ಪೊನ್ನಂಪೇಟೆ, ಮೇ ೨೬: ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಗುಂಡಿಕೆರೆ ಮಖಾಂ ವಾರ್ಷಿಕ ಉರೂಸ್‌ಗೆ ತೆರೆ ಎಳೆಯಲಾಯಿತು. ಗುಂಡಿಕೆರೆಯ ಮಖಾಂನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ವಲಿಯುಲ್ಲಾಹಿರವರ ಹೆಸರಿನಲ್ಲಿ ಪ್ರತಿವರ್ಷ ಅದ್ದೂರಿಯಿಂದ ನಡೆಯುವ ಗುಂಡಿಕೆರೆ ಮಖಾಂ ಉರೂಸ್ ಪ್ರಸಕ್ತ ವರ್ಷವೂ ೩ ದಿನಗಳ ಕಾಲ ಆಯೋಜನೆಗೊಂಡಿತ್ತು.
ಸಾರ್ವಜನಿಕ ಸಮ್ಮೇಳನವನ್ನು ವೀರಾಜಪೇಟೆಯ ಅನ್ವರುಲ್ ಹುದಾ ಸಂಸ್ಥೆಯ ಪ್ರಾಂಶುಪಾಲ ಅಶ್ರಫ್ ಅಹ್ಸನಿ ಉದ್ಘಾಟಿಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೊಡವ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ಹಾಜಿ ಮಾತನಾಡಿ, ಎಲ್ಲಾ ಸ್ನೇಹಕ್ಕಿಂತಲೂ ಮನುಷ್ಯ ಸ್ನೇಹ ಮೌಲ್ಯಯುತವಾದದ್ದು. ಇದನ್ನು ಯಾವ ಮಾನದಂಡಗಳಿAದಲೂ ಅಳೆಯಲು ಸಾಧ್ಯವಿಲ್ಲ. ಮನುಷ್ಯ ಸ್ನೇಹದ ಮೂಲಕ ಎಷ್ಟೇ ಕಠಿಣವಾದ ವೈರಾಗ್ಯವನ್ನು ಕೂಡ ದೂರ ಮಾಡಬಹುದು. ಅಲ್ಲದೆ ಈ ಸ್ನೇಹವೇ ಮಾನವೀಯತೆಯ ಬದುಕಿಗೆ ತಳಹದಿ ಎಂದು ಅಭಿಪ್ರಾಯಪಟ್ಟರು.
ಹಿರಿಯ ಧಾರ್ಮಿಕ ಪಂಡಿತ ಇಸ್ಮಾಯಿಲ್ ಸಖಾಫಿ ರಿಪ್ಪನ್ ಮುಖ್ಯ ಭಾಷಣ ಮಾಡಿದರು. ವೇದಿಕೆಯಲ್ಲಿ ಬೇಟೋಳಿ ಗ್ರಾಪಂ. ಸದಸ್ಯರಾದ ಎಂ.ಎA. ರಜಾಕ್, ಕೆದಮುಳ್ಳೂರು ಗ್ರಾ.ಪಂ. ಸದಸ್ಯ ಎಂ.ಎA. ಇಸ್ಮಾಯಿಲ್, ಗುಂಡಿಕೆರೆ ಶಾಫಿ ಮುಸ್ಲಿಂ ಜಮಾಅತ್ ಆಡಳಿತ ಮಂಡಳಿ ಉಪಾಧ್ಯಕ್ಷ ಎಂ.ವೈ. ಆಲಿ, ಕೋಶಾಧಿಕಾರಿ ಎಂ.ಎA. ಆಲಿ ಮುಸ್ಲಿಯರ್ ಹಾಜಿ, ಪ್ರಧಾನ ಕಾರ್ಯದರ್ಶಿ ಎಂ.ಎ. ಇಸ್ಮಾಯಿಲ್ ಹಾಜಿ, ಕಾರ್ಯದರ್ಶಿ ಸಿ.ಪಿ. ಆಲಿ, ಸದಸ್ಯರಾದ ಸಿ.ಯು. ಮಹಮ್ಮದ್ ಹಾಜಿ, ಗುಂಡಿಕೆರೆ ಜಮಾಅತ್‌ನ ೧ನೇ ತಕ್ಕರಾದ ಸಿ.ಎ. ಹಸೈನಾರ್ ಹಾಜಿ, ೨ನೇ ತಕ್ಕರಾದ ಎಂ.ಪಿ. ಶಾದಲಿ ಮುಂತಾದವರು ಉಪಸ್ಥಿತರಿದ್ದರು. ಗುಂಡಿಕೆರೆ ಶಾಫಿ ಮುಸ್ಲಿಂ ಜಮಾಅತ್‌ನ ಆಡಳಿತ ಮಂಡಳಿ ಅಧ್ಯಕ್ಷ ಕೆ.ಯು. ಮಹಮ್ಮದ್ ಹಾಜಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಆರಂಭದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಗೆ ಗುಂಡಿಕೆರೆ ಜಮಾಅತ್‌ನ ಖತೀಬರಾದ ಇಲ್ಯಾಸ್ ಅಂಜದಿ ನೇತೃತ್ವ ವಹಿಸಿದ್ದರು. ಎಂ.ಎA. ಇಸ್ಮಾಯಿಲ್ ಸ್ವಾಗತಿಸಿದರು. ಮದರಸ ಅಧ್ಯಾಪಕ ತಾಜುದ್ದೀನ್ ಪೈಝಾನಿ ವಂದಿಸಿದರು. ಕಾರ್ಯಕ್ರಮದ ನಂತರ ಮೌಲೂದ್ ಪಾರಾಯಣ ಮತ್ತು ಅನ್ನಸಂತರ್ಪಣೆ ನಡೆಯಿತು.
ಇದಕ್ಕೂ ಮೊದಲು ನಡೆದ ಕಾರ್ಯಕ್ರಮದಲ್ಲಿ ಗುಂಡಿಕೆರೆ ಶಾಫಿ ಮುಸ್ಲಿಂ ಜಮಾಅತ್‌ನ ಆಡಳಿತ ಮಂಡಳಿ ಅಧ್ಯಕ್ಷ ಕೆ.ಯು. ಮಹಮ್ಮದ್ ಹಾಜಿ ಧ್ವಜಾರೋಹಣದ ಮೂಲಕ ಗುಂಡಿಕೆರೆ ಮಖಾಂ ಉರೂಸ್‌ಗೆ ಚಾಲನೆ ನೀಡಿದರು. ಉರೂಸ್‌ನ ಸಮಾರೋಪದ ಅಂಗವಾಗಿ ಕೇರಳದ ಧಾರ್ಮಿಕ ಸಾಹಿತಿ ಡಾ. ಕೋಯ ಕಾಪಾಡ್ ಮತ್ತು ಸಂಗಡಿಗರಿAದ ಗ್ರಾಂಡ್ ಇಶಲ್ ನೈಟ್ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಉರೂಸ್‌ನ ಎಲ್ಲಾ ದಿನವೂ ಮಗರಿಬ್ ನಮಾಜಿನ ನಂತರ ಸಾಂಪ್ರದಾಯಿಕ ದಫ್ ಪ್ರದರ್ಶನ ಏರ್ಪಡಿಸಲಾಗಿತ್ತು.