩- ೦ ಗೋಲಿನಿಂದ ಮಣಿಸಿತು. ಕಾಂಗೀರ ತಂಡದ ಪರ ಯತಿನ್, ನಕುಲ್ ಹಾಗೂ ಚೇತನ್ ಗೋಲು ಬಾರಿಸಿದರು. ಬೊಳ್ತಾಜಿರ ತಂಡ ಹುದೇರಿ ತಂಡವನ್ನು ೬-೦ ಗೋಲಿನಿಂದ ಸೋಲಿಸಿತು. ಬೊಳ್ತಾ ಜಿರ ತಂಡದ ಪರ ಪೃಥ್ವಿ ೩, ಗಗನ್ ೨, ಸಚಿನ್ ೧ ಗೋಲು ಬಾರಿಸಿದರು. ನಂತರ ನಡೆದ ಪಂದ್ಯದಲ್ಲಿ ಎಡಿಕೇರಿ ಹಾಗೂ ಕೊಳಂಬೆ ತಂಡಗಳು ೧-೧ ಗೋಲುಗಳ ಸಮಬಲ ಸಾಧಿಸಿದವು.
ನಂತರ ನೀಡಲಾದ ಟೈ ಬ್ರೇಕರ್ ನಲ್ಲಿ ಕೊಳಂಬೆ ಗೆದ್ದು ಪ್ರಿ ಕ್ವಾರ್ಟರ್ ಹಂತಕ್ಕೆ ಪ್ರವೇಶ ಪಡೆಯಿತು. ಕಡ್ಯದ ತಂಡ ಕಾನಡ್ಕ ತಂಡವನ್ನು ೫-೦ ಗೋಲುಗಳ ಅಂತರದಿAದ ಸೋಲಿಸಿತು. ಕಡ್ಯದ ತಂಡದ ಪರ ವೈಶಾಕ್ ೩, ಕಾರ್ತಿಕ್ ೨ ಗೋಲು ದಾಖಲಿಸಿದರು. ಬೈಲೇರ ತಂಡ ಮಗೇರನ ತಂಡವನ್ನು ೩-೧ ಗೋಲುಗಳ ಅಂತರದಿAದ ಮಣಿಸಿತು.
ಮಗೇರನ ತಂಡದ ಪರ ಅಜಿತ್, ಬೈಲೇರ ತಂಡದ ಪರ ಹರ್ಷಿತ್ ೨, ರೋಹಿತ್ ೧ ಗೋಲು ಬಾರಿಸಿದರು.