ಪೊನ್ನಂಪೇಟೆ, ಮೇ ೨೫: ವಿಶ್ವ ಕರಾಟೆ ಮಂಡಳಿ, ಕಾಮನ್ವೆಲ್ತ್ ಕರಾಟೆ ಮಂಡಳಿ ಮತ್ತು ಏಷ್ಯನ್ ಕರಾಟೆ ಒಕ್ಕೂಟದ ಅಧೀನದಲ್ಲಿರುವ ಕರಾಟೆ ಇಂಡಿಯಾ ಆರ್ಗನೈಸೇಷನ್ (ಕೆ.ಐ.ಓ.)ನ ತಾಂತ್ರಿಕ ಆಯೋಗದ ನೂತನ ಜಂಟಿ ಅಧ್ಯಕ್ಷರಾಗಿ ದೇಶದ ಹೆಸರಾಂತ ಕರಾಟೆ ಪಟು ಕೊಡಗಿನ ಸಿ.ಎಸ್. ಅರುಣ್ ಮಾಚಯ್ಯ ನೇಮಕಗೊಂಡಿದ್ದಾರೆ.
ವಿಶ್ವ ಶಿಟೋರಿಯೋ ಕರಾಟೆ ಮಂಡಳಿಯ ಸ್ಟಾö್ಯಂಡಿAಗ್ ನಿರ್ದೇಶಕರು, ಅಖಿಲ ಭಾರತ ಶಿಟೋರಿಯೋ ಕರಾಟೆ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಚೆಪ್ಪುಡಿರ ಎಸ್. ಅರುಣ್ ಮಾಚಯ್ಯ ಕರಾಟೆ ಇಂಡಿಯಾ ಆರ್ಗನೈಸೇಷನ್ನ ಅತ್ಯುನ್ನತ ಹುದ್ದೆಗೇರಿದ ಪ್ರಥಮ ಕನ್ನಡಿಗರಾಗಿದ್ದಾರೆ.
ಈ ಕುರಿತು ಕರಾಟೆ ಇಂಡಿಯಾ ಆರ್ಗನೈಸೇಷನ್ನ ಅಧ್ಯಕ್ಷ ಭರತ್ ಶರ್ಮಾ ಅವರ ಅನುಮೋದನೆ ಯೊಂದಿಗೆ ನೇಮಕಾತಿ ಆದೇಶ ಹೊರಡಿಸಿರುವ ಕರಾಟೆ ಇಂಡಿಯಾ ಆರ್ಗನೈಸೇಷನ್ನ ಸೆಕ್ರೆಟರಿ ಜನರಲ್ ಸಂಜೀವ್ ಕುಮಾರ್ ಜಂಗ್ರ, ಅರುಣ್ ಮಾಚಯ್ಯ ಅವರು ಕಳೆದ ಐದು ದಶಕಗಳಿಂದ ಕರಾಟೆಯಲ್ಲಿ ಮಾಡಿದ ಸಾಧನೆಯನ್ನು ಪರಿಗಣಿಸಿ ಮಹತ್ತರವಾದ ಜವಾಬ್ದಾರಿಯನ್ನು ನೂತನವಾಗಿ ವಹಿಸಲಾಗಿದ್ದು, ಅದನ್ನು ಅವರು ಸಮರ್ಥವಾಗಿ ನಿರ್ವಹಿಸಿ ಯಶಸ್ವಿಗೊಳಿಸಲಿದ್ದಾರೆ ಎಂಬ ಅಚಲವಾದ ವಿಶ್ವಾಸ ಹೊಂದಲಾಗಿದೆ ಎಂದು ಹೇಳಿದ್ದಾರೆ. ಇವರೊಂದಿಗೆ ಕರ್ನಾಟಕ ಕರಾಟೆ ತಂಡದ ಮಾಜಿ ನಾಯಕ, ವಿಶ್ವ ಕರಾಟೆ ಒಕ್ಕೂಟದ ಹಲವಾರು ಚಾಂಪಿಯನ್ಶಿಪ್ಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ, ಕರ್ನಾಟಕ ರಾಜ್ಯ ಕರಾಟೆ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಭಾರ್ಗವ್ ರೆಡ್ಡಿ ಅವರನ್ನು ಕರಾಟೆ ಇಂಡಿಯಾ ಆರ್ಗನೈಸೇಷನ್ನ ಅಥ್ಲೆಟಿಕ್ ಆಯೋಗದ ನೂತನ ಅಧ್ಯಕ್ಷ ರಾಗಿಯೂ ನೇಮಕ ಗೊಳಿಸಲಾಗಿದೆ ಎಂದು ನೇಮಕಾತಿ ಆದೇಶದಲ್ಲಿ ತಿಳಿಸಿದ್ದಾರೆ.
ವಿಶ್ವ ಶಿಟೋರಿಯೋ ಕರಾಟೆ ಮಂಡಳಿಯ ಏಷ್ಯಾ ಮತ್ತು ಪೆಸಿಫಿಕ್ ಖಂಡದ ನಿರ್ದೇಶಕರಾಗಿ ವಿಶ್ವಮಟ್ಟದಲ್ಲಿ ಏಷ್ಯಾ ಮತ್ತು ಪೆಸಿಫಿಕ್ ಖಂಡವನ್ನು ಪ್ರತಿನಿಧಿಸುತ್ತಿರುವ ಅರುಣ್ ಮಾಚಯ್ಯ, ಇದಲ್ಲದೆ ಪ್ರಸ್ತುತ ಅಖಿಲ ಭಾರತ ಶಿಟಾರಿಯೋ ಕರಾಟೆ ಸಂಸ್ಥೆಯ ಮತ್ತು ದಕ್ಷಿಣ ಭಾರತ ಕರಾಟೆ ಫೆಡರೇಷನ್ ಅಧ್ಯಕ್ಷರಾಗಿ, ಕರಾಟೆ ಇಂಡಿಯಾ ಆರ್ಗನೈಸೇಷನ್ ಹಿರಿಯ ಉಪಾಧ್ಯಕ್ಷರಾಗಿ, ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಅಂರ್ರಾಷ್ಟಿçÃಯ ಕರಾಟೆ ತೀರ್ಪುಗಾರರಾಗಿರುವ ಸಿ.ಎಸ್. ಅರುಣ್ ಮಾಚಯ್ಯ ಅವರು ಕರಾಟೆಯಲ್ಲಿ ೮ನೇ ಡ್ಯಾನ್ ಬ್ಲಾಕ್ ಬೆಲ್ಟ್ ಪದವೀಧರಾಗಿದ್ದಾರೆ. ೨೦೨೨ರಲ್ಲಿ ಲಂಡನ್ನಿನ ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಕಾಮನ್ವೆಲ್ತ್ ಕರಾಟೆ ಚಾಂಪಿಯನ್ಶಿಪ್ನಲ್ಲಿ ಭಾರತ ತಂಡದ ಪ್ರತಿನಿಧಿಯಾಗಿ ಭಾಗವಹಿಸಿದ್ದ ಅರುಣ್ ಮಾಚಯ್ಯ, ಈ ಹಿಂದೆ ವಿಶ್ವದ ಹಲವೆಡೆ ನಡೆದ ಹಲವಾರು ಅಂತರರಾಷ್ಟಿçÃಯ ಚಾಂಪಿಯನ್ಶಿಪ್ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.