ಮಡಿಕೇರಿ, ಮೇ ೨೫: ಕೊಡಗು ಜಿಲ್ಲೆಯ ಮತ್ತು ಕೊಡಗು ಜಿಲ್ಲೆಗೆ ಬಂದು ಹೋಗುವ ವಾಹನ ಚಾಲಕರುಗಳಿಗೆ ಜಿಲ್ಲಾ ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕಾಗಿ ಸೂಚನೆ ನೀಡಿದೆ.

ವಾಹನ ಚಾಲನಾ ಪತ್ರವಿಲ್ಲದೆ ವಾಹನ ಚಾಲನೆ ಮಾಡಬಾರದು. ಸಾರ್ವಜನಿಕ ವಾಹನ ಚಾಲಕರು ಸಮವಸ್ತç ಧರಿಸಿ ಚಾಲನೆ ಮಾಡಬೇಕು.ವಾಹನ ಚಾಲಕರು ವಾಹನಗಳ ದಾಖಲಾತಿಗಳನ್ನು ಇಟ್ಟುಕೊಂಡು ಚಾಲನೆ ಮಾಡತಕ್ಕದ್ದಲ್ಲದೇ, ಪರಿಶೀಲನಾ ಅಧಿಕಾರಿಗಳು ಪರಿಶೀಲನೆಯ ಬಗ್ಗೆ ಕೇಳಿದಾಗ ದಾಖಲಾತಿ ಪತ್ರಗಳನ್ನು ಹಾಜರುಪಡಿಸತಕ್ಕದ್ದು. ಯಾವುದೇ ಕಾರಣಕ್ಕೂ ವಾಹನಗಳನ್ನು ಅತಿ ವೇಗವಾಗಿ ಚಾಲನೆ ಮಾಡಬಾರದು. ಏಕ-ಮುಖ ರಸ್ತೆ ನಿಯಮಗಳನ್ನು ಉಲ್ಲಂಘಿಸಬಾರದು. ರಸ್ತೆ ಬದಿಗಳಲ್ಲಿ ವಾಹನಗಳನ್ನು ನಿಲ್ಲಿಸದೇ ವಾಹನಗಳನ್ನು ನಿಲ್ಲಿಸಲು ನಿಗದಿಪಡಿಸಿದ ಸ್ಥಳದಲ್ಲಿಯೇ ನಿಲ್ಲಿಸ ತಕ್ಕದ್ದು. ಪಾದಚಾರಿಗಳು ಮತ್ತು ಶಾಲಾ ಮಕ್ಕಳು ರಸ್ತೆಯನ್ನು ಅಡ್ಡ ದಾಟುವಾಗ ಎಡ ಮತ್ತು ಬಲ ನೋಡಿ ಯಾರೂ ಇಲ್ಲದ ಸಮಯದಲ್ಲಿ ವಾಹನಗಳನ್ನು ನಡೆಸತಕ್ಕದ್ದು. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬೇಡಿ. ತಿರುವು ರಸ್ತೆಗಳಲ್ಲಿ ಮುಂದಿನ ವಾಹನಗಳನ್ನು ಹಿಂದಕ್ಕೆ ಹಾಕುವ ಪ್ರಯತ್ನ ಮಾಡಬೇಡಿ ಇದರಲ್ಲಿ ಅಪಘಾತ ಉಂಟಾಗುವ ಸಂಭವ ಹೆಚ್ಚು.

ದ್ವಿಚಕ್ರ ವಾಹನ ಚಾಲಕರು ಕಡ್ಡಾಯವಾಗಿ ಹೆಲೈಟ್ ಧರಿಸಿ ವಾಹನ ಚಲಾಯಿಸಬೇಕು. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ೯ ತಿಂಗಳು ಮೇಲ್ಪಟ್ಟ ಮಕ್ಕಳಿಗೆ ಹೆಲ್ಮೆಟ್ ಮತ್ತು Sಚಿಜಿeಣಥಿ hಚಿಡಿಟಿess ಗಳಂತಹ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಬಳಕೆ ಮಾಡಿ ವಾಹನ ಚಲಾಯಿಸಬೇಕು.

ಈ ಮೇಲ್ಕಂಡ ಅಂಶಗಳನ್ನು ದ್ವಿ-ಚಕ್ರ ವಾಹನ ಸವಾರರು ಹಾಗೂ ವಾಹನ ಚಾಲಕರು ಗಮನದಲ್ಲಿಟ್ಟುಕೊಂಡು ಅಪಘಾತಗಳನ್ನು ತಡೆಗಟ್ಟಲು ಪೊಲೀಸರೊಂದಿಗೆ ಸಹಕರಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಕೋರಿದ್ದಾರೆ.