ಮಡಿಕೇರಿ, ಮೇ ೨೨: ಮಾರ್ಚ್ ೨೦೧೯ ರ ಬಳಿಕ ರಸ್ತೆಗಿಳಿದ ಎಲ್ಲ ವಾಹನಗಳಿಗೆ ಕಡ್ಡಾಯವಾಗಿರುವ ಹೈ ಸೆಕ್ಯೂರಿಟಿ ರಿಜಿಸ್ಟೆçÃಷನ್ ಪ್ಲೇಟ್ (ಹೆಚ್.ಎಸ್.ಆರ್.ಪಿ) ಅನ್ನು ಅಳವಡಿಸದೇ ಇದ್ದಲ್ಲಿ ಜೂನ್ ೧೨ ರ ನಂತರವಷ್ಟೆ ಇಂತಹ ನಂಬರ್ ಪ್ಲೇಟ್ ರಹಿತ ವಾಹನಗಳ ಚಾಲಕರಿಂದ ದಂಡ ವಸೂಲಾತಿ ಮಾಡಲಾಗುತ್ತದೆ.
ರಾಜ್ಯದಲ್ಲಿ ಹೆಚ್.ಎಸ್.ಆರ್.ಪಿ ಅಳವಡಿಕೆ ಸಂಬAಧ ಈ ಹಿಂದೆ ಕಳೆದ ನವೆಂಬರ್ ತಿಂಗಳಾAತ್ಯದವರೆಗೆ ಡೆಡ್ ಲೈನ್ ನೀಡಲಾಗಿತ್ತು. ಬಳಿಕ ಇದನ್ನು ಫಬ್ರವರಿ ವರೆಗೆ ವಿಸ್ತರಿಸಿ ಆದೇಶ ಹೊರಡಿಸಿದ ರಾಜ್ಯ ಸರಕಾರ ನಂತರ ಮೇ೩೧ ಕೊನೆಯ ದಿನ ಎಂದು ಹೇಳಿ ಮತ್ತೆ ಅವಧಿಯನ್ನು ವಿಸ್ತರಿಸಿತು. ಇದೀಗ ಈ ನಂಬರ್ ಪ್ಲೇಟ್ ತಯಾರಿಕಾ ಸಂಸ್ಥೆ ಬಿ.ಎನ್.ಡಿ ಎನರ್ಜಿ ಲಿಮಿಟೆಡ್ ಸರಕಾರವು ಅವಧಿಯನ್ನು ವಿಸ್ತರಿಸುವಂತೆ ಕೋರಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜೆ.ಎಸ್ ಕಮಲ್ ಅವರಿದ್ದ ನ್ಯಾಯಪೀಠಕ್ಕೆ ಸರಕಾರವು ಜೂ.೧೨ ರವರೆಗೂ ಹೆಚ್.ಎಸ್.ಆರ್.ಪಿ ರಹಿತ ವಾಹನಗಳ ಮೇಲೆ ಬಲವಂತ ಕ್ರಮ ಕೈಗೊಳ್ಳುವುದಿಲ್ಲ ಎಂಬುದಾಗಿ ಭರವಸೆ ಇತ್ತಿದೆ.