ಸುಂಟಿಕೊಪ್ಪ, ಮೇ ೨೩: ಕೆದಕಲ್ ಸಮೀಪದ ನೇಗದಾಳು ಗ್ರಾಮದಲ್ಲಿರುವ ಸಾವಿರ ವರ್ಷಗಳ ಇತಿಹಾಸವಿರುವ ಶ್ರೀ ಮಹಾದೇವ ಈಶ್ವರ ದೇವಾಲಯದ ೮ನೇ ವರ್ಷದ ವಾರ್ಷಿಕೋತ್ಸವ ವಿಜೃಂಭಣೆಯಿAದ ನೆರವೇರಿತು. ದಿನದ ಅಂಗವಾಗಿ ಕೆರೆಯಿಂದ ಗಂಗೆ ತಂದು ಕುಂಭಾಭಿಷೇಕ, ಗಣಪತಿ ಹೋಮ, ರುಧ್ರಾಭಿಷೇಕ, ಮಹಾಮಂಗಳಾರತಿ ಹಾಗೂ ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ದೇವಾಲಯವನ್ನು ಹೂವಿನಿಂದ, ವಿದ್ಯುತ್ ದೀಪಗಳಿಂದ ಅಲಂಕೃತಗೊಳಿಸಲಾಗಿತ್ತು. ದೇವಾಲಯ ಸಮಿತಿ ಅಧ್ಯಕ್ಷ ಪುಲ್ಲೆರ ವಸಂತ, ಸಮಿತಿ ಸದಸ್ಯರು, ಗ್ರಾಮಸ್ಥರು ದೇವರ ಕಾರ್ಯದಲ್ಲಿ ಪಾಲ್ಗೊಂಡಿದ್ದರು.