ಸಿದ್ದಾಪುರ, ಮೇ ೨೪: ಕರಡಿಗೋಡು ಗ್ರಾಮದಲ್ಲಿ ಒಂಟಿ ಸಲಗ ಒಂದು ಮನೆಗಳ ಅಂಗಳದಲ್ಲೇ ಸುತ್ತಾಡುತ್ತಿದ್ದು, ಗ್ರಾಮಸ್ಥರು ಆತಂಕಕ್ಕೆ ಸಿಲುಕಿದ್ದಾರೆ. ಕರಡಿಗೋಡು ಗ್ರಾಮದ ಟೀಕ್‌ವುಡ್ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಸಲಗವು ದಾಂಧಲೆ ನಡೆಸುತ್ತಾ ಮನೆಗಳ ಸುತ್ತಲೂ ಓಡಾಡುತ್ತಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

ಅಲ್ಲದೆ ಸಿದ್ದಾಪುರದ ಮೈಸೂರು ರಸ್ತೆಯಲ್ಲಿ ಕೂಡ ಸಲಗ ಸುತ್ತಾಡುತ್ತಿರುವುದು ಕಂಡುಬAದಿದ್ದು, ಈ ಹಿನ್ನೆಲೆಯಲ್ಲಿ ಕಾರ್ಮಿಕರು ಕೂಡ ಕೆಲಸಕ್ಕೆ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಮನೆಗಳ ಅಂಗಳಗಳಲ್ಲಿ ಕಂಡುಬರುತ್ತಿರುವ ಸಲಗದ ಓಡಾಟದಿಂದ ರಾತ್ರಿ ಸಮಯದಲ್ಲಿ ಮನೆಗಳಿಂದ ಹೊರಬರಲು ನಿವಾಸಿಗಳು ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. - ವಾಸು