ಗೋಣಿಕೊಪ್ಪಲು, ಮೇ ೨೫ : ಮುಂಜಾನೆ ವೇಳೆ ಹುಲಿ ವಿದೇಶಿ ತಳಿಯ ಹಸ್ಕಿ ಹಾಗೂ ಪಿಟ್‌ಬುಲ್ ನಾಯಿಗಳ ಮೇಲೆ ದಾಳಿ ನಡೆಸಿ ಕೊಂದು ಹಾಕಿದ ಘಟನೆ ದ.ಕೊಡಗಿನ ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಟ್ಟಂದಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಕಾಳಮಂಡ ಜಗತ್ ಎಂಬವರಿಗೆ ಸೇರಿದ ಎರಡು ನಾಯಿಗಳನ್ನು ಎಂದಿನAತೆ ಮುಂಜಾನೆ ೬.೩೦ರ ಸುಮಾರಿಗೆ ಮನೆಯ ಕಾಂಪೌAಡಿನ ಬಳಿ ಬಿಡಲಾಗಿತ್ತು. ಈ ವೇಳೆ ಎರಡು ನಾಯಿಗಳು ಕಾಂಪೌAಡನ್ನು ದಾಟಿ ಹೊರ ತೆರಳಿದ ವೇಳೆ ದಿಢೀರನೆ ಪ್ರತ್ಯಕ್ಷಗೊಂಡ ಹುಲಿ ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ನಾಯಿಗಳ ಮೇಲೆ ದಾಳಿ ನಡೆಸಿದೆ. ಎರಡು ನಾಯಿಗಳು ಕೂಡ ಹುಲಿಯ ಮೇಲೆ ದಾಳಿಗೆ ಮುಂದಾದವಾದರೂ ಹುಲಿಯು ಎರಡು ನಾಯಿಗಳನ್ನು ಕೊಂದು ಅಲ್ಲಿಂದ ತೆರಳಿದೆ.

ಮನೆಯ ಮಾಲೀಕರು ನಾಯಿಗಳನ್ನು ಗೂಡಿಗೆ ಸೇರಿಸಲು ಹುಡುಕಾಟ ನಡೆಸಿದಾಗ ನಾಯಿಗಳು ಸತ್ತುಬಿದ್ದಿರುವುದು ಕಂಡುಬAದಿದೆ. ಸ್ಥಳದಲ್ಲಿ ಹುಲಿಯು ನಾಯಿಗಳ ಮೇಲೆ ದಾಳಿ ನಡೆಸಿದ ಸಂದರ್ಭದ ಹೆಜ್ಜೆ ಗುರುತುಗಳು ಪತ್ತೆಯಾಗಿವೆ.

ಕೂಡಲೇ ಅರಣ್ಯ ಇಲಾಖೆಗೆ ಮಾಲೀಕರು ಮಾಹಿತಿ ನೀಡಿದ್ದು, ಅರಣ್ಯ ಇಲಾಖೆಯ ಪೊನ್ನಂಪೇಟೆ ವಲಯದ ಆರ್‌ಎಫ್‌ಓ ಶಂಕರ್ ಹಾಗೂ ತಂಡ ಕುಟ್ಟಂದಿ ಭಾಗಕ್ಕೆ ತೆರಳಿ ಪರಿಶೀಲನೆ ನಡೆಸಿತು. ಈ ಭಾಗದಲ್ಲಿ ಹುಲಿಯ ಸಂಚಾರ ಇರುವುದು ದೃಢಪಟ್ಟ ಹಿನ್ನೆಲೆ ಇಲಾಖೆ ವತಿಯಿಂದ ಹುಲಿ ಸೆರೆಗೆ ಬೋನನ್ನು ಅಳವಡಿಸುವ ಕಾರ್ಯ ಕೈಗೊಳ್ಳಲಾಯಿತು.

ಹುಲಿಯ ಓಡಾಟದ ಹಿನ್ನಲೆಯಲ್ಲಿ ಮನೆ ಮಾಲೀಕ ಕಾಳಮಂಡ ಜಗತ್ ಮುಂಜಾಗ್ರತಾ ಕ್ರಮವಾಗಿ ಕಾರ್ಮಿಕರನ್ನು ತೋಟದ ಕೆಲಸಕ್ಕೆ ತೆರಳದಂತೆ, ಮನೆಯ ಹೊರಭಾಗದಲ್ಲಿ ತಿರುಗಾಡದಂತೆ ಸೂಚನೆ ನೀಡಿ ರಜೆ ನೀಡಿದ್ದಾರೆ. ಇವರು ಮನೆಯಲ್ಲಿ ಹತ್ತಕ್ಕೂ ಹೆಚ್ಚು ವಿದೇಶಿ ತಳಿಯ ನಾಯಿಗಳನ್ನು ಸಾಕುತ್ತಿದ್ದಾರೆ. ಎರಡು ನಾಯಿಗಳ ಸಾವಿನಿಂದ ಮನೆಯವರು ದುಃಖದಲ್ಲಿದ್ದಾರೆ.

ಈ ಭಾಗದಲ್ಲಿ ಹುಲಿಯ ಸಂಚಾರ ದೃಢಪಟ್ಟಿರುವುದರಿಂದ ಕಾರ್ಮಿಕರು ಕಾಫಿ ತೋಟಕ್ಕೆ ತೆರಳದಂತೆ ಸೂಚನೆ ನೀಡಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಹುಲಿಸೆರೆಗೆ ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. -ಹೆಚ್.ಕೆ. ಜಗದೀಶ್