ಮಡಿಕೇರಿ, ಮೇ ೨೫: ಮರಗೋಡುವಿನ ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ಮರಗೋಡು ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಏಳನೇ ವರ್ಷದ ಗೌಡ ಫುಟ್ಬಾಲ್ ಟ್ರೋಫಿ ಪಂದ್ಯಾವಳಿಯ ಅಂತಿಮ ಪಂದ್ಯಾಟ ತಾ.೨೬ರಂದು (ಇಂದು) ನಡೆಯಲಿದೆ.

ಇಂದು ನಡೆದ ಪ್ರೀಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪೊನ್ನಚನ ತಂಡ ಉಡುದೋಳಿರ ತಂಡವನ್ನು ೪- ೧ ಗೋಲುಗಳ ಅಂತರದಿAದ ಸೋಲಿಸಿತು.

ಉಡುದೋಳಿರ ತಂಡದ ಪರ ರೊಹಿತ್ ೧, ಪೊನ್ನಚನ ತಂಡದ ಪರ ಹಿತನ್ ೩, ಲಿಕಿನ್ ೧ ಗೋಲು ಬಾರಿಸಿದರು. ಚಂಡಿರ ತಂಡದ ವಿರುದ್ಧ ಮುಕ್ಕಾಟಿ ತಂಡ ೩-೦ ಗೋಲುಗಳ ಅಂತರಿAದ ಗೆಲುವು ಸಾಧಿಸಿತು. ಮುಕ್ಕಾಟಿ ತಂಡದ ಪರ ಮೋನೀಶ್ ೨, ದಿಲೀಪ್ ೧ ಗೋಲು ಬಾರಿಸಿದರು. ಅಯ್ಯಂಡ್ರ ತಂಡ ಕಲ್ಲುಮುಟ್ಲು ತಂಡವನ್ನು ೩-೧ ಗೋಲಿನಿಂದ ಸೋಲಿಸಿತು. ಕಲ್ಲುಮುಟ್ಲು ತಂಡದ ಪರ ಭವನ್ ೧, ಅಯ್ಯಂಡ್ರ ತಂಡದ ಪರ ಅಜಯ ೩ ಗೋಲು ದಾಖಲಿಸಿ ಸಾಧನೆ ಮೆರೆದರು.

ಬೈಲೋಳಿ ತಂಡದ ವಿರುದ್ಧ ಮರದಾಳು ಭರ್ಜರಿ ೧೦ ಗೋಲು ಬಾರಿಸಿ ಗೆಲುವು ಸಾಧಿಸಿತು. ಬೈಲೋಳಿ ತಂಡದ ಪರ ಮನೀಷ್ ೧ ಗೋಲು ಬಾರಿಸಿದರೆ, ಮರದಾಳು ತಂಡದ ಪರ ಡಿಂಪಲ್ ೪, ಭವನ್ ೩, ಯುಗನ್, ನಯನ್ ಹಾಗೂ ಸುನು ತಲಾ ೧ ಗೋಲು ಬಾರಿಸಿದರು.

ಯಾಲದಾಳು ಹಾಗೂ ಕುಯ್ಯಮುಡಿ ತಂಡಗಳ ನಡುವಿನ ಪಂದ್ಯಾಟದಲ್ಲಿ ತಲಾ ಒಂದು ಗೋಲುಗಳಿಂದ ಸಮಬಲ ಸಾಧಿಸಿದ್ದರಿಂದ ಟೈ ಬ್ರೇಕರ್ ಅವಕಾಶ ನೀಡಲಾಯಿತು. ಇದರಲ್ಲಿ ೪-೩ ಗೋಲುಗಳಿಂದ ಯಾಲದಾಳು ಗೆದ್ದು ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶ ಪಡೆಯಿತು.

ನಂತರದ ಪಂದ್ಯದಲ್ಲಿ ಬೊಳ್ಳೂರು ತಂಡ ಟ್ರೆöÊ ಬ್ರೇಕರ್‌ನಲ್ಲಿ ಗೆದ್ದು ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶ ಪಡೆಯಿತು. ನಂತರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಕ್ಕಾಟಿ ತಂಡ ಪೊನ್ನಚನ ತಂಡವನ್ನು ೨-೦ ಗೋಲಿನಿಂದ ಮಣಿಸಿತು. ಮುಕ್ಕಾಟಿ ತಂಡದ ಪರ ತರುಣ್ ಹಾಗೂ ದೀಲಿಪ್ ಗೋಲು ಬಾರಿಸಿದರು.

ಮರದಾಳು ತಂಡ ಅಯ್ಯಂಡ್ರ ತಂಡವನ್ನು ೨-೦ ಗೋಲಿನಿಂದ ಸೋಲಿಸಿತು. ಮರದಾಳು ತಂಡದ ಪರ ಡಿಂಪಲ್ ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ೨ ಗೋಲು ಬಾರಿಸಿದರು. ನಂತರದ ಪಂದ್ಯದಲ್ಲಿ ಕೊಳಂಬೆ ತಂಡ ಯಾಲದಾಳು ತಂಡವನ್ನು ೧-೦ ಗೋಲಿನಿಂದ ಮಣಿಸಿತು. ಕೊಳಂಬೆ ತಂಡದ ಪರ ಮಧು ಗೋಲು ದಾಖಲಿಸಿದರು.

ನಾಲ್ಕನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬೊಳ್ಳೂರು ತಂಡ ಕಾಂಗೀರ ತಂಡವನ್ನು ೨-೧ ಗೋಲಿನಿಂದ ಸೋಲಿಸಿತು. ಕಾಂಗಿರ ತಂಡದ ಪರ ಮುರುಳಿ ಹಾಗೂ ಬೊಳ್ಳೂರು ತಂಡದ ಪರ ಮೋನೀಶ್ ಹಾಗೂ ರೋಷನ್ ಗೋಲು ದಾಖಲಿಸಿದರು.

ಪಂದ್ಯಾವಳಿಯಲ್ಲಿ ಮುಕ್ಕಾಟಿ, ಕೊಳಂಬೆ, ಮರದಾಳು ಹಾಗೂ ಬೊಳ್ಳೂರು ತಂಡ ಸೆಮಿಫೈನಲ್ ಹಂತಕ್ಕೆ ಪ್ರವೇಶ ಪಡೆದಿವೆ.