ಮಡಿಕೇರಿ, ಮೇ ೨೪: ಥೈಲೆಂಡ್‌ನಲ್ಲಿ ನಡೆಯಲಿರುವ ಏಷ್ಯನ್ ಮಿಕ್ಸ್÷್ಡ ಮಾರ್ಷಲ್ ಆರ್ಟ್ಸ್ ಸಮರಕಲೆ ಚಾಂಪಿಯನ್‌ಶಿಪ್‌ನಲ್ಲಿ (ಎಮ್.ಎಮ್.ಎ) ಭಾಗವಹಿಸಲು ೬೫ ಕೆ.ಜಿ ತೂಕ ವಿಭಾಗದಲ್ಲಿ ಕುಶಾಲನಗರ ಕೊಪ್ಪ ಗ್ರಾಮದ ವೇಣುವರ್ಧನ್ ಅವರು ಆಯ್ಕೆಯಾಗಿದ್ದು, ಭಾರತವನ್ನು ಪ್ರತಿನಿಧಿಸಲಿದ್ದಾರೆ. ತಾ.೧೮ ರಂದು ಕೇರಳದ ಕೊಜಿಕೋಡ್‌ನಲ್ಲಿ ಆಯೋಜನೆಗೊಂಡಿದ್ದ ರಾಷ್ಟçಮಟ್ಟದ ಮಿಕ್ಸ್÷್ಡ ಮಾರ್ಷಲ್ ಆರ್ಟ್ಸ್ನಲ್ಲಿ ಭಾಗವಹಿಸಿದ ಇವರು, ೪ ಸ್ಪರ್ಧಾ ಕದನಗಳಲ್ಲಿಯೂ ವಿಜೇತರಾಗಿ ಚಿನ್ನದ ಪದಕವನ್ನು ಗಳಿಸಿದ್ದಾರೆ. ಈ ಮೂಲಕ ಉಂಒಒA (ಗ್ಲೋಬಲ್ ಮಿಕ್ಸ್÷್ಡ ಮಾರ್ಷಲ್ ಆರ್ಟ್ಸ್ ಅಸೋಸೊಯೇಷನ್) ಆಯೋಜಿತ ಏಪ್ಯನ್ ಮಾರ್ಷಲ್ ಆರ್ಟ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಕೊಜಿಕೋಡ್‌ನಲ್ಲಿ ನಡೆದ ರಾಷ್ಟçಮಟ್ಟದ ಪಂದ್ಯದಲ್ಲಿ ಕುಶಾಲನಗರದ ಕೂರ್ಗ್ ಕಾಂಬ್ಯಾಟ್ ಕ್ಲಬ್ (ಅ೩ಒಒಂ)ನಲ್ಲಿ ತರಬೇತಿ ಪಡೆದ ಕ್ರೀಡಾಪಟುಗಳಾದ ಕೊಪ್ಪ ಗ್ರಾಮದ ವೇಣುವರ್ಧನ್, ಮುಳ್ಳುಸೋಗೆ ಗ್ರಾಮದ ವರುಣ್ ಎಂ.ಸಿ ಹಾಗೂ ಶಾಫಿ ಅವರು ಭಾಗವಹಿಸಿದ್ದರು. ಪಂದ್ಯಾಟದಲ್ಲಿ ಕೊಪ್ಪದ ಕೆ.ಚಂದ್ರ-ಕೆ.ಆರ್ ಉಷಾ ದಂಪತಿಯ ಪುತ್ರ ವೇಣುವರ್ಧನ್ ಅವರು ಚಿನ್ನದ ಪದಕ ಗಳಿಸಿ ಏಷ್ಯನ್ ಮಿಕ್ಸ್÷್ಡ ಮಾರ್ಷಲ್ ಆರ್ಟ್ಸ್ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸಲು ಅರ್ಹತೆ ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ಪಡೆದುಕೊಂಡರು. ಮುಳ್ಳುಸೋಗೆಯ ಚಂದ್ರಚಾರಿ-ಸುಜಾತ ದಂಪತಿಯ ಪುತ್ರ ವರುಣ್ ಎಂ.ಸಿ ಅವರು ಕಂಚಿನ ಪದಕ ಗಳಿಸಿದ್ದಾರೆ. ಕ್ರೀಡಾಪಟುಗಳಿಗೆ ಕೂರ್ಗ್ ಕಾಂಬ್ಯಾಟ್ ಕ್ಲಬ್‌ನ ತರಬೇತುದಾರ ಅಮಿತ ವಿಶ್ವನಾಥ್ ಅವರು ತರಬೇತಿ ನೀಡಿದ್ದಾರೆ.