ಮಡಿಕೇರಿ, ಮೇ ೨೪: ಬೇಸಿಗೆ ಸಂದರ್ಭದಲ್ಲಿ ಅಗತ್ಯ ವೇಳೆಯಲ್ಲಿ ಭಾರೀ ವಿಳಂಬವಾಗಿದ್ದ ಮಳೆ ಇದೀಗ ಮೇ ಅಂತ್ಯದ ಸಂದರ್ಭದಲ್ಲಿ ಜನರಲ್ಲಿ ಆತಂಕ ಸೃಷ್ಟಿಸುವ ರೀತಿಯಲ್ಲಿ ಅಬ್ಬರ ತೋರುತ್ತಿದೆ. ಕಳೆದ ಕೆಲವು ದಿನಗಳಿಂದ ಗುಡುಗು- ಮಿಂಚು ಸಹಿತವಾಗಿ ಇಂಚುಗಟ್ಟಲೆ ಮಳೆಯಾಗುತ್ತಿದ್ದು, ಮಳೆಯ ರಭಸ ಬಹುತೇಕ ಕಡೆಗಳಲ್ಲಿ ದಿಗಿಲು ಮೂಡಿಸುವಂತಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಗುರುವಾರ ರಾತ್ರಿ ತನಕ ಮಳೆಯಿರಲಿಲ್ಲ. ಆದರೆ, ರಾತ್ರಿ ೯.೩೦ರ ವೇಳೆಯಿಂದ ತಡರಾತ್ರಿ ತನಕ ಸುರಿದ ಮಳೆಯ ತೀವ್ರತೆಗೆ ಜನರು ಆತಂಕಕ್ಕೆ ಒಳಗಾಗುವಂತಿತ್ತು. ಮಡಿಕೇರಿ ಮಾತ್ರವಲ್ಲದೆ, ಜಿಲ್ಲೆಯ ಹಲವಾರು ಕಡೆಗಳಲ್ಲಿ ಇದೇ ರೀತಿಯ ವಾತಾವರಣ ದಿನಂಪ್ರತಿ ಸೃಷ್ಟಿಯಾಗುತ್ತಿದೆ. ಬುಧವಾರದಂದು ದಕ್ಷಿಣ ಕೊಡಗು ವ್ಯಾಪ್ತಿಯಲ್ಲಿ ಸುಮಾರು ೩ರಿಂದ ೫ ಇಂಚುಗಳಷ್ಟು ಮಳೆ ಸುರಿದಿರುವುದು ವರದಿಯಾಗಿದೆ. ಬಾಳಲೆ ಹೋಬಳಿಯಲ್ಲಿ ೪.೮೦ ಇಂಚು, ಶ್ರೀಮಂಗಲ ೩.೧೨, ಹುದಿಕೇರಿ ೨.೬೪, ಪೊನ್ನಂಪೇಟೆ ೩.೩೨ ಇಂಚು, ಅಮ್ಮತ್ತಿ ೨, ವೀರಾಜಪೇಟೆ ಕ.ಸ.ಬಾ.ದಲ್ಲಿ ೧.೨೪ ಇಂಚುಗಳಷ್ಟು ಸರಾಸರಿ ಮಳೆಯಾಗಿದೆ. ಇದು ಹೋಬಳಿ ವ್ಯಾಪ್ತಿಯ ವಿವರವಾಗಿದ್ದು, ಹಲವಾರು ಗ್ರಾಮಗಳಲ್ಲಿ ಮಳೆ ಸುಮಾರು ೩ ಇಂಚಿಗಿAತಲೂ ಅಧಿಕ ಬಿದ್ದಿರುವುದಾಗಿ ಹೇಳಲಾಗಿದೆ.

ಗುರುವಾರವೂ ರಭಸ

ಗುರುವಾರದಂದು ಕೂಡ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮಳೆಯಾಗಿದೆ. ಮಡಿಕೇರಿ ನಗರಕ್ಕೆ ರಾತ್ರಿ ಸುಮಾರು ೩ ಇಂಚುಗಳಷ್ಟು ಮಳೆ ಸುರಿದಿದೆ. ಮಳೆಯೊಂದಿಗೆ ಗುಡುಗು- ಮಿಂಚೂ ಇದ್ದು, ಮುಂಗಾರಿಗೆ ಮುನ್ನವೇ ಸುರಿಯುತ್ತಿರುವ ಮಳೆಯ ರಭಸ ಆತಂಕಕ್ಕೆ ಎಡೆಯಾಗಿದೆ. ಕಳೆದ ೨೪ ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ ೧.೧೦ ಇಂಚಿನಷ್ಟು ಸರಾಸರಿ ಮಳೆಯಾಗಿದೆ. ಜನವರಿಯಿಂದ ಈ ತನಕ ಜಿಲ್ಲೆಯಲ್ಲಿ ೧೨.೩೯ ಇಂಚು ಮಳೆಯಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ಕೇವಲ ೫.೮೫ ಇಂಚಿನಷ್ಟಾಗಿತ್ತು.

ಮಡಿಕೇರಿ ತಾಲೂಕಿನಲ್ಲಿ ಜನವರಿಯಿಂದ ಈತನಕ ೧೭.೨೦ ಇಂಚು (ಕಳೆದಬಾರಿ ೮.೬೫), ವೀರಾಜಪೇಟೆ ತಾಲೂಕಿನಲ್ಲಿ ೮.೭೩ (ಕಳೆದ ಬಾರಿ ೩.೦೯) ಇಂಚು ಮಳೆಯಾಗಿದೆ. ಪೊನ್ನಂಪೇಟೆ ತಾಲೂಕಿನಲ್ಲಿ ೧೨.೯೪ (ಕಳೆದ ಬಾರಿ ೩.೭೩), ಸೋಮವಾರಪೇಟೆಯಲ್ಲಿ ೯.೩೯ (ಕಳೆದ ಬಾರಿ ೫.೦೮) ಹಾಗೂ ಕುಶಾಲನಗರ ತಾಲೂಕಿನಲ್ಲಿ ೧೩.೭೨ (ಕಳೆದ ವರ್ಷ ೮.೭೧ ಇಂಚು) ಇಂಚು ಮಳೆ ದಾಖಲಾಗಿದೆ. ಮಡಿಕೇರಿ ನಗರಕ್ಕೆ ಜನವರಿಯಿಂದ ಈತನಕ ಸುಮಾರು ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ೧೧ ಇಂಚು ಮಳೆಯಾಗಿದೆ. ಇದರಲ್ಲಿ ಕೇವಲ ಮೇ ತಿಂಗಳಿನಲ್ಲಿ ೯ ಇಂಚು ದಾಖಲಾಗಿದೆ. ಪ್ರಸ್ತುತ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಈತನಕ ಬರಡಾದಂತಿದ್ದ ನದಿ - ತೋಡುಗಳಲ್ಲಿ ನೀರಿನ ಮಟ್ಟದಲ್ಲಿ ಏರಿಕೆ ಕಂಡುಬAದಿದೆ. ಕಾವೇರಿ - ಲಕ್ಷö್ಮಣ ತೀರ್ಥ ನದಿಗಳಲ್ಲೂ ನೀರಿನ ಮಟ್ಟ ಹೆಚ್ಚಾಗಿದೆ. ಮಳೆಗೆ ತಡೆಗೋಡೆ ಕುಸಿತ

ಮುಳ್ಳೂರು: ಕಳೆದ ಎರಡು ದಿನಗಳಿಂದ ಸುರಿದ ಮಳೆಗೆ ಸಮೀಪದ ಮಾಲಂಬಿ ಕೂಡುರಸ್ತೆ ಗ್ರಾಮದ ನಿವಾಸಿ ಎಂ.ಎನ್. ಯತೀಶ್ ಅವರು ಮನೆಯ ಬಳಿ ನಿರ್ಮಿಸಿದ ತಡೆಗೋಡೆ ಸಂಪೂರ್ಣವಾಗಿ ಕುಸಿದಿದೆ. ಮನೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಹಿನೆÀ್ನಲೆಯಲ್ಲಿ ಕೆಳಭಾಗದಲ್ಲಿ ಹಳ್ಳ ಇದ್ದ ಕಾರಣ ರೂ. ೫ ಲಕ್ಷ ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಿದ್ದರು. ಕಳೆದ ೨ ದಿನದ ಹಿಂದೆ ಸುರಿದ ಭಾರೀ ಮಳೆಯಿಂದಾಗಿ ಗುರುವಾರ ರಾತ್ರಿ ತಡೆಗೋಡೆ ಸಂಪೂರ್ಣವಾಗಿ ಕುಸಿದಿದೆ. -ಭಾಸ್ಕರ್ ಮುಳ್ಳೂರು

ಸಿದ್ದಾಪುರ: ಧಾರಾಕಾರ ಮಳೆ ಗಾಳಿಯಿಂದಾಗಿ ಮನೆಯ ಮೇಲೆ ಮರ ಬಿದ್ದ ಪರಿಣಾಮ ಮನೆ ಭಾಗಶಃ ಹಾನಿಯಾಗಿರುವ ಘಟನೆ ಮಾಲ್ದಾರೆ ಗ್ರಾಮದಲ್ಲಿ ನಡೆದಿದೆ. ಮಾಲ್ದಾರೆ ಗ್ರಾಮದ ನಿವಾಸಿ ಟಿ.ಪಿ. ಜೋಯಿ ಎಂಬವರ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದೆ. ಸ್ಥಳಕ್ಕೆ ಹೋಬಳಿ ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್, ಗ್ರಾಮ ಆಡಳಿತ ಅಧಿಕಾರಿಗಳು, ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಲಕ್ಷö್ಮಣ ತೀರ್ಥ ಉಗಮ ಸ್ಥಾನದಲ್ಲಿ ಜೀವಕಳೆ

ಶ್ರೀಮಂಗಲ : ಶ್ರೀಮಂಗಲ ಸಮೀಪ ಶ್ರೀ ಇರ್ಪು ರಾಮೇಶ್ವರ ಕ್ಷೇತ್ರದಲ್ಲಿ ಭಕ್ತಾದಿಗಳು ಪುಣ್ಯಸ್ನಾನ ಮಾಡುವ ಲಕ್ಷö್ಮಣ ತೀರ್ಥ ನದಿ ಉಗಮ ಸ್ಥಾನ (ಇರ್ಪು ಜಲಪಾತ) ಮುಂಗಾರು ಪೂರ್ವ ಮಳೆಯಿಂದ ಜೀವಕಳೆ ತಳೆದಿದೆ.

- ಹರೀಶ್ ಮಾದಪ್ಪ

ಕೈಗಾರಿಕಾ ಬಡಾವಣೆಯಲ್ಲಿ ತುರ್ತು ಕೆಲಸ

ಮಡಿಕೇರಿ: ಮಳೆಯ ತೀವ್ರತೆಯಿಂದ ಮಡಿಕೇರಿ ನಗರದ ಕೈಗಾರಿಕಾ ಬಡಾವಣೆಯ ಚರಂಡಿಗಳು ಕಲ್ಲು, ಕಸ, ಪ್ಲಾಸ್ಟಿಕ್ ಸಾಮಗ್ರಿಗಳಿಂದ ತುಂಬಿ ನೀರಿನ ಹರಿವು ಸ್ಥಗಿತಗೊಂಡಿತ್ತು.

ಈ ಕುರಿತು ಮಡಿಕೇರಿ ನಗರಸಭಾ ಆಯುಕ್ತರಾದ ವಿಜಯ್ ಅವರ ಗಮನಕ್ಕೆ ತಂದ ಸಂದರ್ಭ ಅವರು ತಕ್ಷಣ ಸ್ಪಂದಿಸಿದ್ದಾರೆ. ಜಲಾವೃತಗೊಳ್ಳುವ ಅಪಾಯದ ಸಾಧ್ಯತೆ ಇದ್ದುದರಿಂದ ನಗರಸಭಾ ಸಿಬ್ಬಂದಿ ರಂಗಪ್ಪ ಅವರ ನೇತೃತ್ವದಲ್ಲಿ ಸಿಬ್ಬಂದಿಗಳು ತುರ್ತು ಕಾರ್ಯ ಕೈಗೊಂಡು ತುಂಬಿದ್ದ ಚರಂಡಿಯನ್ನು ಸ್ವಚ್ಛಗೊಳಿಸಿದ್ದಾರೆ.

ಕೊಳಕೇರಿಯಲ್ಲಿ ತಡೆಗೋಡೆ ಕುಸಿತ

ನಾಪೋಕ್ಲು: ನಾಪೋಕ್ಲು ಹೋಬಳಿ ವ್ಯಾಪ್ತಿಯ ಕೊಳಕೇರಿ ಗ್ರಾಮದಲ್ಲಿ ಗುರುವಾರ ರಾತ್ರಿ ಬಿರುಸಿನ ಮಳೆಯಾಗಿದ್ದು ಹಾನಿ ಸಂಭವಿಸಿದೆ.

ಕೊಳಕೇರಿ ಗ್ರಾಮದ ರಿತೇಶ್ ಎಂಬವರ ಮನೆಯ ಆವರಣಕ್ಕೆ ನಿರ್ಮಿಸಿದ ತಡೆಗೋಡೆ ಕುಸಿದುಬಿದ್ದಿದೆ. ನಾಪೋಕ್ಲು ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ೨ ಇಂಚಿಗೂ ಅಧಿಕ ಮಳೆ ಸುರಿದಿದೆ. ಸ್ಥಳಕ್ಕೆ ಕಂದಾಯ ಪರಿವೀಕ್ಷಕ ರವಿಕುಮಾರ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕುಲ್ಲೇಟಿರ ಹೇಮಾ ಅರುಣ್, ಸದಸ್ಯ ಅಶ್ರಫ್ ಕೆ.ವೈ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರಸ್ತೆಗೆ ಉರುಳಿದ ಮರ

ಚೆಟ್ಟಳ್ಳಿ: ನಿನ್ನೆ ರಾತ್ರಿಯ ಗಾಳಿ - ಮಳೆಗೆ ಚೆಟ್ಟಳ್ಳಿ- ಸಿದ್ದಾಪುರ ಮುಖ್ಯ ರಸ್ತೆಯ ಶ್ರೀಮಂಗಲ ಎಂಬಲ್ಲಿ ಬೃಹತ್ ಅತ್ತಿ ಮರವೊಂದು ಮುಖ್ಯರಸ್ತೆಗೆ ಬಿದ್ದು ಸಂಚಾರಕ್ಕೆ ಅಡ್ಡಿ ಉಂಟಾಯಿತು. ಪಕ್ಕದಲ್ಲಿನ ವಿದ್ಯುತ್ ತಂತಿಯ ಮೇಲೆ ಮರ ಉರುಳಿದ ಪರಿಣಾಮ ವಿದ್ಯುತ್ ಕಂಬಕ್ಕೆ ಹಾನಿ ಉಂಟಾಗಿದೆ.

ಸ್ಥಳೀಯರಾದ ಅಯ್ಯಂಡ್ರ ಸಂಜಯ್ ಮರಕತ್ತರಿಸುವ ಯಂತ್ರದ ಮೂಲಕ ಮರವನ್ನು ಕತ್ತರಿಸಿ ಬಸ್ ಹಾಗೂ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.