ಮಡಿಕೇರಿ, ಮೇ ೨೪: ತಾನು ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಪಕ್ಷದೊಳಗೆ ಉದ್ಭವಿಸಿರುವ ಲೋಪ-ದೋಷವನ್ನು ಸರಿಪಡಿಸಲು ಸ್ವತಂತ್ರವಾಗಿ ಸ್ಪರ್ಧಿಸುವ ಅಗತ್ಯತೆ ಇದೆ ಎಂದು ನೈಋತ್ಯ ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಿರುವ ಉಡುಪಿ ಮಾಜಿ ಶಾಸಕ ಕೆ. ರಘುಪತಿ ಭಟ್ ಪ್ರತಿಪಾದಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ಬಾರಿ ಶಾಸಕನಾಗಿ, ಒಮ್ಮೆ ನಗರಸಭಾ ಸದಸ್ಯನಾಗಿ ತಾನು ಪ್ರಾಮಾಣಿಕನಾಗಿ ದುಡಿದಿದ್ದೇನೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊನೆ ಘಳಿಗೆಯಲ್ಲಿ ಟಿಕೆಟ್ ಕೈತಪ್ಪಿತ್ತು. ಸಾಮಾಜಿಕ ನ್ಯಾಯದಡಿ ಟಿಕೆಟ್ ಬೇರೆಯವರಿಗೆ ನೀಡಲಾಗಿದೆ ಎಂದು ವರಿಷ್ಠರು ತಿಳಿಸಿದ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ಪರ ಹಗಲಿರುಳು ಶ್ರಮಿಸಿದ್ದೇನೆ. ಈ ಸಂದರ್ಭ ಆಯನೂರು ಮಂಜುನಾಥ್ ರಾಜೀನಾಮೆಯಿಂದ ತೆರವಾಗಿದ್ದ ಎಂ.ಎಲ್.ಸಿ. ಸ್ಥಾನವನ್ನು ನೀಡುವಂತೆ ಕೋರಿದ್ದೆ. ಚುನಾವಣೆಯಾಗದ ಹಿನ್ನೆಲೆ ಈ ಪ್ರಕ್ರಿಯೆ ನಡೆದಿರಲಿಲ್ಲ. ಚುನಾವಣೆ ಘೋಷಣೆ ಬಳಿಕವೂ ಟಿಕೆಟ್ ನೀಡುವಂತೆ ವರಿಷ್ಠರ ಗಮನ ಸೆಳೆದಿದ್ದೆ. ನೀಡುವ ಭರವಸೆಯೂ ಅವರಿಂದ ವ್ಯಕ್ತವಾಗಿತ್ತು. ಆದರೆ, ಪಕ್ಷಕ್ಕೆ ಇತ್ತೀಚಿಗೆ ಬಂದ ಒಬ್ಬರಿಗೆ ಟಿಕೆಟ್ ನೀಡಿ ಪಕ್ಷದ ಸಿದ್ಧಾಂತದಡಿ ಮುನ್ನಡೆಯುವ ತನಗೆ ಅವಕಾಶ ನೀಡದಿರುವುದು ಬೇಸರ ತರಿಸಿದೆ. ಹಲವು ವರ್ಷಗಳಿಂದ ದುಡಿದ ಒಬ್ಬರಿಗೆ ಸ್ಪರ್ಧಿಸಲು ಅವಕಾಶ ನೀಡಿದ್ದರೆ ತಾನು ಸ್ಪರ್ಧೆ ಮಾಡುತ್ತಿರಲಿಲ್ಲ ಎಂದು ಹೇಳಿದರು.

ಲೋಕಸಭಾ ಚುನಾವಣೆಯ ಸಂದರ್ಭವೂ ಬಿಜೆಪಿ ಪ್ರಬಾರಿಯಾಗಿ ಶಿವಮೊಗ್ಗ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೆ. ಈ ಸಂದರ್ಭ ಪದವೀಧರರ ಕ್ಷೇತ್ರದ ಅಭ್ಯರ್ಥಿಯಾಗಿ ಮಾಡುವುದಾಗಿ ಭರವಸೆ ಪಕ್ಷದಿಂದ ದೊರೆತಿತ್ತು. ಈ ಹಿನ್ನೆಲೆ ಚುನಾವಣೆಗೂ ಸಿದ್ಧನಾಗಿದ್ದೆ. ಬದಲಾದ ಬೆಳವಣಿಗೆಯಿಂದ ಪಕ್ಷದ ಕಾರ್ಯಕರ್ತರು ನೊಂದಿದ್ದಾರೆ. ಪದವೀಧರ ಅಥವಾ ಶಿಕ್ಷಕರ ಕ್ಷೇತ್ರದ ಒಂದು ಸ್ಥಾನವನ್ನು ಕರಾವಳಿಯವರಿಗೆ ನೀಡಿಲ್ಲ. ಇತ್ತೀಚಿಗೆ ಬಿಜೆಪಿಯೊಳಗೆ ಹಿಂದೂಪರ ನಾಯಕರ ಕಡೆಗಣನೆ ಬಗ್ಗೆ ತನಗೂ ಬೇಸರವಿದೆ. ಸಂಘ ಪರಿವಾರ ಕಾರ್ಯಕರ್ತ ಶಿವಮೊಗ್ಗದ ಹರ್ಷ ಕೊಲೆ ಸಂಭವಿಸಿದ ಸಮಯದಲ್ಲಿ ಬಿಜೆಪಿ ಸರಕಾರದ ವಿರುದ್ಧ ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ‘ಶಾಂತಿಯ ನಡಿಗೆ’ ನಡೆಸಿದವರಿಗೆ ಟಿಕೆಟ್ ನೀಡಲಾಗಿದೆ ಎಂದು ಆರೋಪಿಸಿದರು.

ಈ ಚುನಾವಣೆ ಯಾವ ಪಕ್ಷದ ಚಿಹ್ನೆಯಡಿ ನಡೆಯುವುದಿಲ್ಲ. ಇದರಿಂದ ಸರಕಾರದ ರಚನೆಯೂ ಸಾಧ್ಯವಿಲ್ಲ. ಈ ಕಾರಣಕ್ಕಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದೇನೆ. ಯಾರನ್ನೋ ಸೋಲಿಸುವ ಉದ್ದೇಶದಿಂದ ತಾನು ಕಣದಲ್ಲಿಲ್ಲ. ನಾನು ಗೆಲ್ಲಬೇಕೆಂಬ ಹಠದಿಂದ ಸ್ಪರ್ಧೆ ಮಾಡುತ್ತಿದ್ದೇನೆ. ಗೆದ್ದ ನಂತರ ತನ್ನ ಬೆಂಬಲ ಬಿಜೆಪಿಗೆ ಇರಲಿದೆ ಎಂದು ಸ್ಪಷ್ಟಪಡಿಸಿದ ಅವರು, ಪದವೀಧರ ಕ್ಷೇತ್ರದ ಪ್ರತಿನಿಧಿ ಯಾರೊಬ್ಬರೂ ಮಾಡದ ಕೆಲಸ ತಾನು ಮಾಡಿ ತೋರಿಸುತ್ತೇನೆ. ಪದವೀಧರರ ನೆಟ್‌ವರ್ಕ್ ಮಾಡಿ ಸಂಪರ್ಕ ಸುಲಭ ಮಾಡುತ್ತೇನೆ. ಈ ಮೂಲಕ ಉದ್ಯೋಗ ಅವಕಾಶ ಸೃಷ್ಟಿಗೆ ಪೂರಕವಾಗುತ್ತದೆ. ಜೊತೆಗೆ ಪ್ರತಿ ೬ ವರ್ಷಕ್ಕೊಮ್ಮೆ ಹಳೆ ಪದವೀಧರ ಮತದಾರರು ನೋಂದಣಿ ಮಾಡಬೇಕೆಂಬ ನಿಯಮ ಸರಿಯಲ್ಲ. ಇದರ ಬದಲಾವಣೆಯೂ ಅಗತ್ಯವಿದೆ ಎಂದು ಹೇಳಿದರು.

ಉಚ್ಚಾಟನೆ ಸಂಬAಧ ಹೈಕಮಾಂಡ್ ನೀಡಿರುವ ನೋಟೀಸ್ ತನ್ನ ಕೈ ತಲುಪಿಲ್ಲ. ಶಿಸ್ತು ಸಮಿತಿ ತನ್ನನ್ನು ಕರೆಸಿ ಮಾತನಾಡಿದರೆ, ಪಕ್ಷದೊಳಗೆ ಏರ್ಪಟ್ಟ ಸಮಸ್ಯೆ, ನೈಜ ಕಾರ್ಯಕರ್ತರ ಕಡೆಗಣನೆ ಬಗ್ಗೆ ನೇರವಾಗಿ ಪ್ರಸ್ತಾಪಿಸುತ್ತೇನೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಗೋಷ್ಠಿಯಲ್ಲಿ ಪ್ರಮುಖರಾದ ಮುಂಡAಡ ನಾಣಯ್ಯ, ವಸಂತ್ ಗಿಳಿಯಾರ್, ಶರತ್ ಶೆಟ್ಟಿ, ಮಾಳೆಯಂಡ ಅಪ್ಪಣ್ಣ, ನಿಖಿಲ್ ನಾಯಕ್ ಉಪಸ್ಥಿತರಿದ್ದರು.

ಬೆಂಬಲಿಗರೊAದಿಗೆ ಮಡಿಕೇರಿಯಲ್ಲಿ ಸಭೆ

ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಅಭ್ಯರ್ಥಿ ರಘುಪತಿ ಭಟ್ ತಮ್ಮ ಬೆಂಬಲಿಗರೊAದಿಗೆ ಸಭೆ ನಡೆಸಿದರು.

ಬಿಜೆಪಿ ಪ್ರಮುಖ ಮುಂಡAಡ ನಾಣಯ್ಯ ಮಾತನಾಡಿ, ಮೂರು ಬಾರಿ ಶಾಸಕರಾಗಿ ರಘುಪತಿ ಅವರು ಜನಾನುರಾಗಿಯಾಗಿ ದುಡಿದಿದ್ದಾರೆ. ಗಮನಾರ್ಹ ವ್ಯಕ್ತಿತ್ವದ ರಘುಪತಿ ಅವರಿಗೆ ಕೆಲವೊಂದು ಕಾರಣದಿಂದ ಟಿಕೆಟ್ ತಪ್ಪಿತ್ತು. ಈ ನಡುವೆಯೂ ನಿಷ್ಠಾವಂತ ಕಾರ್ಯಕರ್ತನಾಗಿ ದುಡಿದು ಪ್ರಾಮಾಣಿಕತೆ ತೋರಿದ್ದಾರೆ. ಇಂತವರು ರಾಜಕಾರಣದಲ್ಲಿರಬೇಕು. ಆದರೆ, ಪಕ್ಷ ಅಧಿಕೃತ ಅಭ್ಯರ್ಥಿಯಾಗದ ಹಿನ್ನೆಲೆ ಸ್ವತಂತ್ರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಅವರನ್ನು ಪದವೀಧರರು ಬೆಂಬಲಿಸಬೇಕು ಎಂದರು.

ಅಭ್ಯರ್ಥಿ ರಘುನಾಥ್ ಭಟ್ ಮಾತನಾಡಿ, ಬಿಜೆಪಿ ಕಾರ್ಯಕರ್ತರ ಬೆಂಬಲಿತನಾಗಿ ತಾನು ಸ್ಪರ್ಧಿಸುತ್ತಿದ್ದು, ಜವಾಬ್ದಾರಿ ಹೆಚ್ಚಿಸಿದೆ. ಪ್ರತ್ಯೇಕ್ಷ-ಪರೋಕ್ಷವಾಗಿ ಅಪಾರ ಬೆಂಬಲ ದೊರೆಯುತ್ತಿರುವುದು ಖುಷಿ ತರಿಸಿದೆ. ನಿಮ್ಮ ನಿರೀಕ್ಷೆಗೆ ತಕ್ಕ ಕೆಲಸ ತನ್ನಿಂದಾಗುತ್ತದೆ. ಕಾರ್ಯಕರ್ತರ ಗೌರವವನ್ನು ಉಳಿಸುತ್ತೇನೆ. ತನಗೆ ಮೂರು ಬಾರಿ ಟಿಕೆಟ್ ತಪ್ಪಿದೆ. ಈ ಸಂದರ್ಭ ಯಾವುದೇ ಗೊಂದಲ ಸೃಷ್ಟಿಸದೆ ಪಕ್ಷದ ಪರ ನಿಲುವು ಹೊಂದಿರುವ ಕಾರಣಕ್ಕೆ ಬದ್ಧನಾಗಿ ಪಕ್ಷಪರ ದುಡಿದ್ದೇನೆ. ಪಕ್ಷ ಸಂಘಟನೆಯಲ್ಲಿ ಹಿರಿತನ ಇದ್ದರೂ ತಾನು ಸಚಿವನಾಗುವ ಆಕಾಂಕ್ಷೆ ಹೊಂದದೆ ನಿಸ್ವಾರ್ಥವಾಗಿ ದುಡಿದಿದ್ದೇನೆ. ಗೆಲುವು ಸಾಧಿಸಿದಲ್ಲಿ ಕಾರ್ಯಕರ್ತರ ಪರ ಧ್ವನಿಯಾಗಿ ಕೆಲಸ ಮಾಡುತ್ತೇನೆ. ವಿಧಾನ ಪರಿಷತ್ತಿನಲ್ಲಿ ಕಾನೂನು ಜಾರಿ, ಸಮಸ್ಯೆಗಳ ಬಗ್ಗೆ ಪ್ರಸ್ತಾಪಕ್ಕೆ ವಿಪುಲ ಅವಕಾಶಗಳಿದ್ದು, ತನ್ನಿಂದ ಪರಿಣಾಮಕಾರಿ ಕೆಲಸ ಮಾಡಲು ಸಾಧ್ಯ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಿಂದೂಪರ ಸಂಘಟನೆ ನಾಯಕ ಮಾಳೆಯಂಡ ಅಪ್ಪಣ್ಣ ಮಾತನಾಡಿ, ಕಾರ್ಯಕರ್ತರು ಪ್ರತಿಭಟನೆ ಮಾಡಲು ಮಾತ್ರ ಸೀಮಿತರಲ್ಲ. ಬಿಜೆಪಿಯ ಬದ್ಧತೆ ಇಲ್ಲದವರನ್ನು ಅಭ್ಯರ್ಥಿ ಮಾಡಿರುವುದು ಸರಿಯಲ್ಲ. ಬಿಜೆಪಿ ಮೊದಲಿನಂತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ಲಾಬಿ ರಾಜಕಾರಣ ಇನ್ನು ಮುಂದೆ ನಡೆಯಬಾರದು. ಅದಕ್ಕೆ ಈ ಫಲಿತಾಂಶ ಉದಾಹರಣೆಯಾಗಬೇಕೆಂದು ಟೀಕಿಸಿದರು. ಸಭೆಯಲ್ಲಿ ಪ್ರಮುಖರಾದ ಚೇತನ್, ವಸಂತ್ ಗಿಳಿಯಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.