ಮಡಿಕೇರಿ, ಮೇ ೨೫: ಮಡಿಕೇರಿ ಪ್ರಾದೇಶಿಕ ಅರಣ್ಯ ವಲಯದ ವತಿಯಿಂದ ೨೦೨೩-೨೪ನೇ ಸಾಲಿನಲ್ಲಿ ಬೆಳೆಯಲಾದ ಮಹಾಗನಿ, ಬಿದಿರು, ಕಾಡುಬಾದಾಮಿ, ಸಿಲ್ವರ್, ಹಲಸು, ಜಮ್ಮುನೇರಳೆ, ಮೈಸೂರು ನೇರಳೆ, ಪಣಪುಳಿ, ಸ್ಟಾರ್ ಆ್ಯಪಲ್, ನೆಲ್ಲಿ, ಹೊನ್ನೆ, ಕರಿಮತ್ತಿ, ಹೊಳೆ ಮತ್ತಿ, ಬರ್ಮಾ ಬಿದಿರು, ಲಕ್ಷö್ಮಣಫಲ, ಬಟರ್‌ಫ್ರೂಟ್, ಇತ್ಯಾದಿ ೬x೯ ಮತ್ತು ೮x೧೨ ಗಾತ್ರದ ಗಿಡಗಳು ವಿತರಣೆಗೆ ಲಭ್ಯವಿದ್ದು, ಆಸಕ್ತರು ಮಡಿಕೇರಿ ವಲಯ ನರ್ಸರಿಯಿಂದ ಅರ್ಜಿಯೊಂದಿಗೆ ಆರ್‌ಟಿಸಿ, ಆಧಾರ್ ಕಾರ್ಡ್ ದಾಖಲಾತಿಗಳನ್ನು ನೀಡಿ ಪಡೆದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗೆ ಸುನಿಲ್, ಉಪವಲಯ ಅರಣ್ಯಾಧಿಕಾರಿ ಮಡಿಕೇರಿ, ಮೊ. ೮೨೭೭೩೦೫೪೮೯ ಹಾಗೂ ವಾಸುದೇವ ಅರಣ್ಯ ರಕ್ಷಕ ಮೊ. ೯೪೪೮೭೧೩೧೯೮ ಇವರುಗಳನ್ನು ಸಂಪರ್ಕಿಸಬಹುದಾಗಿದೆ.