ಮಡಿಕೇರಿ, ಮೇ ೨೫: ೨೦೦೬ರ ನಂತರ ಹಳೆ ಪಿಂಚಣಿ ಯೋಜನೆ ರದ್ದಾಗಿ ಹೊಸ ಯೋಜನೆ ಜಾರಿಗೊಂಡ ಪರಿಣಾಮ ಶಿಕ್ಷಕರು ನಿವೃತ್ತಿಗೊಂಡ ಬಳಿಕ ಆರ್ಥಿಕ ಭದ್ರತೆ ಸಿಗದೆ ಪರದಾಡುವ ಸ್ಥಿತಿ ಸೃಷ್ಟಿಯಾಗಿದೆ. ಅದೇ ರೀತಿ ಬಡ್ತಿ ವೇತನದಲ್ಲಿ ತಾರತಮ್ಯ ಆಗುತ್ತಿದೆ. ಇವೆರಡು ಸಮಸ್ಯೆಗಳನ್ನು ಬಗೆಹರಿಸುವುದು ತನ್ನ ಆದ್ಯ ಕರ್ತವ್ಯ, ಇದರೊಂದಿಗೆ ಶಿಕ್ಷಣ ಗುಣಮಟ್ಟ ಹೆಚ್ಚಿಸಲು ಪೂರಕ ವಾತಾವರಣ ಸೃಷ್ಟಿಸಬೇಕೆಂಬ ಅಭಿಲಾಷೆಯೊಂದಿಗೆ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಕೆ.ಕೆ. ಮಂಜುನಾಥ್ ಕುಮಾರ್ ತಿಳಿಸಿದ್ದಾರೆ.
‘ಶಕ್ತಿ’ ಸಂದರ್ಶನದಲ್ಲಿ ಮಾತನಾಡಿದ ಕೆ.ಕೆ. ಮಂಜುನಾಥ್ ಕುಮಾರ್, ದೇಶದಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಾಗಬೇಕಾಗಿದೆ. ವೈಜ್ಞಾನಿಕ, ತಾಂತ್ರಿಕ, ವೈದ್ಯಕೀಯ ಕ್ಷೇತ್ರ ಮಿಂಚುತ್ತಿರುವ ಕಾಲದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತರಬೇಕಾದ ಸ್ಥಿತಿ ಇದೆ. ಈ ನಿಟ್ಟಿನಲ್ಲಿ ತನ್ನ ಪ್ರಯತ್ನ ಸಾಗಲಿದೆ. ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರ ಬಲವರ್ಧನೆಗೆ ಪೂರಕ ವಾತಾವರಣ ಸೃಷ್ಟಿಸಬೇಕೆಂಬ ಪರಿಕಲ್ಪನೆಯನ್ನು ಹೊಂದಿದ್ದೇನೆ. ಇದಕ್ಕಾಗಿ ಸೂಕ್ತ ನಿಯಮ, ಕಾನೂನುಗಳ ಜಾರಿಯ ಅವಶ್ಯಕತೆ ಇದೆ. ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರ ಕೂಡ ಶಿಕ್ಷಕರಿಗೆ ಹಾಗೂ ಶಿಕ್ಷಣಕ್ಕೆ ಪೂರಕವಾದ ನಿಯಮ ಜಾರಿ ಮಾಡುವ ಘೋಷಣೆ ಮಾಡಿದೆ. ತಾನು ಗೆದ್ದರೆ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ನಿಶ್ಚಿತ ಪ್ರಯತ್ನಗಳು ನಡೆಯಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಿಕ್ಷಕನಾಗಿ ಶಿಕ್ಷಕರ ಸಮಸ್ಯೆ ಗೊತ್ತಿದೆ
೧೯೯೪ ರಿಂದ ೨೦೦೭ರ ತನಕ ಶಿಕ್ಷಕನಾಗಿ ಸೇವೆ ಸಲ್ಲಿಸಿದ ಕಾರಣ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆ ಅರಿವು ತನಗಿದೆ. ಸರಕಾರಿ ಶಾಲೆಯೊಂದಿಗೆ ಅನುದಾನರಹಿತ, ಖಾಸಗಿ ಶಾಲಾ ಶಿಕ್ಷಕರು ಹಲವು ಬವಣೆಗಳನ್ನು ಎದುರಿಸುತ್ತಿದ್ದಾರೆ ಎಂದು ಮಂಜುನಾಥ್ ಹೇಳಿದರು.
ಶಿಕ್ಷಣ ಕ್ಷೇತ್ರದ ಪರಿಕಲ್ಪನೆ ಇಲ್ಲದವರು ಶಿಕ್ಷಕರ ಪ್ರತಿನಿಧಿಯಾಗುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ ಅವರು, ಶಿಕ್ಷಣ ಕ್ಷೇತ್ರದ ಸುಧಾರಣೆಗೊಳಿಸುವ ನಿಟ್ಟಿನಲ್ಲಿ ಹಲವು ಕಾರ್ಯಯೋಜನೆ ತನ್ನ ಮುಂದಿದೆ. ಗೆದ್ದರೆ ಎಲ್ಲವನ್ನೂ ಪರಿಣಾಮಕಾರಿಯಾಗಿ ಅನುಷ್ಟಾನ ಮಾಡಲಾಗುವುದು ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ.
ಹಳೆಪಿಂಚಣಿ ಯೋಜನೆ ಮರುಜಾರಿ
೨೦೦೭ರ ನಂತರ ನಿವೃತ್ತಿಗೊಳ್ಳುವ ಶಿಕ್ಷಕರಿಗೆ ಅವೈಜ್ಞಾನಿಕ ರೀತಿಯಲ್ಲಿ ಪಿಂಚಣಿ ದೊರೆಯುತ್ತಿದೆ. ಇದರಿಂದ ನಿವೃತ್ತಿಗೊಂಡು ಸುಖಕರ ಜೀವನ ನಡೆಸಬೇಕಾದ ಶಿಕ್ಷಕರು ಆರ್ಥಿಕ ಅಭದ್ರತೆಯಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಶಿಕ್ಷಕರ ಸಂಬಳದಿAದ ಶೇ ೧೦ ಕಡಿತಗೊಳಿಸಿ ‘ಕಾಂಟ್ರಿಬ್ಯೂಷನ್ ಸ್ಕೀಂ’ನಡಿ ಅಲ್ಪಮೊತ್ತದ ಪಿಂಚಣಿ ನೀಡಲಾಗುತ್ತಿದೆ.
ಈ ಹಿಂದೆ ಕೇಂದ್ರದಲ್ಲಿದ್ದ ಬಿಜೆಪಿ ಹಾಗೂ ರಾಜ್ಯದಲ್ಲಿದ್ದ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಈ ಯೋಜನೆ ಜಾರಿಯಾಯಿತು ಎಂದು ತಿಳಿಸಿದ ಮಂಜುನಾಥ್ ಕುಮಾರ್, ಸರಕಾರ ಹೊಸ ಪಿಂಚಣಿಯಡಿ ಕಡಿತಗೊಳಿಸುವ ಹಣವನ್ನು ಶೇರು ಮಾರುಕಟ್ಟೆಗೆ ಹಾಕಿ ವ್ಯಾಪಾರ ನಡೆಸುತ್ತಿದೆ ಎಂದು ಆರೋಪಿಸಿದರು.
ಈ ಹಿಂದೆ ಸರಕಾರದ ಮೂಲಕವೇ ನೀಡುತ್ತಿದ್ದ ಪಿಂಚಣಿ ಯೋಜನೆ ಜಾರಿಗೊಳಿಸಿ ನಿವೃತ್ತಿ ಬಳಿಕ ಸ್ವಾವಲಂಬಿ ಬದುಕು ರೂಪಿಸುವ ನಿಟ್ಟಿನಲ್ಲಿ ಹಳೆ ಪಿಂಚಣಿ ಯೋಜನೆ ಮರು ಜಾರಿಗೊಳಿಸುವುದು ನಮ್ಮ ಆದ್ಯತೆ. ಈ ನಿಟ್ಟಿನಲ್ಲಿ ಪ್ರಣಾಳಿಕೆಯಲ್ಲಿಯೂ ಇದನ್ನು ಘೋಷಿಸಲಾಗಿದೆ ಎಂದು ಹೇಳಿದರು.
ಬಡ್ತಿ ತಾರತಮ್ಯ ನಿವಾರಣೆ
ಬಡ್ತಿ ಹೊಂದಿದ ಶಿಕ್ಷಕರಿಗೆ ‘ವೇತನ ಶಿಕ್ಷೆ’ ದೊರೆಯುತ್ತಿದೆ. ಸರಕಾರಿ ಶಾಲಾ ಶಿಕ್ಷಕರು ಬಡ್ತಿ ಹೊಂದಿದ ನಂತರ ಮೂಲವೇತನಕ್ಕಿಂತÀ ಕಡಿಮೆ ವೇತನ ಕೈಸೇರುತ್ತಿದೆ. ಕಾಲಮಿತಿಯಡಿ ಬಡ್ತಿಗೆ ಅವಕಾಶವಿದ್ದು, ಬಡ್ತಿ ಹೊಂದಿದ ನಂತರ ವೇತನ ಹೆಚ್ಚಳಕ್ಕೆ ೮-೧೦ ವರ್ಷ ಕಾಯಬೇಕು. ಅಷ್ಟೋತ್ತಿಗೆ ಮತ್ತೊಂದು ಬಡ್ತಿ ಬಂದಲ್ಲಿ ವೇತನ ಹೆಚ್ಚಾಗುವ ಬದಲು ಇಳಿಮುಖಗೊಳ್ಳುತ್ತದೆ. ಈ ಅವೈಜ್ಞಾನಿಕ ನೀತಿ ಹೋಗಲಾಡಿ ಹೊಸ ಯೋಜನೆಯನ್ನು ರೂಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕೆಂದು ಮಂಜುನಾಥ್ ಹೇಳಿದರು.
ಸರಕಾರಿ, ಅನುದಾನರಹಿತ, ಖಾಸಗಿ ಸೇರಿದಂತೆ ಎಲ್ಲಾ ಹಂತದ ಶಿಕ್ಷಕರಿಗೂ ರೂ. ೨೫ ಲಕ್ಷದ ಆರೋಗ್ಯ ವಿಮೆ ಸರಕಾರದಿಂದ ದೊರೆಯಬೇಕು. ಈ ಯೋಜನೆಯಡಿ ಅವರ ಕಟುಂಬವನ್ನು ಸೇರ್ಪಡೆಗೊಳಿಸಬೇಕೆಂಬ ಚಿಂತನೆ ತನ್ನದಿದೆ. ಅದರೊಂದಿಗೆ ಕೆಲವೊಂದು ವ್ಯತಿರಿಕ್ತ ಪರಿಣಾಮದಿಂದ ಖಾಸಗಿ, ಅನುದಾನ ರಹಿತ ಶಾಲೆಗಳ ಶಿಕ್ಷಕರು, ಸಿಬ್ಬಂದಿ ಕಡಿಮೆ ವೇತನದಿಂದ ಪರಿತಪಿಸುತ್ತಿದ್ದು ಆರ್ಥಿಕ ಸ್ಥಿತಿ ಹದಗೆಟ್ಟ ಶಾಲಾ ಸಿಬ್ಬಂದಿಗೆ ಸರಕಾರದಿಂದ ಕನಿಷ್ಟ ವೇತನ ನೀಡುವ ಯೋಚನೆಯೂ ಇದೆ ಎಂದು ವಿವರಿಸಿದರು.
ತಾಂತ್ರಿಕ ಬದಲಾವಣೆಯ ಅವಶ್ಯಕತೆ
ಶಾಲೆಗಳ ಲೈಸನ್ಸ್ ಅನ್ನು ವರ್ಷಕ್ಕೊಮ್ಮೆ ನವೀಕರಣ ರೂಪಿಸಿರುವ ಕೆಲವೊಂದು ನಿಯಮಗಳ ಬಗ್ಗೆ ವಿರೋಧವಿದ್ದು, ಇದರ ಪರಾಮರ್ಶೆಯ ಅಗತ್ಯವಿದೆ. ಈ ಹಿನ್ನೆಲೆ ಹಲವು ವರ್ಷಗಳಿಂದಿರುವ ಶಾಲೆಯ ಲೈಸನ್ಸ್ ನವೀಕರಣಕ್ಕೆ ವಿನಾಯಿತಿ ನೀಡಬೇಕು. ಹೊಸ ಶಾಲೆಗಳಿಗೆ ಎಲ್ಲಾ ರೀತಿಯ ದೃಢೀಕರಣವನ್ನು ಪಡೆದು ಲೈಸನ್ಸ್ ನೀಡಬೇಕು ಎಂದು ಹೇಳಿದರು.
ಮೊರಾರ್ಜಿ ದೇಸಾಯಿ, ಪರಿಶಿಷ್ಟ ಜಾತಿ/ಪಂಗಡ, ಹಿಂದುಳಿದ ವರ್ಗ, ಕಿತ್ತೂರು ರಾಣಿ ಚೆನ್ನಮ್ಮ, ಅಲ್ಪಸಂಖ್ಯಾತ ಮತ್ತು ಇತರ ವಸತಿ ಶಾಲೆಗಳನ್ನು ಶಿಕ್ಷಣ ಇಲಾಖೆ ವ್ಯಾಪ್ತಿಗೆ ತರಲಾಗುವುದು. ಈ ಸಂಬAಧ ನಿರ್ದೇಶನಾಲಯವನ್ನು ಆರಂಭಿಸಲಾಗುವುದು. ಶಿಕ್ಷಕರೊಂದಿಗೆ ಸಿಬ್ಬಂದಿ ಎದುರಿಸುವ ಸಮಸ್ಯೆಯ ಬಗ್ಗೆಯೂ ಚಿಂತನೆ ಹರಿಸಲಾಗುವುದು. ಶಿಕ್ಷಕರು ಪ್ರಗತಿ ಸಾಧಿಸಿದರೆ ಶಿಕ್ಷಣ ಗುಣಮಟ್ಟ ಸುಧಾರಣೆ ಕಾಣುತ್ತದೆ. ಇದಕ್ಕೆ ಶಿಕ್ಷಣ ಕ್ಷೇತ್ರದ ಬಗ್ಗೆ ಅರಿತವರು ಪ್ರತಿನಿಧಿಗಳಾಗಬೇಕು. ತಾನು ಶಿಕ್ಷಕನಾಗಿ ಸೇವೆ ಸಲ್ಲಿಸಿದ್ದು, ಶಿಕ್ಷಕರ ನೋವು-ನಲಿವಿನ ಅರಿವಿದೆ ಎಂದು ಮಂಜುನಾಥ್ ಮನದಾಳ ವ್ಯಕ್ತಪಡಿಸಿದರು.
೧೭೮ ಮತಗಳಿಂದ ಸೋಲು
೨೦೧೨ ರಲ್ಲಿ ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ೧೭೮ ಮತಗಳ ಅಂತರದಿAದ ಮಂಜುನಾಥ್ ಕುಮಾರ್ ಸೋಲು ಅನುಭವಿಸಿದ್ದರು. ಈ ಬಾರಿ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿ ಅಧಿಕೃತ ಅಭ್ಯರ್ಥಿಯನ್ನಾಗಿ ಮಾಡಿರುವುದರಿಂದ ಗೆಲ್ಲುವ ಪೂರ್ಣ ಅವಕಾಶವಿದೆ ಎಂದು ಮಂಜುನಾಥ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕ್ಷೇತ್ರöವ್ಯಾಪಿ ಸಂಚರಿಸುತ್ತಿದ್ದು, ಶಿಕ್ಷಕರ ವಲಯದಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ಎಂದರು. ಮೂಲತಃ ಕುಶಾಲನಗರ ಸಮೀಪದ ಕುಡ್ಲೂರು ನಿವಾಸಿಯಾಗಿರುವ ಮಂಜುನಾಥ್ ಕುಮಾರ್, ೧೯೯೪ರಲ್ಲಿ ಸೋಮವಾರಪೇಟೆ ತಾಲೂಕಿನ ಗೋಣಿಮರೂರು ಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿ ಆರಂಭಿಸಿ ಪ್ರಬಾರ ಮುಖ್ಯ ಶಿಕ್ಷಕರಾಗಿ, ಸಂಪನ್ಮೂಲ ಶಿಕ್ಷಣ ವ್ಯಕ್ತಿಯಾಗಿ ೧೭ ವರ್ಷಗಳ ಸುದೀರ್ಘ ಅವಧಿ ಕಾರ್ಯನಿರ್ವಹಿಸಿ ೨೦೦೭ರಲ್ಲಿ ನಿವೃತ್ತಿಗೊಂಡರು.
೧೯೯೬ಲ್ಲಿ ಸೋಮವಾರಪೇಟೆ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ, ೯೮ರಲ್ಲಿ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾಗಿ, ೨೦೦೨ರಲ್ಲಿ ಸರಕಾರಿ ನೌಕರರ ಸಂಘದ ಅಧ್ಯಕ್ಷರಾಗಿ, ೨೦೦೭ರಲ್ಲಿ ಪ್ರೌಢಶಾಲಾ ಶಿಕ್ಷಕರ ರಾಜ್ಯ ಸಂಘಟನಾ ಕಾರ್ಯದರ್ಶಿ, ೨೦೧೭ರಲ್ಲಿ ಕೊಡಗು ವಿದ್ಯಾ ಇಲಾಖಾ ಸಹಕಾರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.
ಇದಲ್ಲದೆ ಕಾಂಗ್ರೆಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ವಕ್ತಾರರಾಗಿ ಕೊಡಗು ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ. ಪ್ರಸ್ತುತ ಕೆಪಿಸಿಸಿ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
- ಹೆಚ್.ಜೆ. ರಾಕೇಶ್
ಮತ್ತೊಂದು ಬಡ್ತಿ ಬಂದಲ್ಲಿ ವೇತನ ಹೆಚ್ಚಾಗುವ ಬದಲು ಇಳಿಮುಖಗೊಳ್ಳುತ್ತದೆ. ಈ ಅವೈಜ್ಞಾನಿಕ ನೀತಿ ಹೋಗಲಾಡಿ ಹೊಸ ಯೋಜನೆಯನ್ನು ರೂಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕೆಂದು ಮಂಜುನಾಥ್ ಹೇಳಿದರು.