ಚೆಟ್ಟಳ್ಳಿ, ಮೇ ೨೪: ಮೊಬೈಲ್ ಓಟಿಪಿ ನೀಡಿದ ಪರಿಣಾಮ ಸೈಬರ್ ವಂಚನೆ ಜಾಲಕ್ಕೆ ಮಹಿಳೆಯೊಬ್ಬರು ರೂ. ೩.೭೫ ಲಕ್ಷ ಹಣ ಕಳೆದುಕೊಂಡ ಪ್ರಕರಣ ಚೆಟ್ಟಳ್ಳಿಯಲ್ಲಿ ನಡೆದಿದೆ.

ಮೇ ೨೦ ರಂದು ಬೆಳಿಗ್ಗೆ ೯ ಗಂಟೆಗೆ ಕುಶಾಲನಗರ ತಾಲೂಕು ಚೇರಳ-ಶ್ರೀಮಂಗಲ ಗ್ರಾಮ ಚೆಟ್ಟಳ್ಳಿಯವರಾದ ಆಶಾ ಎಂಬವರ ಮೊಬೈಲ್‌ಗೆ ಅಪರಿಚಿತರೊಬ್ಬರು ಕೆನರಾ ಬ್ಯಾಂಕ್ ಎಂಬ ಹೆಸರಿನಲ್ಲಿ ಕರೆಮಾಡಿ ಕೆವೈಸಿ ಆಗದ ಪರಿಣಾಮ ನಿಮ್ಮ ಖಾತೆಯನ್ನು ತಡೆಹಿಡಿಯಲಾಗಿದೆ. ಕಸ್ಟಮರ್ ಕೇರನ್ನು ಸಂಪರ್ಕಿಸುವAತೆ ತಿಳಿಸಿದ್ದಾರೆ. ನಂತರದಲ್ಲಿ ೮೧೦೬೦೬೫೫೩೭ ಸಂಖ್ಯೆಯಿAದ ಮೆಸೇಜ್ ಬಂದಿರುತ್ತದೆ. ನಂತರ ಅದೇ ಮೊಬೈಲ್ ಸಂಖ್ಯೆಗೆ ಆಶಾ ಎರಡು ಬಾರಿ ಓಟಿಪಿ ನೀಡಿದ್ದಾರೆ. ಆಶಾ ಅವರ ಚೆಟ್ಟಳ್ಳಿ ಕೆನರಾ ಬ್ಯಾಂಕ್ ಖಾತೆಯಿಂದ ಮೊದಲ ಬಾರಿ ೧,೮೫,೦೦೦ ಹಾಗೂ ಎರಡನೇ ಬಾರಿ ೧,೯೦,೦೦೦ ಹಣ ಡ್ರಾ ಆಗಿರುತ್ತದೆ. ಸಂಶಯಗೊAಡು ಚೆಟ್ಟಳ್ಳಿಯ ಕೆನರಾ ಬ್ಯಾಂಕ್‌ಗೆ ಖುದ್ದಾಗಿ ತೆರಳಿ ಪರಿಶೀಲಿಸಿದಾಗ ರೂ. ೩.೭೫ ಲಕ್ಷ ವಂಚನೆಗೊಳಗಾದ ಬಗ್ಗೆ ಖಾತರಿಯಾಗುತ್ತದೆ. ಮೇ ೨೧ ರಂದು ಮಡಿಕೇರಿಯ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. - ಕರುಣ್ ಕಾಳಯ್ಯ