ರಜಾ ಮುಗಿತಾ ಬಂತು...

ಹಾಯ್,

ನಾನು ದೇಸ್ನವಿ. ಎಲ್.ಕೆ.ಜಿ.ಯಿಂದ ಯುಕೆಜಿಗೆ ಹೋಗುತ್ತಾ ಇದ್ದೀನಿ ಎಂದು ಒಂದು ಕಡೆ ಖುಷಿಯಾದರೆ, ಇನ್ನೊಂದು ಕಡೆ ರಜಾದಲ್ಲಿ ಮಜಾ ಮಾಡಲು ಕಾಯ್ತ ಇದ್ದೆ. ಹಾಗೆ ನನ್ನ ರಜೆಯ ಸವಿನೆನಪುಗಳನ್ನು ಒಂದಿಷ್ಟು ನಿಮ್ಮೊಂದಿಗೆ ಸಂತೋಷ ದಿಂದ ಹಂಚಿಕೊಳ್ಳುತ್ತಿದ್ದೇನೆ. ನನ್ನ ಎಲ್.ಕೆ.ಜಿ. ಎಕ್ಸಾಂ ಮುಗಿದ ನಂತರ ಅಜ್ಜಿ ಮನೆಗೆ ಹೋಗುವ ತವಕದಲ್ಲಿ ಬೇಗ ಬೇಗ ನನಗೆ ಕೊಟ್ಟಂತಹ ಪ್ರಾಜೆಕ್ಟ್ ಕೆಲಸ ಮತ್ತು ಕೆಲವೊಂದು ಹೋಂವರ್ಕ್ನ್ನು ಮುಗಿಸಿ ಮನೆಯ ಹತ್ತಿರದ ಫ್ರೆಂಡ್ಸ್ಗಳಿಗೆ ಬಾಯಿ ಬಾಯಿ ಹೇಳುತ್ತ ನನ್ನ ಪ್ರೀತಿಯ ನಾಯಿ (ಒiಛಿಞeಥಿ) ಜೊತೆ ಅಜ್ಜಿ ಮನೆಗೆ ಹೊರಟೆ. ಅಜ್ಜಿ ಮನೆಯಲ್ಲಿ ಅಜ್ಜಿ, ತಾತನ ಜೊತೆ ಆಟವಾಡುತ್ತಾ ದಿನಾಲು ಹೊಳೆಯಲ್ಲಿ ನೀರಿನಲ್ಲಿ ಆಟವಾಡುತ್ತಾ, ಅಲ್ಪ ಸ್ವಲ್ಪ ಈಜಲು ಕಲಿತೆ. ನಂತರ ಹೊಸ ಸ್ನೇಹಿತರ ಜೊತೆ ಕಣ್ಣು ಮುಚ್ಚಾಲೆ, ಹಿಡಿಯುವ ಆಟ ಆಡುತ್ತಾ, ಮದುವೆ ಮನೆ, ದೇವರ ಹಬ್ಬಗಳಿಗೆ ಹೋಗಿ ನೋಡುತ್ತಾ, ಹೊಸ ಊಟ ತಿಂಡಿಗಳನ್ನು ತಿನ್ನುತ್ತಾ ರಾತ್ರಿ ಸಮಯದಲ್ಲಿ ಯು.ಕೆ.ಜಿ.ಗೆ ಬರುವ ಪಾಠಗಳನ್ನು ಕಲಿತೆ. ಮಗ್ಗಿ ಕೂಡ ಕಲಿಯೋದು, ನಂಬರ್‌ಗಳು, ಕನ್ನಡದಲ್ಲಿ ಬರುವ ಸ್ವರಗಳು, ವ್ಯಂಜನಗಳು, ಪದಗಳು, ಇಂಗ್ಲೀಷ್ ಪದಗಳು, ಹಿಂದಿ ಪದಗಳನ್ನು ಕಲಿತೆ.

ಅಂತೂ ಇಂತು ನನ್ನ ರಜೆಯ ದಿನಗಳು ಮುಗಿತಾ ಬಂತು.

-ನAಗಾರು ದೇಸ್ನವಿ ಪುನೀತ್, ಚೆಟ್ಟಿಮಾನಿ.

ನನಗೆ ಬೇಸಿಗೆ ರಜೆ ಎಂದರೆ ತುಂಬಾ ಪ್ರಿಯ. ಬೇಸಿಗೆ ರಜೆಯ ಮೊದಲು ಹದಿನೈದು ದಿನಗಳು ಅಬಾಕಸ್ ಪರೀಕ್ಷೆ ಹಾಗೂ ಕರಾಟೆ ಅಭ್ಯಾಸದಲ್ಲಿಯೇ ಕಳೆದು ಹೋಯಿತು. ಏಕೆಂದರೆ ನಾನು ಕ್ಯಾಲಿಕಟ್‌ನಲ್ಲಿ ನಡೆದ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸಬೇಕಿತ್ತು. ೧೧-೧೨ಕ್ಕೆ ನಡೆದ ಕರಾಟೆಯಲ್ಲಿ ಭಾಗವಹಿಸಿ ಬೀಚ್‌ಗೆ ಹೋಗಿ ಮನೆಯವರ ಜೊತೆ ತುಂಬಾ ಮಜಾ ಮಾಡಿದೆ. ಹಾಗೆ ಉಖSಗೆ ಕೂಡ ಹೋಗಿದ್ದೆವು. ಅಪ್ಪ, ಅಮ್ಮ, ಅಜ್ಜಿ, ಚಿಕ್ಕಪ್ಪ, ಅಕ್ಕ, ತಮ್ಮ, ಅತ್ತೆ, ಮಾವ ಎಲ್ಲರ ಜೊತೆ ತುಂಬಾ ಮಜಾ ಮಾಡಿದೆನು. ನನಗೆ ತುಂಬಾ ಖುಷಿಯಾಯಿತು. ಶಾಲೆ ಶುರುವಾಗುವ ಮೊದಲು ಹಾಸನದಲ್ಲಿ ಇರುವ ಅಜ್ಜನ ಮನೆಗೆ ಹೋಗಿ ಅಲ್ಲಿ ಸ್ವಲ್ಪ ದಿನ ಅಜ್ಜಿ ಮತ್ತು ಮಾಮನ ಜೊತೆ ಸಮಯ ಕಳೆದು ಬರುತ್ತೇನೆ.

-ಕೆ.ಆರ್. ಅನರ್ಘ್ಯ ಪೂವಯ್ಯ

೨ನೇ ತರಗತಿ, ಕ್ರಿಯೇಟಿವ್ ಅಕಾಡೆಮಿ, ಸೋಮವಾರಪೇಟೆ.

ಆಟ ಮುಗಿಸಿ ಶಾಲೆಗೆ ತಯಾರಿ

ನಮಗೆ ಬೇಸಿಗೆ ರಜೆ ಶುರುವಾಗಿದ್ದು ಮಾರ್ಚ್ ೧೬ರಂದು. ನಾನು ಮೈಸೂರಿಗೆ ಅಜ್ಜಿಯ ಮನೆಗೆ ಹೋಗಿದ್ದೆ. ಅಕ್ಕಪಕ್ಕದ ಮಕ್ಕಳ ಜೊತೆ ಆಟವಾಡಿದೆ. ಮರ ಗಿಡ, ಹೂ ಗಿಡಗಳಿಗೆ ನೀರು ಹಾಕಿದೆ. ಬೇರೆ ಬೇರೆ ದೇವಸ್ಥಾನಗಳಿಗೆ, ಮಾಲ್‌ಗಳಿಗೆ, ಪಾರ್ಕ್ಗೆ ಹೋಗಿದ್ದೆ. ನಾನು ಹಿಡಿಯುವ ಆಟ, ಗೋಲಿ, ಮಾಲ್‌ನಲ್ಲಿ ಕಾರ್ ಗೇಮ್, ಬೈಕ್ ಗೇಮ್ ಆಟ ಆಡಿದೆ. ನಾನು ನನ್ನ ಕುಟುಂಬದವರ ಜೊತೆ ಗೃಹಪ್ರವೇಶ, ಮದುವೆಗೆ ಹೋಗಿದ್ದೆ. ನಾನು ನನ್ನ ತಮ್ಮ ಶಬರಿ ಸೇರಿ ಕಳೆ ಕಿತ್ತೆವು. ಅಮ್ಮನಿಗೆ ಸಹಾಯ ಮಾಡಿದೆವು. ಅಪ್ಪನಿಗೆ ಕಾರು ತೊಳೆಯಲು ಸಹಾಯ ಮಾಡಿದೆ. ಅಕ್ಕ, ಅಣ್ಣಂದಿರ ಜೊತೆ ಸುತ್ತಾಡಿದೆ. ಆಂಟಿ ನೆಂಟರ ಮನೆಗೆ ಹೋಗಿದ್ದೆ. ಅಜ್ಜಿಯೊಂದಿಗೆ ಸಂತೋಷವಾಗಿ ಇದ್ದೇವೆ. ಹೀಗೆ ರಜೆಯನ್ನು ನಾನು ನನ್ನ ತಮ್ಮ ಮಜವಾಗಿ ಕಳೆಯುತ್ತಿದ್ದೇವೆ. ಮುಂದೆ ಶಾಲೆಗೆ ಹೋಗಲು ತಯಾರಿ ಮಾಡಿಕೊಳ್ಳುವೆ.

-ಪ್ರಣವ್ ಅಯ್ಯಪ್ಪ ಎಸ್.ಡಿ.,

೫ನೇ ತರಗತಿ, ಲಯನ್ಸ್ ಪ್ರಾಥಮಿಕ ಶಾಲೆ, ಗೋಣಿಕೊಪ್ಪಲು.

ನಾ ಎಲ್ಲಿಗೂ ಹೋಗಲಿಲ್ಲ...

ನನ್ನ ಹೆಸರು ಡೀನ ಸಿ.ಸಿ.

ನನ್ನ ಶಾಲೆಯ ಹೆಸರು ಶಾಂತಿನಿಕೇತನ

ನಾನು ಐದನೇ ತರಗತಿಯಲ್ಲಿ ಓದುತ್ತಿದ್ದೇನೆ. ನಾನು ನನ್ನ ಬೇಸಿಗೆ ರಜೆಯಲ್ಲಿ ಒಂದು ತಿಂಗಳಿನಿAದ ನವೋದಯ ಪೂರ್ವಸಿದ್ಧತೆಯ ತರಗತಿಗೆ ಹೋಗುತ್ತಿದ್ದೆ. ಆ ಕಾರಣದಿಂದ ನಾನು ಎಲ್ಲಿಗೂ ಹೋಗಲು ಸಾಧ್ಯವಾಗಲಿಲ್ಲ. ಆದುದರಿಂದ ಇನ್ನು ಮುಂದಿನ ರಜಾ ದಿನಗಳನ್ನು ನನ್ನ ನೆಂಟರ ಮನೆಗೆ ಹೋಗಲು ತೀರ್ಮಾನಿಸಿದ್ದೇನೆ.

ಅಮ್ಮನ ಕಷ್ಟ ಅರಿತುಕೊಂಡೆ...!

ನನ್ನ ರಜಾ ದಿನಗಳು ಎಲ್ಲಾ ಮಕ್ಕಳಂತೆ ಸಂತೋಷದಿAದ ತುಂಬಿರಲಿಲ್ಲ. ನನ್ನ ಅಜ್ಜಿಗೆ ಆರೋಗ್ಯದಲ್ಲಿ ತೊಂದರೆಯಾದ ಕಾರಣ ಅವರನ್ನು ನಮ್ಮ ಮನೆಗೆ ಕರೆತಂದಿದ್ದಾರೆ. ನಮ್ಮ ಮನೆಯಲ್ಲಿ ದಿನಪೂರ್ತಿ ತಾಯಿಯ ಕಣ್ಣೀರನ್ನು ನೋಡುತ್ತಾ ನಮ್ಮ ಮನೆಯ ವಾತಾವರಣ ಬಹಳ ದುಃಖದಿಂದ ತುಂಬಿತ್ತು. ಹಾಗೇ ಶಾಲೆಯಲ್ಲಿ ನೀಡಿದ ಹೋಂವರ್ಕ್ನ್ನು ಮುಗಿಸುತ್ತಾ ಎಲ್ಲೂ ಹೋಗದೆ ತಾಯಿಗೆ ಮನೆಯಲ್ಲಿ ನನ್ನ ಕೈಲಾದ ಕೆಲಸ ಮಾಡಿ ಅವರಿಗೆ ಸ್ವಲ್ಪ ಸಹಾಯ ಮಾಡಿಕೊಡುತ್ತಿದ್ದೆ. ಈ ಸಲ ರಜೆ ದಿನಗಳಲ್ಲಿ ಎಲ್ಲೂ ಆಡಲು ಹೋಗಲಿಲ್ಲ. ಮನೆಯಲ್ಲೇ ಕಳೆದೆ. ಹಾಗೆ ಸ್ವಲ್ಪ ವಿಷಯಗಳನ್ನು ಕಲಿತಿರುವೆನು. ಯಾವಾಗ ಶಾಲೆಗೆ ಹೋಗುವುದೆಂದು ಕಾಯುತ್ತಿರುವೆನು. ಆದರೂ, ಈ ರಜೆ ದಿನಗಳಲ್ಲಿ ಅಮ್ಮನ ಕಷ್ಟಗಳನ್ನು ಅರಿತುಕೊಂಡೆ.

- ದರ್ಶಿನಿ ಜಿ., ಓ.ಎಲ್.ವಿ., ಸೋಮವಾರಪೇಟೆ.

ಪ್ರವಾಸಕ್ಕೆ ಹೋಗಿದ್ದೆ...

ನನಗೆ ಬೇಸಿಗೆ ಕಾಲವೆಂದರೆ ತುಂಬಾ ಇಷ್ಟ. ಏಕೆಂದರೆ ಶಾಲೆಗಳಲ್ಲಿ ವಾರ್ಷಿಕ ಪರೀಕ್ಷೆಯನ್ನು ಮುಗಿಸಿ ಫಲಿತಾಂಶ ಪ್ರಕಟಿಸಿ ಬೇಸಿಗೆ ರಜೆಯನ್ನು ನೀಡುತ್ತಾರೆ. ಈ ಬೇಸಿಗೆ ರಜೆಯಲ್ಲಿ ನಾನು ಮೈಸೂರು ಮತ್ತು ಮಂಗಳೂರಿಗೆ ಪ್ರವಾಸ ಹೋಗಿದ್ದೆ. ನಾನು ಅಜ್ಜ, ಅಪ್ಪ, ಅಮ್ಮ, ಪುಟ್ಟ ತಮ್ಮ ಮತ್ತು ಚಿಕ್ಕಪ್ಪನೊಂದಿಗೆ ಖುಷಿಯಾಗಿ ಅಲ್ಲಿನ ಪ್ರವಾಸಿ ತಾಣಗಳನ್ನು ನೋಡಿಕೊಂಡು ಬಂದೆ. ಮೈಸೂರಿನ ಮೃಗಾಲಯದಲ್ಲಿ ಅನೇಕ ಪ್ರಾಣಿ-ಪಕ್ಷಿಗಳು, ಹಾವು ಎಲ್ಲವನ್ನು ಹತ್ತಿರದಿಂದ ನೋಡಿ ಆನಂದವಾಯಿತು. ನನಗೆ ಚಿತ್ರ ಬಿಡಿಸುವುದು ಎಂದರೆ ತುಂಬಾ ಇಷ್ಟ. ಈ ರಜೆಯಲ್ಲಿ ಅನೇಕ ರೀತಿಯ ಚಿತ್ರಗಳನ್ನು ಬಿಡಿಸಿರುವೆ ಮತ್ತು ಪ್ರತಿದಿನ ಶಕ್ತಿ ದಿನಪತ್ರಿಕೆಯನ್ನು ಓದುತ್ತೇನೆ.

- ಕೇಶವ ಎಂ.ಎA., ೬ನೇ ತರಗತಿ, ಫಾತಿಮಾ ಕಾನ್ವೆಂಟ್, ಕುಶಾಲನಗರ.

ಪ್ರಧಾನಿಯವರನ್ನು ನೋಡಿದ ಅದೃಷ್ಟ

ಬೇಸಿಗೆ ರಜೆ ಎಂದರೆ ನನಗೆ ತುಂಬಾ ಇಷ್ಟ. ಊರಿನಲ್ಲಿ ಇರುವ ಜಾತ್ರೆ, ಭೂತಕೋಲಗಳನ್ನು ನೋಡಲು ಕಾತುರದಿಂದ ಕಾಯುತ್ತಾ ಇರುತ್ತೇನೆ. ಬೇಸಿಗೆ ರಜೆ ಸಿಕ್ಕಿದ ಕೂಡಲೇ ಅಜ್ಜಿಯ ಮನೆಗೆ ಹೋಗುತ್ತೇನೆ. ಕಳೆದ ವರ್ಷ ಕುಟುಂಬ ಸಮೇತ ತಮಿಳುನಾಡಿನ ರಾಮೇಶ್ವರ, ಪಳನಿ, ಧನುಷ್ಕೋಟಿ, ಪಾಂಬನ್ ಸೇತುವೆ, ಮಧುರೈ ಹಾಗೂ ಭಾರತದ ಹೆಮ್ಮೆಯ ಮಾಜಿ ರಾಷ್ಟçಪತಿ ದಿ. ಡಾ. ಅಬ್ದುಲ್ ಕಲಾಂ ಅವರ ಸ್ಮಾರಕಕ್ಕೆ ಭೇಟಿ ನೀಡಿದ್ದು ತುಂಬಾನೇ ಖುಷಿ ನೀಡಿದೆ.

ಈ ವರ್ಷ ಭಾರತದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜೀ ಅವರನ್ನು ಮಂಗಳೂರಿನ ರೋಡ್ ಶೋದಲ್ಲಿ ಅತಿ ಹತ್ತಿರದಿಂದ ನೋಡಿದ ಅದೃಷ್ಟ ನನ್ನದಾಯಿತು. ನಂತರ ಕೇರಳದ ಪ್ರಸಿದ್ಧ ಪ್ರವಾಸಿ ತಾಣವಾದ ಮುನ್ನಾರ್‌ಗೆ ಹೋದೆವು. ಟೀ ಎಸ್ಟೇಟ್‌ನ ಸೊಬಗು, ಕೊಂಡಳಾ ಡ್ಯಾಂಮ್‌ನ ವೀಕ್ಷಣೆ, ಟಾಪ್ ಸ್ಟೇಷನ್‌ನಲ್ಲಿ ಪ್ರಕೃತಿ ಸೊಬಗನ್ನು ಸವಿದೆವು.

ಬೇಸಿಗೆ ರಜೆಯನ್ನು ಪ್ರಕೃತಿ ಮತ್ತು ಹಳ್ಳಿಯ ಜಾತ್ರಾ ಸಡಗರದ ಜೊತೆ ಅಜ್ಜಿಯ ಅಕ್ಕರೆ, ಚಿಕ್ಕಮ್ಮಂದಿರ ಪ್ರೀತಿಯಿಂದ ಕಳೆಯುವೆನು.

- ವಿಶ್ಮಾ ದಯಾನಂದ ರೈ, ೭ನೇ ತರಗತಿ, ನ್ಯಾಷನಲ್ ಅಕಾಡೆಮಿ ಶಾಲೆ, ಅತ್ತೂರು.

ಸೇನೆಯ ಶಿಸ್ತನ್ನು ಕಲಿತೆ

ನಾನು ರಜೆಯಲ್ಲಿ ನನ್ನ ತಂದೆಯ ಹತ್ತಿರ ಸಿಖಂದರ್‌ಬಾದ್‌ಗೆ ಹೋಗಿದ್ದೆ. ನನ್ನ ತಂದೆ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಅವರ ಕಂಪೆನಿಯ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಿದ್ದು ನನಗೆ ತುಂಬಾ ಖುಷಿಯಾಯಿತು. ನಾನು ಅಲ್ಲಿ ಒಂದು ತಿಂಗಳು ಸಮ್ಮರ್ ಕ್ಯಾಂಪ್‌ನಲ್ಲಿ ಬಾಸ್ಕೆಟ್‌ಬಾಲ್, ಸ್ಕೇಟಿಂಗ್ ಕಲಿತೆ. ಯಾವಾಗಲೂ ಪಾರ್ಕ್ನಲ್ಲಿ ನಾನು ಮತ್ತು ಗೆಳತಿಯರು ಆಟವಾಡುತ್ತಿದ್ದೆವು. ಹೈದರ್‌ಬಾದ್ ಒಂದು ಪ್ರವಾಸಿತಾಣ. ಅಲ್ಲಿ ಬಿರ್ಲಾ ಮಂದಿರ್, ಬಿರ್ಲಾ ಸೈನ್ಸ್ ಮ್ಯೂಸಿಯಂ, ರಾಮೋಜಿರಾವ್ ಫಿಲಂಸಿಟಿ, ಹುಸೇನ್ ಪಾರ್ಕ್ ನೋಡಿ ತುಂಬಾ ಖುಷಿಯಾಯಿತು. ಇದೇ ಮೊದಲ ಬಾರಿಗೆ ನನ್ನ ಹುಟ್ಟು ಹಬ್ಬವನ್ನು ಹೈದರ್‌ಬಾದ್‌ನಲ್ಲಿ ನನ್ನ ತಂದೆಯ ಗೆಳೆಯರೊಂದಿಗೆ ಆಚರಿಸಿಕೊಂಡಿದ್ದು ನನಗೆ ತುಂಬಾ ಖುಷಿಯಾಯಿತು. ಅಲ್ಲಿ ಅವರ ಸೇನೆಯ ಶಿಸ್ತನ್ನು ಕಲಿತೆ. ದೂರದ ಪ್ರಯಾಣ ಬಸ್ ಮತ್ತು ರೈಲಿನಲ್ಲಿ ಹೋಗಿದ್ದು ಒಂದು ಹೊಸ ಅನುಭವವಾಯಿತು. ಆದರೆ ಹೋಗುವಾಗ ಕಸದ ರಾಶಿಗಳನ್ನು ನೋಡುವಾಗ ತುಂಬಾ ಬೇಸರವಾಗುತ್ತಿತ್ತು. ಇದೇ ಮೊದಲ ಬಾರಿಗೆ ಬಿಸಿಲಿನ ತಾಪ ಜಾಸ್ತಿ ಇರುವುದರಿಂದ ಹೊರಗಡೆ ಆಟವಾಡುವುದು ಸ್ವಲ್ಪ ಕಷ್ಟವಾಯಿತು. ಮನೆಯಲ್ಲಿ ಲೂಡೋ, ಚೆಸ್ ಸ್ನೇಕ್ ಆ್ಯಂಡ್ ಲ್ಯಾಡರ್ ಆಟವನ್ನು ಆಡುತ್ತಿದ್ದೆವು.

ಹೈದಾರ್‌ಬಾದ್‌ನಿಂದ ಬಂದ ನಂತರ ಮನೆಯಲ್ಲಿ ಸ್ವಲ್ಪ ಹೋಂವರ್ಕ್ ಮಾಡಿದ್ದೆ. ನಂತರ ನನ್ನ ಅಜ್ಜಿಯ ಮನೆಗೆ ನಾನು ನನ್ನ ತಮ್ಮ ಹೊರಟೆವು. ಅಲ್ಲಿ ಹಳ್ಳಿಯಲ್ಲಿ ದನಕರುಗಳು ಮತ್ತು ಹೊಳೆಯಲ್ಲಿ ಆಟವಾಡುತ್ತಾ ರಜೆಯನ್ನು ಮಜಾ ಮಾಡಿದೆವು.

- ಮುದ್ಯನ ಭವಿಷ್ಯ ಎಂ.ಆರ್. ಮದೆನಾಡು.ಹೊಸ ಚಟುವಟಿಕೆಗಳನ್ನು ಕಲಿತೆ

ಈ ಬೇಸಿಗೆ ರಜೆಯಲ್ಲಿ ನಾನು ತುಂಬಾ ಹೊಸ ತರಹದ ಚಟುವಟಿಕೆಗಳನ್ನು ಕಲಿತೆ. ಮನೆಯಲ್ಲೇ ಇದ್ದು ದಿನಾಲೂ ಒಂದು ಚಿತ್ರ ಬಿಡಿಸುತ್ತಿದ್ದೆ. ಮಧ್ಯಾಹ್ನ ಸಂಗೀತ ಪಾಠಕ್ಕೆ ಹೋಗಿ ನಂತರ ಅಲ್ಲಿಂದ ಬ್ಯಾಡ್‌ಮಿಂಟನ್ ಕೋಚಿಂಗ್‌ಗೆ ಹೋಗುತ್ತಿದ್ದೆ. ಇದೆಲ್ಲವನ್ನು ಮುಗಿಸಿಕೊಂಡು ಬರುವಷ್ಟರಲ್ಲಿ ಸಮಯ ಸಂಜೆಯ ೬ ಗಂಟೆ. ತಿಂಡಿ ತಿಂದು, ಸ್ನಾನ ಮಾಡಿ ಶಾಲೆಯವರು ಕೊಟ್ಟ ಹೋಂವರ್ಕ್ ಅನ್ನು ರಾತ್ರಿ ಮುಗಿಸುತ್ತಿದ್ದೆ. ಅದರ ಜೊತೆಗೆ ಮಧ್ಯದಲ್ಲಿ ಮೈಸೂರಿಗೆ ಹೋದೆ. ಆದರೆ ಮೈಸೂರಿನಿಂದ ಬಂದ ನಂತರ ನನಗೆ ಹುಶಾರಿಲ್ಲದಾಯಿತು. ೫ ದಿನ ವ್ಯರ್ಥವಾಗಿ ಹೋಯಿತು ಎಂಬ ದುಃಖ ಈಗಲೂ ಇದೆ. ಮನೆಯಲ್ಲಿ ಇದ್ದು ಲಿಪ್ಪನ ಎಂಬ ಗುಜರಾತಿ ಕಲೆಯನ್ನು ಕಲಿತೆ. ಗೋತಿಕ್ ಸ್ಟೇಯಿನ್ ಗಾಜಿನ ಕಲೆಯ ಬಗ್ಗೆ ಪುಸ್ತಕದಲ್ಲಿ ಓದಿ ನಾನು ಗ್ಲಾಸ್ ಆರ್ಟ್ ಎಂಬ ಬಣ್ಣವನ್ನು ತಂದು ಚಿತ್ರ ಬಿಡಿಸಿದೆ. ಜಪಾನಿನ ಖ್ಯಾತ ಚಿತ್ರ ‘ಖಿhe ಉಡಿeಚಿಣ Wಚಿve’ ಅನ್ನು ಬಿಡಿಸಿದೆ. ಹಾಗೂ ಕಿuiಟಟiಟಿg ಚಿಡಿಣ ಅನ್ನು ಸಹಾ ಕಲಿತೆ. ಇದರ ಜೊತೆಗೆ ನಾನು ‘ಖಿhe ಆಏ eಟಿಛಿಥಿಛಿಟoಠಿಚಿeಜiಚಿ’, ‘ಊisಣoಡಿಥಿ eಟಿಛಿಥಿಟoಠಿeಜiಚಿ’, ‘ಖಿheಚಿ sಣiಟಣಚಿಟಿ’, ‘ಊoತಿ iಣ ಚಿಟಟ sಣಚಿಡಿಣeಜ’ ಎಂಬ ಪುಸ್ತಕಗಳನ್ನು ಓದಿ, ರಜೆಯನ್ನು ಆನಂದಿಸಿದೆ.

- ಹರ್ಷಿಕಾ ಪೊನ್ನಪ್ಪ ಟಿ.ಎಲ್. ೮ನೇ ತರಗತಿ, ದೇಚೂರು, ಮಡಿಕೇರಿ.ಊರಲ್ಲಿ ದೋಣಿ ಪ್ರಯಾಣ ಮಾಡಿದೆ

ನಾನು ರಕ್ಷನ್ ಅಂತಾ! ನಮ್ಮ ಊರು ಮಡಿಕೇರಿ. ನಾನು ರಜೇಲಿ ಸ್ವಲ್ಪ ದಿನ ಮನೇಲೆ ಇದ್ದೆ. ನಮ್ಮ ಅಪ್ಪ ನನಗೆ ಕ್ಯಾರಂ ಬೋರ್ಡ್ ಕೊಡಿಸಿದ್ರು. ನಾನು ಅಜ್ಜಿ ಹಾಗೂ ತಮ್ಮನ ಹತ್ರ ಆಟ ಕಲ್ತೆ. ನಂತರ ಅತ್ತೆ-ಮಾವ ಬಂದ್ರು ಮನೆಗೆ. ಅವರ ಹತ್ರ ಕಾರ್ ಇತ್ತು. ಅದರಲ್ಲಿ ನಾನು ಕುಶಾಲನಗರ, ಗೋಲ್ಡನ್ ಟೆಂಪಲ್ ಹೋಗಿ ತುಂಬಾ ತರಹದ ಫ್ರೂಟ್ಸ್, ಐಸ್‌ಕ್ರೀಂ ತಿಂದೆ. ಅಪ್ಪನ ಜೊತೆ ರಿಲಯನ್ಸ್ ಮಾರ್ಟ್ ಶಾಪಿಂಗ್ ಮಾಡ್ದೆ. ಪಾರ್ಕ್ಗೆ ಹೋಗಿದ್ದೆ. ಮೊಮೊಸ್ ಕೊಡಿಸಿದ್ರು. ಅದು ನನಗೆ ತುಂಬಾ ಇಷ್ಟಾ ಆಯ್ತು. ನನ್ನ ಅಪ್ಪಾ ನಂಗೆ ಫೇವರೇಟ್ ಏನು ಬೇಕು ಎಲ್ಲಾ ಕೊಡುಸ್ತಾರೆ.

ಆಮೇಲೆ ಊರಿಗೆ ಬಂದೆ, ನಮ್ಮ ಊರು ಹೊನ್ನಾವರ, ಉತ್ತರ ಕನ್ನಡ ಜಿಲ್ಲೆ. ನಾನು ಅಲ್ಲಿ ದೋಣಿ ಪ್ರಯಾಣ ಮಾಡ್ದೆ. ಚಿಕ್ಕಿ ನಂಗೆ ಸ್ಟೋರಿ ಬುಕ್ಸ್ ಕೊಡಿಸಿದ್ರು. ಬ್ಲಾಕ್ಸ್ ಕೊಡಿಸಿದ್ರು, ನಾನು ತುಂಬಾ ಆಟ ಆಡ್ದೆ. ಮೊಬೈಲ್ ನೋಡ್ದೆ.

ಹಾಗೆ ಮುರುಡೇಶ್ವರ ಹೋಗಿ ಟೆಂಪಲ್ ನೋಡಿ, ಫಿಶ್ ಎಲ್ಲಾ ತಿಂದು, ಶ್ರೀ ಕುಮಾರ ಬಸ್ ಅಲ್ಲಿ ಊರಿಗೆ ಬಂದೆ, ರ‍್ತಾ ನಂಗೆ ಪೆಟ್ರೋಲ್ ಟ್ಯಾಂಕ್, ಟಾಯ್ಸ್, ಜೆಸಿಬಿ, ಗನ್ ಕೊಡಿಸಿದ್ರು. ಐ ಏಮ್ ಹ್ಯಾಪಿ.

- ರಕ್ಷನ್, ಮಡಿಕೇರಿ ಪ್ರಧಾನಿಯವರನ್ನು ನೋಡಿದ ಅದೃಷ್ಟ

ಬೇಸಿಗೆ ರಜೆ ಎಂದರೆ ನನಗೆ ತುಂಬಾ ಇಷ್ಟ. ಊರಿನಲ್ಲಿ ಇರುವ ಜಾತ್ರೆ, ಭೂತಕೋಲಗಳನ್ನು ನೋಡಲು ಕಾತುರದಿಂದ ಕಾಯುತ್ತಾ ಇರುತ್ತೇನೆ. ಬೇಸಿಗೆ ರಜೆ ಸಿಕ್ಕಿದ ಕೂಡಲೇ ಅಜ್ಜಿಯ ಮನೆಗೆ ಹೋಗುತ್ತೇನೆ. ಕಳೆದ ವರ್ಷ ಕುಟುಂಬ ಸಮೇತ ತಮಿಳುನಾಡಿನ ರಾಮೇಶ್ವರ, ಪಳನಿ, ಧನುಷ್ಕೋಟಿ, ಪಾಂಬನ್ ಸೇತುವೆ, ಮಧುರೈ ಹಾಗೂ ಭಾರತದ ಹೆಮ್ಮೆಯ ಮಾಜಿ ರಾಷ್ಟçಪತಿ ದಿ. ಡಾ. ಅಬ್ದುಲ್ ಕಲಾಂ ಅವರ ಸ್ಮಾರಕಕ್ಕೆ ಭೇಟಿ ನೀಡಿದ್ದು ತುಂಬಾನೇ ಖುಷಿ ನೀಡಿದೆ.

ಈ ವರ್ಷ ಭಾರತದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜೀ ಅವರನ್ನು ಮಂಗಳೂರಿನ ರೋಡ್ ಶೋದಲ್ಲಿ ಅತಿ ಹತ್ತಿರದಿಂದ ನೋಡಿದ ಅದೃಷ್ಟ ನನ್ನದಾಯಿತು. ನಂತರ ಕೇರಳದ ಪ್ರಸಿದ್ಧ ಪ್ರವಾಸಿ ತಾಣವಾದ ಮುನ್ನಾರ್‌ಗೆ ಹೋದೆವು. ಟೀ ಎಸ್ಟೇಟ್‌ನ ಸೊಬಗು, ಕೊಂಡಳಾ ಡ್ಯಾಂಮ್‌ನ ವೀಕ್ಷಣೆ, ಟಾಪ್ ಸ್ಟೇಷನ್‌ನಲ್ಲಿ ಪ್ರಕೃತಿ ಸೊಬಗನ್ನು ಸವಿದೆವು.

ಬೇಸಿಗೆ ರಜೆಯನ್ನು ಪ್ರಕೃತಿ ಮತ್ತು ಹಳ್ಳಿಯ ಜಾತ್ರಾ ಸಡಗರದ ಜೊತೆ ಅಜ್ಜಿಯ ಅಕ್ಕರೆ, ಚಿಕ್ಕಮ್ಮಂದಿರ ಪ್ರೀತಿಯಿಂದ ಕಳೆಯುವೆನು.

- ವಿಶ್ಮಾ ದಯಾನಂದ ರೈ, ೭ನೇ ತರಗತಿ, ನ್ಯಾಷನಲ್ ಅಕಾಡೆಮಿ ಶಾಲೆ, ಅತ್ತೂರು. ಅಜ್ಜಿ ಮನೆಯಲ್ಲಿ ರಜೆ...

ಇನ್ನು ಕೆಲವು ದಿನಗಳಾದರೆ ನನ್ನ ರಜೆಯ ದಿನಗಳು ಮುಗಿದು ಹೋಗುತ್ತದೆ. ನನ್ನ ರಜೆಯ ದಿನಗಳನ್ನು ನಾನು ಹೇಗೆ ಕಳೆದೆ ಅಂದರೆ, ನಾನು ರಜೆಯ ದಿನಗಳು ಸಿಕ್ಕರೆ ಮೊದಲು ಹೋಗುವುದೇ ಅಜ್ಜಿಯ ಮನೆಗೆ. ಅಲ್ಲಿ ಅಜ್ಜ-ಅಜ್ಜಿ, ಅತ್ತೆ-ಮಾವ, ಅಣ್ಣ, ಅಕ್ಕ, ತಂಗಿ ಅವರೆಲ್ಲ ಜೊತೆ ಆಟ ಮತ್ತು ಪಾಠಗಳೆರಡನ್ನು ಕಲಿತುಕೊಂಡೆ. ಅಜ್ಜಿ ನನಗೆ ಹಲವು ನೀತಿ ಕಥೆಗಳನ್ನು ಹೇಳುತ್ತಿದ್ದರು. ಅತ್ತೆ ನನಗೆ ಹಲವು ಬಗೆಯ ತಿಂಡಿ ತಿನಿಸುಗಳನ್ನು ಮಾಡಿ ಕೊಡುತ್ತಿದ್ದರು. ಹೀಗೆ ನನ್ನ ರಜೆ ದಿನಗಳನ್ನು ಕಳೆದೆ.

- ವಿದ್ಯಾ, ವೀರಾಜಪೇಟೆ.ನನ್ನ ಪುಟ್ಟ ರಜೆಯ ಅನುಭವ

ನನಗೆ ಪರೀಕ್ಷೆ ಮುಗಿದು ರಜೆ ಶುರುವಾಯಿತು. ಸ್ವಲ್ಪ ದಿನಗಳಲ್ಲಿ ನಾನು ಕೇರಳಕ್ಕೆ ಹೋಗಿದ್ದೆ. ಅಲ್ಲಿ ನಾನು ಹೋಗದೆ ಇದ್ದ ರಬ್ಬರ್ ತೋಟಕ್ಕೆ ಹೋಗಿ ಅಜ್ಜಿ ರಬ್ಬರ್ ಹಾಲು ತೆಗೆಯುವುದು, ಶೀಟ್ ಮಾಡು ವುದನ್ನು ನೋಡಿ ಎಲ್ಲ ಕಲಿತೆ ಮತ್ತು ನಾನು ಸ್ವಲ್ಪ ದಿನಗಳ ನಂತರ ಬೇಸಿಗೆ ಶಿಬಿರಕ್ಕೆ ಹೋಗಲು ತೊಡಗಿದೆ. ಅಲ್ಲಿ ತುಂಬಾ ಆಟಗಳು, ಚಿತ್ರ, ಪಕ್ಷಿಗಳ ತಿಳುವಳಿಕೆ ಎಲ್ಲ ನನಗೆ ಒಂದು ದೊಡ್ಡ ಸಂತೋಷವಾಗಿತ್ತು. ಮತ್ತೆ ನನ್ನ ಹುಟ್ಟುಹಬ್ಬಕ್ಕೆ ನನಗೆ ನನ್ನ ಅಪ್ಪ-ಅಮ್ಮ ತುಂಬಾ ಬುದ್ಧಿ, ಒಳ್ಳೆ ಮಾತುಗಳು ಎಲ್ಲ ಹೇಳಿಕೊಟ್ಟರು.

ನಾನು ಮುಂದಿನ ದಿನಗಳಲ್ಲಿ ಒಂದು ಸೈಕಲ್ ಖರೀದಿಸಲು ಡಬ್ಬದಲ್ಲಿ ಹಣ ಸಂಗ್ರಹಿಸುತ್ತಿದ್ದೇನೆ ಮತ್ತು ತುಂಬಾ ದೇವಸ್ಥಾನಗಳಿಗೆ ಹೋಗಬೇಕು ಮತ್ತು ಸ್ಕೂಲ್ ಬ್ಯಾಗ್, ಬುಕ್, ಪೆನ್, ಪೆನ್ಸಿಲ್‌ಗಳನ್ನು ಖರೀದಿಸಬೇಕು ಎಂದು ಆಲೋಚಿಸುತಿದ್ದೇನೆ. ಇವೆ ನನ್ನ ಪುಟ್ಟ ರಜೆ ಅನುಭವಗಳು.

- ರೀಯಾ ಜೋಸೆಫ್, ೭ನೇ ತರಗತಿ, ಅ.ಬಿ.ವಾ.ವ. ಶಾಲೆ, ಭಾಗಮಂಡಲ.

ಅಜ್ಜಿ ಮನೆಯಲ್ಲಿ ರಜೆ...

ಇನ್ನು ಕೆಲವು ದಿನಗಳಾದರೆ ನನ್ನ ರಜೆಯ ದಿನಗಳು ಮುಗಿದು ಹೋಗುತ್ತದೆ. ನನ್ನ ರಜೆಯ ದಿನಗಳನ್ನು ನಾನು ಹೇಗೆ ಕಳೆದೆ ಅಂದರೆ, ನಾನು ರಜೆಯ ದಿನಗಳು ಸಿಕ್ಕರೆ ಮೊದಲು ಹೋಗುವುದೇ ಅಜ್ಜಿಯ ಮನೆಗೆ. ಅಲ್ಲಿ ಅಜ್ಜ-ಅಜ್ಜಿ, ಅತ್ತೆ-ಮಾವ, ಅಣ್ಣ, ಅಕ್ಕ, ತಂಗಿ ಅವರೆಲ್ಲ ಜೊತೆ ಆಟ ಮತ್ತು ಪಾಠಗಳೆರಡನ್ನು ಕಲಿತುಕೊಂಡೆ. ಅಜ್ಜಿ ನನಗೆ ಹಲವು ನೀತಿ ಕಥೆಗಳನ್ನು ಹೇಳುತ್ತಿದ್ದರು. ಅತ್ತೆ ನನಗೆ ಹಲವು ಬಗೆಯ ತಿಂಡಿ ತಿನಿಸುಗಳನ್ನು ಮಾಡಿ ಕೊಡುತ್ತಿದ್ದರು. ಹೀಗೆ ನನ್ನ ರಜೆ ದಿನಗಳನ್ನು ಕಳೆದೆ.

- ವಿದ್ಯಾ, ವೀರಾಜಪೇಟೆ.