ನನ್ನ ಹೆಸರು ರಿಯಾನ್. ಆದರೆ ಪ್ರೀತಿಯಿಂದ ಎಲ್ಲರು ನನ್ನನ್ನು ಅಪ್ಪು ಎಂದೇ ಕರೆಯುವುದು. ನನ್ನ ವಾರ್ಷಿಕ ಪರೀಕ್ಷೆ ಮುಗಿಯುತ್ತಿದ್ದಂತೆ ಮನೇಲಿ ಎಲ್ಲರಿಗೂ ಖುಷಿಯೊ ಖುಷಿ. ಯಾಕೆಂದರೆ ಲಾಂಗ್ ಲೀವ್‌ನಲ್ಲಿ ಮನೆಗೆ ಹೋಗುತ್ತಿರುವುದರಿಂದ, ಕಾರಣ ಕೂಡಿಗೆ ಮೊರಾರ್ಜಿ ವಸತಿ ಶಾಲೆಯಲ್ಲಿ ಓದುತ್ತಿರುವುದು ನಾನು. ನನಗಂತೂ ಮನೆಗೆ ಬಂದಾಗ ಸರ್‌ಫ್ರೈಸ್ ಕಾದಿತ್ತು. ಅಕ್ಕ ಇಶಾ (ಬಡಿ) ಬೆಂಗಳೂರಿನಲ್ಲಿ ಓದುತ್ತಿರೊದು. ಅವಳೂ ರಜೆ ಅಂತ ಮನೆಗೆ ಬಂದಿದ್ದಳು. ಒಟ್ಟಿಗೆ ನಾವಿಬ್ಬರು ಮನೇಲಿ ಸಿಗೋದು ಕಡಿಮೆ.

ಬೇಸಿಗೆ ರಜೆಯಲ್ಲಿ ೯ನೇ ತರಗತಿಯ ಪುಸ್ತಕ ಓದಲು ಮತ್ತು ಸ್ವಲ್ಪ ಹೋಂವರ್ಕ್ ಬರೆಯಲು ಶಾಲೆಯಿಂದ ಕೊಟ್ಟಿದ್ದರು. ಅದನ್ನು ಬರೆಯುತ್ತಿದ್ದೆ. ಟಿವಿಲಿ ಮ್ಯಾಚ್ ನೋಡ್ತಿದ್ದೆ. ಸಂಜೆ ಆದರೆ ಇಬ್ಬರು ಅಕ್ಕಂದಿರಾದ ಚೋಟಿ, ಬಡಿ (ಇಶಾ, ರಿಶಾ) ಜೊತೆ ಆಟ, ಜಗಳ, ಕಿತ್ತಾಟ, ಟಿಕ್ ಟ್ಯಾಕ್ ಮಾಡ್ತಾ ಮನೆಯೊಳಗೇ ಒಂದು ವಾರ ಕಳೆದೆ.

ಹೀಗಿರುವಾಗ ನನ್ನ ಸ್ನೇಹಿತರು (ಜೈ ಮಾರುತಿ ಕಬಡ್ಡಿ ಟೀಂ) "ಅಪ್ಪು, ಕಬಡ್ಡಿ ಪ್ರಾಕ್ಟೀಸ್‌ಗೆ ಬಾರೊ, ಮುಂದಿನ ವಾರ ಜೂನಿಯರ್ ಕಾಲೇಜಿನ ಮೈದಾನದಲ್ಲಿ ಪಂದ್ಯಾಟ ಇದೆ" ಎಂದು ಕರೆಯುವಾಗ, "ಬೇಡ ಅಪ್ಪು, ಒಂದು ಕಡೆ ಉರಿ ಬಿಸಿಲು, ರಂಜಾನ್ ತಿಂಗಳು ಉಪವಾಸ ಬೇರೆ ಇದ್ದೀಯ" ಅಂತ ಅಪ್ಪ ಜೋರು ಮಾಡುತ್ತಿದ್ದರು. ಆದರೆ ಮಮ್ಮಿಗೆ ಆಟ ಡ್ಯಾನ್ಸ್ ಇವೆಲ್ಲ ಇಷ್ಟ. ಹಾಗಾಗಿ ಅವರತ್ತಿರ ಮೆಲ್ಲನೆ "ಮಮ್ಮಿ ಪ್ಲೀಸ್.." ಅಂತ ಜರ್ಸಿ ಕೈಲಿಡಿದು ಅಮ್ಮನಿಗೆ ಪೂಸಿ ಹೊಡೆದು ಓಡುತ್ತಿದ್ದೆ. ಕಬಡ್ಡಿ ಅಭ್ಯಾಸ ಮುಗಿಸಿ ವಾಪಸ್ ಮನೆಗೆ ಬರುವಾಗ ಬಟ್ಟೆ ಫುಲ್ ಮಣ್ಣು. ಮೈಯೆಲ್ಲ ಬೆವತು ನೀರು ಇಳಿತಿರುತ್ತೆ. ಅದು ನೋಡಿ ಅಪ್ಪ ಮತ್ತೆ ಬೊಬ್ಬೆ ಹೊಡೆಯುತ್ತಿದ್ದರು. ಕೊನೆಗೆ ಪಂದ್ಯಾಟಕ್ಕೆ ನಾವೆಲ್ಲ ರೆಡಿಯಾದೆವು. ನನಗೆ ಅಜ್ಜಿ ದೊಡ್ಡಮ್ಮ ಅಂಕಲ್, ರಂಜಾನ್ ಹಬ್ಬಕ್ಕೆಂದು ದುಡ್ಡು ಕೊಟ್ಟಿದ್ದು ರೂ. ೧೪೦೦ ಆಗಿತ್ತು. ಅದನ್ನು ಖರ್ಚು ಮಾಡದೆ ಹಾಗೆಯೇ ಇಟ್ಟಿದ್ದೆ. ಮ್ಯಾಚ್‌ಗೆ ಎಲ್ಲರೂ ಒಂದೇ ತರಹದ ಜರ್ಸಿ ಬುಕ್ ಮಾಡಿದಾಗ ನಾನು ಅಮ್ಮನಿಗೆ ಹಿಂಸೆ ಕೊಡದೆ ಈ ನನ್ನ ಹಣದಲ್ಲಿ ಕೊಟ್ಟೆ. ಪಂದ್ಯಾಟದ ದಿನ ಬಂದೇ ಬಿಡ್ತು. ಮನೇಲಿ ಎಲ್ಲರೂ ಆಲ್ ದಿ ಬೆಸ್ಟ್ ಹೇಳಿ ಕಳಿಸಿದರು. ನಾಲ್ಕು ತಂಡಗಳ ಜೊತೆ ಸೆಣಸಾಡಿ ಕೊನೆ ನಾಲ್ಕು ಸುತ್ತಿನ ಆಟದಲ್ಲಿಯೂ ಚಂದ ಆಡಿ ಪ್ರಥಮ ಸ್ಥಾನ ಪಡೆದು ನಗದು ಮತ್ತು ಟ್ರೋಫಿಯೊಂದಿಗೆ ನಮ್ಮ ಟೀಂ ಗೆದ್ದ ಖುಷಿಯಲ್ಲಿ ಸಂಭ್ರಮಾಚರಣೆ ಮಾಡಿದೆವು.

ಅಲ್ಲಿಂದ ನಾಲ್ಕೆöÊದು ದಿನ ಮೈಸೂರಿನಲ್ಲಿರುವ ಅಜ್ಜಿ ಮನೆಗೋಗಿದ್ದೆ. ಅಷ್ಟರಲ್ಲಿ ನನ್ನ ಶಾಲೆಯಿಂದ (ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆ) ಪೊನ್ನಂಪೇಟೆಯ ಟಿ. ಶೆಟ್ಟಿಗೇರಿಯ ಬರಪೊಳೆ ಹತ್ತಿರ "ಸಾಹಸ ಕ್ರೀಡೆ ಬೇಸಿಗೆ ಶಿಬಿರ" ಇರುವ ಬಗ್ಗೆ ಮತ್ತು ನಮ್ಮ ಶಾಲೆಯಿಂದ ನಾನೂ ಕೂಡ ಆಯ್ಕೆಯಾಗಿರುವ ವಿಚಾರ ಪ್ರಿನ್ಸಿಪಾಲ್ ಪ್ರಕಾಶ್ ಸರ್ ಅಮ್ಮನಿಗೆ ತಿಳಿಸಲು, ಅಪ್ಪು ಹೋಗೆಂದು ಅಮ್ಮ ಗ್ರೀನ್ ಸಿಗ್ನಲ್ ಕೊಟ್ಟರು. ಅಲ್ಲಿಗೆ ಮೇ ಒಂದರಿAದ ಐದನೆ ತಾರೀಖಿನವರೆಗೆ ಶಿಬಿರದಲ್ಲಿ ಪಾಲ್ಗೊಂಡೆ. ಅಲ್ಲಿ ವಾಟರ್ ರ‍್ಯಾಫ್ಟಿಂಗ್, ರೋಪ್ ಕ್ಲೆöÊಂಬಿAಗ್, ರಿವರ್ ಕ್ರಾಸಿಂಗ್, ಜಿಪ್ ಲೈನ್, ಬಿಗ್ ವಿ, ಜುಮಾರ್ಜಿಂಗ್, ಸೈಕಲಿಂಗ್, ಫೇಸ್ ಪೈಂಟಿAಗ್, ಸರ್ವಯಿವಲ್ ಸ್ಕಿಲ್ಸ್, ಟೆನ್ಷನ್ ವಾಕ್, ಪ್ಯಾರಲಲ್ ವಾಕ್, ಹೈಕಿಂಗ್... ಹೀಗೆ ಸಾಹಸಮಯ ಕ್ರೀಡೆಗಳನ್ನು ಕಲಿಸಿದರು. ಆಸಕ್ತಿ ಮತ್ತು ಉತ್ಸಾಹದಿಂದ ಭಾಗವಹಿಸಿ, ಎಲ್ಲರ ಪ್ರಶಂಸನೆಯೊAದಿಗೆ ಹೊಸ ಅನುಭವದ ಪಾಠವನ್ನು ಕಲಿತುಕೊಳ್ಳಲು ಅವಕಾಶ ಸಿಕ್ತು. ಮುಂದಿನ ಬಾರಿಯ ಸಾಹಸ ಕ್ರೀಡೆ ಶಿಬಿರ ಹೊರ ರಾಜ್ಯದಲ್ಲಿದ್ದು ಅಲ್ಲಿಗೆ ನನ್ನ ಹೆಸರನ್ನೂ ಆಯ್ಕೆ ಮಾಡಿಕೊಂಡರು ಬೆಂಗಳೂರಿನಿAದ ಬಂದಿದ್ದ ತರಬೇತುದಾರರ ತಂಡ. ಅದಕ್ಕಾಗಿ ನನ್ನ ನೆಚ್ಚಿನ ಶಾಲೆಯ ಪ್ರಾಂಶುಪಾಲರಾದ ಪ್ರಕಾಶ್ ಸರ್ ಮತ್ತು ಅಧ್ಯಾಪಕರುಗಳಿಗೆ, ನನ್ನ ಮನೆಯವರಿಗೂ ಧನ್ಯವಾದ ಹೇಳುತ್ತೇನೆ. ಅಲ್ಲಿಂದ ಬಂದ ಮೇಲೆ ಎರಡು ದಿನ ರೆಸ್ಟ್ ಮಾಡಿ ಮತ್ತೆ ಒಂದೆರಡು ದಿನ ಸ್ವಿಮ್ಮಿಂಗ್ ಫೂಲ್‌ಗೆ ಸ್ವಿಮ್ಮಿಂಗ್ ಕಲಿಯಲು ಹೋದೆ. ಈಗ ದಿನಾ ಸಂಜೆಯ ಸಮಯ ಕಬಡ್ಡಿ ಅಭ್ಯಾಸ ಮಾಡುತ್ತ, ಇರುವ ಅಲ್ಪ ಸಮಯದ ರಜೆಯನ್ನು ಮನೆಯವರೊಡನೆ ಅಜ್ಜಿ, ಆಂಟಿಯರ ಮನೆಗೋಗಿ ಬರುವ ಅಂತಿರುವೆ. ಹೀಗೆ ಈ ವರ್ಷದ ಬೇಸಿಗೆ ರಜೆಯನ್ನು ಒಂದೊಳ್ಳೆಯ ಆಭ್ಯಾಸಕ್ಕಾಗಿ ಮೀಸಲಿಟ್ಟೆ ಎನ್ನಲು ಖುಷಿಯಾಗುತ್ತಿದೆ.

- ರಿಯಾನ್ ಎಸ್.ಎ., ೯ನೇ ತರಗತಿ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕೂಡಿಗೆ.