ಮಡಿಕೇರಿ, ಮೇ ೨೩: ಕುಶಾಲ ನಗರದಲ್ಲಿ ಆಯೋಜನೆಗೊಂಡ ಡ್ರೀಮ್ಸ್ ಡ್ಯಾನ್ಸ್ ಸ್ಟುಡಿಯೋ ಅವರು ನಡೆಸಿದ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಎಲ್ಲಾ ವಿಭಾಗದಲ್ಲಿ ಪೈಪೋಟಿ ನೀಡಿ ರಾಜ್ಯಮಟ್ಟದ ಉತ್ತಮ ನೃತ್ಯ ತಂಡ ಪ್ರಶಸ್ತಿಯನ್ನು ತಿತಿಮತಿಯ ಯಾಹವಿ ನೃತ್ಯ ತಂಡ ಜೂನಿಯರ್ ವಿಭಾಗದಲ್ಲಿ ತಮ್ಮದಾಗಿಸಿಕೊಂಡಿತು.

ತAಡದಲ್ಲಿ ಗಾನಿಯ, ಸಾನಿಯಾ, ಮಾನಸ, ಸ್ಪಂದನ, ಧನ್ಯತಾ, ಭುವನೇಶ್ವರಿ, ಮೋನಿಕಾ, ರಚಿತಾ, ಕವಿತಾ, ಯಶ್ಮಿತಾ, ದೀಷ್ಮ, ಧೀಮಂತ್ ಹಾಗೂ ಮೋಕ್ಷಿತ್ ಭಾಗವಹಿಸಿದ್ದರು. ಇವರು ನೃತ್ಯ ಶಿಕ್ಸಕಿ ಶ್ವೇತಾ ಸುಬ್ರಮಣಿ ಇವರಲ್ಲಿ ನೃತ್ಯಭ್ಯಾಸ ಮಾಡುತ್ತಿದ್ದಾರೆ.