ಕುಶಾಲನಗರ, ಮೇ ೨೬: ಕುಶಾಲನಗರದಲ್ಲಿ ಟೀಂ ಡ್ರೀಮ್ ಸ್ಟಾರ್ ನೃತ್ಯ ಸಂಸ್ಥೆಯ ವತಿಯಿಂದ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಶಾಸಕ ಡಾ. ಮಂತರ್ ಗೌಡ, ನೃತ್ಯ ವ್ಯಾಯಾಮದ ಒಂದು ಭಾಗವಾಗಿದೆ. ಜೀವನದಲ್ಲಿ ಸಕ್ರಿಯವಾಗಿರಲು ಪ್ರೇರೇಪಣೆ ನೀಡುತ್ತದೆ ಎಂದರು.
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ವಿ.ಪಿ. ಶಶಿಧರ್, ನಗರ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆದಂ ಮತ್ತಿತರರು ಮಾತನಾಡಿದರು.
ಪಟ್ಟಣದ ಕೊಡವ ಸಮಾಜ ಸಭಾಂಗಣದಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಕ್ಕೂ ಅಧಿಕ ಕಲಾವಿದರು ಪಾಲ್ಗೊಂಡಿದ್ದರು. ಜೂನಿಯರ್ ವಿಭಾಗದಲ್ಲಿ ಕೂಡಿಗೆಯ ಎ ಕ್ರಿಯೇಟಿವ್ ನೃತ್ಯ ಸಂಸ್ಥೆ ಪ್ರಥಮ, ಮಡಿಕೇರಿಯ ನಾಟ್ಯಕಲಾ ದ್ವಿತೀಯ, ಕಿಂಗ್ಸ್ ಆಫ್ ಕೂರ್ಗ್ ತೃತೀಯ ಬಹುಮಾನ ಪಡೆಯಿತು.
ಸೀನಿಯರ್ ವಿಭಾಗದಲ್ಲಿ ಸೋಮವಾರಪೇಟೆಯ ಟೀಂ ಅಡ್ವೆಂಚರ್ ಡಾನ್ಸ್ ಸ್ಟುಡಿಯೋ ಪ್ರಥಮ, ಮಡಿಕೇರಿಯ ನಾಟ್ಯಕಲಾ ನೃತ್ಯ ಸಂಸ್ಥೆ ದ್ವಿತೀಯ ಬಹುಮಾನ ಗಳಿಸಿತು.
ಚಾಮರಾಜನಗರದ ಪ್ರವೀಣ್ ಕುಮಾರ್, ಬೆಂಗಳೂರಿನ ಸುಮಿತ್, ಭೂಮಿಕ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು. ಅತಿಥಿಗಳಾಗಿ ಕೊಡವ ಸಮಾಜದ ಅಧ್ಯಕ್ಷ ಬೋಸ್ ಮೊಣ್ಣಪ್ಪ, ಸರಳ ರಾಮಣ್ಣ, ಪತ್ರಕರ್ತರಾದ ಜಯಪ್ರಕಾಶ್, ಮಹಮದ್ ಮುಸ್ತಾಫ, ಸುರ್ಜಿತ್ ಪಾಲ್ಗೊಂಡಿದ್ದರು.
ಆಯೋಜಕರಾದ ಶರಣ್, ಆನಂದ್, ಪವನ್, ಸೀಮಾ, ಚೈತನ್ಯ, ವಿನುತಾ, ಯಶಸ್, ಕಾರ್ತಿಕ್ ಮತ್ತಿತರರು ಹಾಜರಿದ್ದರು.