ಈ ವರ್ಷದ ಮೇ ತಿಂಗಳ ಕೊನೆಯ ವಾರದಲ್ಲಿ ಸೂರ್ಯ, ಗುರು, ಶುಕ್ರ, ಬುಧವು ವೃಷಭ ರಾಶಿಯಲ್ಲಿ ಸಂಗಮಿಸುವುದರಿAದ ನೈಋತ್ಯ ಗಾಳಿ-ಮಳೆಯು ವಾಡಿಕೆಗಿಂತ ಮುಂಚೆಯೇ ಕೇರಳವನ್ನು ಪ್ರವೇಶಿಸಬಹುದು. ಇದರಿಂದ ಕೊಡಗಿನಲ್ಲೂ ನೈಋತ್ಯ ಗಾಳಿ-ಮಳೆಯು ವಾಡಿಕೆಗಿಂತ ಮೊದಲೇ ಪ್ರವೇಶ ಮಾಡಬಹುದು. ಮೇ ೩೦-೩೧ ರಿಂದ ಜುಲೈ ೧೬-೧೭ ರ ತನಕ ಕೊಡಗಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಬಹುದು. ಕುಜನು ವೃಷಭ ರಾಶಿ ಪ್ರವೇಶಿಸಿ, ವೃಷಭದಲ್ಲಿ ಸಂಚಾರ ಮಾಡುವ ಕಾಲದಲ್ಲಿ ಮಳೆಗೆ ತಡೆಯುಂಟಾಗಬಹುದು. ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಬಹುದು. ಸೂರ್ಯನು ೨೧.೦೬.೨೦೨೪ ರ ಶುಕ್ರವಾರ ಮಧ್ಯರಾತ್ರಿ ಪೂರ್ಣಿಮೆಯಂದು ಆರಿದ್ರಾ ಪ್ರವೇಶ ಮಾಡುವುದು, ಆರಿದ್ರಾ ಪ್ರವೇಶ ಕಾಲದ ಗ್ರಹಗಳ ಸಂಚಾರವು ಮಳೆಯ ಪರವೇ ಇದೆ. ಆರಿದ್ರಾ ಪ್ರವೇಶ ಕಾಲದಲ್ಲಿ ಚಂದ್ರನು ಮೂಲ ನಕ್ಷತ್ರದಲ್ಲಿರುವದರಿಂದ ಮಳೆಗಾಲದಲ್ಲಿ ಕೊಡಗಿನ ಜನತೆ ವೈರಲ್ ಜ್ವರದಿಂದ ಬಳಲಬೇಕಾದೀತು. ಭತ್ತ ಬಿತ್ತನೆಯ ಕಾಲದಲ್ಲಿ ಆರಿದ್ರಾ ಪ್ರವೇಶ ಕಾಲದ ಲಗ್ನದಲ್ಲಿ ರಾಹು ಇರುವುದರಿಂದ ಸ್ವಲ್ಪ ನಷ್ಟ ಕಷ್ಟಗಳು ಉಂಟಾಗಬಹುದು. ಭಾರತದಲ್ಲಿ ಜೂನ್ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಭೂಕಂಪಿಸಬಹುದು. ಆ ಸಂದರ್ಭದಲ್ಲಿ ಕೊಡಗಿನಲ್ಲಿ ಪ್ರವಾಹ, ಭೂಕುಸಿತ ಉಂಟಾಗಬಹುದು. - ಕರೋಟಿರ ಶಶಿ ಸುಬ್ರಮಣಿ.