ಮಡಿಕೇರಿ, ಮೇ ೨೪: ನಗರದ ಶ್ರೀ ಮುತ್ತಪ್ಪ ದೇವಾಲಯದ ಆವರಣದಲ್ಲಿರುವ ಭಗವತಿ ದೇವಿ ವಾರ್ಷಿಕ ಪೊಂಗಾಲ ಉತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು.

ಬೆಳಿಗ್ಗೆ ಕೇರಳದ ಚಂಡೆ ವಾದ್ಯದೊಂದಿಗೆ ಪೊಂಗಾಲ ಸಮರ್ಪಣೆ ಆರಂಭಗೊAಡಿತು. ೩ ದಿನ ಶುದ್ಧ ವ್ರತದಲ್ಲಿದ್ದ ಹಲವಾರು ಮಹಿಳೆಯರು ಸೌದೆ ಒಲೆಯಲ್ಲಿ ಪೊಂಗಲ್ ಮಾಡಿ ಭಗವತಿ ದೇವರಿಗೆ ಅರ್ಪಿಸುವ ಮೂಲಕ ಪ್ರಾರ್ಥನೆ ನೆರವೇರಿಸಿದರು.

ತಿರುವನಂತಪುರAನ ಆಟುಂಗಾಲ್ ಭಗವತಿ ದೇವಾಲಯದಲ್ಲಿ ಪೊಂಗಾಲ ಉತ್ಸವ ಪ್ರತಿವರ್ಷ ವಿಜೃಂಭಣೆಯಿAದ ನಡೆಯುತ್ತದೆ. ಮುತ್ತಪ್ಪ ದೇವಾಲಯದಲ್ಲೂ ಪ್ರತಿವರ್ಷ ಉತ್ಸವ ನಡೆಸುತ್ತ ಬರಲಾಗುತ್ತಿದೆ. ಪೊಂಗಾಲ ಸಮರ್ಪಣೆಯಿಂದ ಮನೆಯಲ್ಲಿ ಆರೋಗ್ಯ, ನೆಮ್ಮದಿ ನೆಲೆಸುತ್ತದೆ ಎಂಬ ನಂಬಿಕೆ ಇದೆ ಎಂದು ದೇವಾಲಯ ಪ್ರಮುಖರು ಮಾಹಿತಿ ನೀಡಿದರು.

ಈ ಸಂದರ್ಭ ದೇವಾಲಯ ಸಮಿತಿ ಅಧ್ಯಕ್ಷ ಸುಧೀರ್, ಕೆ.ಎಸ್. ರಮೇಶ್, ಮುತ್ತಪ್ಪ ಮಹಿಳಾ ವೇದಿಕೆಯ ಶಾರದ ರಾಮನ್, ವಿಶಾಲಕ್ಷ್ಮಿ ಸುಕುಮಾರ್, ದೀಪ ಕಾವೇರಪ್ಪ, ಗೀತಾ ವಿಜಯನ್, ಮಲರ್ ಮಣಿ ಸೇರಿದಂತೆ ಇನ್ನಿತರರು ಹಾಜರಿದ್ದರು.