ಮಡಿಕೇರಿ, ಮೇ ೨೪: ಕೊಡಗು ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ಮರಗೋಡು ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅರೆಭಾಷೆ ಗೌಡ ಕುಟುಂಬಗಳ ನಡುವೆ ನಡೆಯುತ್ತಿರುವ ಫುಟ್ಬಾಲ್ ಪಂದ್ಯಾವಳಿಯಲ್ಲಿ ಕೊಳಂಬೆ ಹಾಗೂ ಕಾಂಗೀರ ತಂಡಗಳು ಜಯಸಾಧಿಸಿ ಕ್ವಾರ್ಟರ್ ಫೈನಲ್ ಪಂದ್ಯಾಟಕ್ಕೆ ಅರ್ಹತೆ ಗಳಿಸಿಕೊಂಡಿವೆ.

ಕಟ್ಟೆಮನೆ ತಂಡದ ವಿರುದ್ಧ ೧-೨ ಗೋಲುಗಳ ಅಂತರದಲ್ಲಿ ಬೆಪ್ಪುರನ ಗೆಲುವು ಸಾಧಿಸಿತು. ಕಟ್ಟೆಮನೆ ಪರ ಭವನ್ ೧, ಬೆಪ್ಪುರನÀ ಪರ ಭರತ್ ೨ ಗೋಲು ಗಳಿಸಿ ಗೆಲುವಿಗೆ ಕಾರಣಕರ್ತರಾದರು. ೩-೦ ಗೋಲುಗಳ ಅಂತರದಲ್ಲಿ ಕಾಂಗೀರ ತಂಡವು ನಂಗಾರು ತಂಡವನ್ನು ಮಣಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆದುಕೊಂಡಿತು. ಕಾಂಗೀರ ಪರ ಯತೀನ್, ಮಿಲನ್ ಹಾಗೂ ನಕುಲ್ ತಲಾ ೧ ಗೋಲು ಗಳಿಸಿ ತಂಡದ ಗೆಲುವಿಗೆ ನೆರವಾದರು. ಬೊಳ್ತಜಿ ೬-೧ ಗೋಲಿನ ಅಂತರದಿAದ ಸಿರಕಜೆ ತಂಡವನ್ನು ಸೋಲಿಸಿತು. ಸಿರಕಜೆ ತಂಡದ ಪರ ದಿಲನ್ ಏಕೈಕ ಗೋಲು ಹೊಡೆದರೆ, ಬೊಳ್ತಜಿ ಪರ ಗಗನ್ ೫, ಪೃಥ್ವಿ ೧ ಗೋಲು ಬಾರಿಸಿದರು.

ಕಡ್ಯದ ೪-೧ ಗೋಲುಗಳಿಂದ ಬೈಲೆ ವಿರುದ್ಧ ಜಯಸಾಧಿಸಿತು. ಬೈಲೆ ಪರ ಹರ್ಸಿತ್ ೧ ಗೋಲು, ಕಡ್ಯದ ಪರ ವೈಶಾಕ್ ೨, ಕಾರ್ತಿಕ್, ಪ್ರವೀಣ್ ತಲಾ ಒಂದೊAದು ಗೋಲು ದಾಖಲಿಸಿ ದರು. ೪-೦ ಗೋಲುಗಳಿಂದ ಬೊಳ್ಳೂರು ತಂಡವು ಬೆಪ್ಪುರನ ವಿರುದ್ಧ ವಿಜಯಿಯಾಯಿತು. ಬೊಳ್ಳೂರು ಪರ ಗಗನ್ ಹಾಗೂ ರೋಷನ್ ತಲಾ ೨ ಗೋಲು ಹಾಕಿದರು. ೦-೧ ಗೋಲುಗಳ ಅಂತರದಲ್ಲಿ ಕೊಳಂಬೆ ವಿರುದ್ಧ ಬಡುವಂಡ್ರ ಜಯಗಳಿಸಿತು. ಕೊಳಂಬೆ ಪರ ಜಗನ್ ಬಾರಿಸಿದ ಏಕೈಕ ಗೋಲು ಗೆಲುವಿಗೆ ಕಾರಣವಾಗಿ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಗಳಿಸಿಕೊಂಡಿತು. ಬೊಳ್ತಜಿ ತಂಡವನ್ನು ೦-೩ ಗೋಲಿನಿಂದ ಮಣಿಸಿ ಕಾಂಗೀರ ಗೆಲುವಿನ ಮುದ್ರೆ ಒತ್ತಿ ಕ್ವಾರ್ಟರ್‌ಗೆ ಲಗ್ಗೆಯಿಟ್ಟಿತು. ಕಾಂಗೀರ ತಂಡದ ನಕುಲ್ ೨ ಹಾಗೂ ಯತಿನ್ ೧ ಗೋಲು ಹೊಡೆದರು.