ಮಡಿಕೇರಿ, ಮೇ ೨೨: ಅದ್ವೆöÊತ್ ಹ್ಯುಂಡಯ್ ಸಂಸ್ಥೆ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಗ್ರಾಮೀಣ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕನ್ನಡ ಚಿತ್ರರಂಗದ ನಟ ಭುವನ್ ಪೊನ್ನಣ್ಣ, ನಟಿ ಹರ್ಷಿಕಾ ಪೂಣಚ್ಚ ಕಾರ್ಯಕ್ರಮ ಉದ್ಘಾಟಿಸಿ ಬಳಿಕ ಮಾತನಾಡಿ, ಸಮಾಜದಲ್ಲಿ ಪ್ರಸ್ತುತ ಕಾಲಘಟ್ಟದಲ್ಲಿ ವಾಹನ ಬಳಸುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಕಾರುಗಳು ಕೈಗೆಟಕುವ ದರದಲ್ಲಿ ದೊರೆಯುತ್ತಿರುವ ಕಾರಣ ಎಲ್ಲಾ ವರ್ಗದವರು ಕಾರು ಖರೀದಿಗೆ ಮುಂದಾಗುತ್ತಿದ್ದಾರೆ ಇದು ಗಮನಾರ್ಹ ಎಂದ ಅವರುಗಳು, ಜನರ ಮನೋಲ್ಲಾಸ ಉತ್ಸಾಹದಲ್ಲಿ ಅವಕಾಶ ನೀಡಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ `ಶಕ್ತಿ' ಸಲಹಾ ಸಂಪಾದಕ ಬಿ.ಜಿ. ಅನಂತಶಯನ, ದೇಶದ ಪ್ರಗತಿಯಲ್ಲಿ ಸಾರಿಗೆ ಕ್ಷೇತ್ರದ ಸಹಕಾರ ಅತ್ಯಗತ್ಯವಾಗಿದೆ. ಸಾರಿಗೆ ವಲಯ ಸುಸ್ಥಿಯಲ್ಲಿದ್ದರೆ ದೇಶದ ಅಭಿವೃದ್ಧಿಗೂ ಪೂರಕವಾಗಿರುತ್ತದೆ ಎಂದು ಅಭಿಪ್ರಾಯಿಸಿದರು.

ಗ್ರಾಮೀಣ ಉತ್ಸವ ಅಂಗವಾಗಿ ವಿಂಟೇಜ್ ಕಾರುಗಳ ಪ್ರದರ್ಶನ, ಡಾನ್ಸ್, ಮಕ್ಕಳಿಗೆ ಮನೋರಂಜನಾತ್ಮಕ ಆಟಗಳು, ಆಹಾರ ಮೇಳ, ಮನರಂಜನಾ ಕಾರ್ಯಕ್ರಮಗಳು ನಡೆದವು. ಹಲವು ವರ್ಷಗಳ ಹಿಂದಿನ ಕಾರುಗಳನ್ನು ನೋಡಿ ಜನರು ಬೆರಗಾದರು. ಜೊತೆಗೆ ಹ್ಯುಂಡಯ್ ಸಂಸ್ಥೆಯ ಎಲ್ಲಾ ವಿಭಾಗದ ಕಾರುಗಳ ಪ್ರದರ್ಶನ, ಮಾರಾಟ ಮತ್ತು ಉಚಿತ ತಪಾಸಣೆಗೂ ಅವಕಾಶ ನೀಡಲಾಗಿತ್ತು. ತಾ. ೨೩ ರಂದು (ಇಂದು) ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ. ಕಾರ್ಯಕ್ರಮದಲ್ಲಿ ಹ್ಯುಂಡಯ್ ಸಂಸ್ಥೆ ನಿರ್ದೇಶಕ ಅಜಯ್ ಸಿಂಗ್, ಗ್ರಾಮೀಣ ವ್ಯಾಪ್ತಿ ವ್ಯವಸ್ಥಾಪಕ ಶರತ್ ತುಳಸಿಗಿರಿ ಹಾಜರಿದ್ದರು.