ವೀರಾಜಪೇಟೆ, ಮೇ ೨೨: ಹೆಗ್ಗಳ ಗ್ರಾಮದಲ್ಲಿರುವ ಶ್ರೀ ಚಾಮುಂಡಿ ಕೋಲ ಮತ್ತು ಅಚ್ಚಪಂಡ ಗುರು ಕಾರೋಣ ದೇವರ ಹಬ್ಬವು ಊರಿನ ಕೈಮಡದಲ್ಲಿ ಎರಡು ದಿನಗಳ ಕಾಲ ನಡೆಯಿತು.
ಹಬ್ಬದ ಮೊದಲ ದಿನ ತೋತ ತೆರೆ, ಮೆಲೇರಿ ಬೆಂಕಿ ಕೊಡುವುದು, ನಂತರ ಮೊದೇರಪ್ಪ ಹಾಗೂ ಕುಟ್ಟಿಚಾತ ಕೋಲದ ಬಳಿಕ ಅನ್ನಸಂತರ್ಪಣೆ ನಡೆಯಿತು. ಎರಡನೇ ದಿನ ವಿಷ್ಣು ಮೂರ್ತಿ ಕೋಲ, ಗುಳಿಗರಾಜ, ಅಜ್ಜಪ್ಪ ತೆರೆ, ಬಳಿಕ ಶ್ರೀ ಚಾಮುಂಡಿ ದೇವಿ ಹಾಗೂ ಪೊಟ್ಟತೆರೆ ಕೋಲದ ನಂತರ ಹೆಗ್ಗಳ ಶ್ರೀ ಈಶ್ವರ ಶಾಸ್ಥಾವು ಬನಕ್ಕೆ ತೆರಳಿ ಪೂಜೆ ಸಲ್ಲಿಸಲಾಯಿತು. ನಂತರ ದೇವರ ಮನೆಗೆ ಬಂದು, ಅಚ್ಚಪಂಡ ಐನ್ಮನೆಗೆ ತೆರಳಿ ಪ್ರಸಾದÀ ವಿತರಿಸಿದ ಬಳಿಕ ಊರಿನ ಕೈಮಡದಲ್ಲಿ ಪೂಜೆ ಸಲ್ಲಿಸಲಾಯಿತು.
ಕೋಲದ ಸಂದರ್ಭ ಅಚ್ಚಪಂಡ ಮಹೇಶ್ ಗಣಪತಿ, ದೇವತಕ್ಕ ಉಲ್ಲಾಸ್ ಗಣಪತಿ, ಅಧ್ಯಕ್ಷ ಅಚ್ಚಪಂಡ ಗಣೇಶ್ ನಂಜಪ್ಪ, ಕಾರ್ಯದರ್ಶಿ ದಿನೇಶ್, ಊರುತಕ್ಕರಾದ ಮುತ್ತಣ್ಣ ಚೋಟು, ಪೊರೇರ ಬಿದ್ದಪ್ಪ ಹಾಗೂ ಗ್ರಾಮಸ್ಥರು ಹಾಜರಿದ್ದರು.