ವೀರಾಜಪೇಟೆ, ಮೇ ೨೫: ಸ್ಟುಡೆಂಟ್ಸ್ ಇಸ್ಲಾಮಿಕ್ ಆರ್ಗನೈ ಸೇಷನ್ ಆಫ್ ಇಂಡಿಯಾ (ಎಸ್.ಐ.ಓ) ಈ ವರ್ಷದ ಅಸೋಸಿ ಯೇಷನ್ಸ್ ಮೇಕಿಂಗ್ ಅಭಿಯಾನದ ಅಂಗವಾಗಿ ೧೫ ರಿಂದ ೧೮ ವರ್ಷದ ಒಳಗಿನ ವಿದ್ಯಾರ್ಥಿಗಳಿಗಾಗಿ ಫುಟ್‌ಬಾಲ್ ಪಂದ್ಯಾಟವನ್ನು ಏರ್ಪಡಿಸಲಾಗಿತ್ತು.

ಸ್ಥಳೀಯ ಬ್ರೆöÊಟ್ ಕ್ಯಾಂಪಸ್ ಮೈದಾನದಲ್ಲಿ ನಡೆದ ಪಂದ್ಯಾವಳಿ ಯಲ್ಲಿ ಫಹೀಂ ನೇತೃತ್ವದ ತಂಡ ವಿಜೇತವಾಯಿತು. ಸಫ್ವಾನ್ ನೇತೃತ್ವದ ತಂಡ ರನ್ನರ್ ಅಪ್‌ಗೆ ತೃಪ್ತಿಪಟ್ಟು ಕೊಂಡಿತು. ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಎಸ್.ಐ.ಓ. ರಾಜ್ಯ ಕಾರ್ಯದರ್ಶಿ ಮುಝಾಹಿರ್ ದಿಕ್ಸೂಚಿ ಭಾಷಣ ಮಾಡಿದರು. ಜಮಾಅತೆ ಇಸ್ಲಾಮಿ ಹಿಂದ್ ಜಿಲ್ಲಾ ಸಂಚಾಲಕ ಪಿ.ಕೆ. ಅಬ್ದುಲ್ ರೆಹ ಮಾನ್, ಜಿಲ್ಲಾ ಸಮಿತಿ ಸದಸ್ಯರಾದ ಇ.ಎಂ. ಅಬ್ದುಲ್ ಖಾದರ್, ಎಸ್.ಐ.ಓ. ಜಿಲ್ಲಾ ಹೊಣೆಗಾರರಾದ ರಿಜ್ವಾನ್, ನಿಝಾಮ್ ಉಮರ್, ದೈಹಿಕ ಶಿಕ್ಷಣ ಶಿಕ್ಷಕ ಮುಝಮ್ಮಿಲ್ ಉಪಸ್ಥಿತರಿದ್ದರು. ಲುಕ್ಮಾನ್ ಕಾರ್ಯಕ್ರಮ ನಿರೂಪಿಸಿದರು.