ಮಡಿಕೇರಿ, ಮೇ ೨೪: ಮಡಿಕೇರಿಯ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಸ್ಥಾನ ಟ್ರಸ್ಟ್ ವತಿಯಿಂದ ಶ್ರೀ ನಾಗಪ್ರತಿಷ್ಠಾ ಇಪ್ಪತ್ತನೇ ವಾರ್ಷಿಕೋತ್ಸವ ಮತ್ತು ಪೂಜಾ ಕಾರ್ಯಕ್ರಮ ತಾ. ೨೯ ರಂದು ಕುಂದುರಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದಲ್ಲಿ ಜರುಗಲಿದೆ.

ತಾ. ೨೮ ರಂದು ಸಂಜೆ ೬.೩೦ ರಿಂದ ಗುರುಗಣಪತಿ ಪೂಜೆ, ಪುಣ್ಯಾಹ, ಸಂಕಲ್ಪ, ಆಶ್ಲೇಷಬಲಿ ಮಂಗಳಾರತಿ ತೀರ್ಥಪ್ರಸಾದ ವಿತರಣೆ.

ತಾ. ೨೯ ರಂದು ಬೆಳಿಗ್ಗೆ ೮.೩೦ ರಿಂದ ಗುರುಗಣಪತಿ ಪೂಜೆ, ಪುಣ್ಯಾಹ, ನವಕಪ್ರಧಾನ ಕಲಶಸ್ಥಾಪನೆ, ನವಕ ಪ್ರಧಾನ ಹೋಮ, ಪೂರ್ಣಾಹುತಿ, ಸ್ವಾಮಿಯ ಸನ್ನಿಧಿಯಲ್ಲಿ ಪಂಚಾಮೃತಾಭಿಷೇಕ ಪವಮಾನ ಅಭಿಷೇಕ, ಕಲಶಾಭಿಷೇಕ, ಮಹಾಪೂಜೆ, ತೀರ್ಥಪ್ರಸಾದ ವಿತರಣೆ ನಡೆಯಲಿದೆ.