ಸೋಮವಾರಪೇಟೆ, ಮೇ ೨೬: ಹೈನುಗಾರಿಕಾ ಉದ್ಯಮದ ಬಗ್ಗೆ ಕ್ಷೇತ್ರ ಭೇಟಿ ಕಾರ್ಯಕ್ರಮದಡಿ ಸಮೀಪದ ಯಡೂರು ಬಿಟಿಸಿಜಿ ಕಾಲೇಜಿನ ವಿದ್ಯಾರ್ಥಿಗಳು ಆಲೇಕಟ್ಟೆ ರಸ್ತೆಯಲ್ಲಿರುವ ಹಾಲು ಸಂಗ್ರಹ ಡೈರಿಗೆ ಭೇಟಿ ನೀಡಿ ಮಾಹಿತಿ ಪಡೆದರು.

ಚೌಡ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿರುವ ಆಲೇಕಟ್ಟೆ ರಸ್ತೆಯ ಡೈರಿಗೆ ಭೇಟಿ ನೀಡಿದ ಕಾಲೇಜಿನ ಅಂತಿಮ ವರ್ಷದ ಬಿ.ಕಾಂ. ವಿದ್ಯಾರ್ಥಿಗಳಾದ ಕಾವ್ಯ, ಅಂಕಿತ, ಚೈತನ್ಯ ಇವರುಗಳು, ಡೈರಿಯ ಕೆಲಸ ಕಾರ್ಯಗಳು, ಲಾಭ, ನಷ್ಟದ ಬಗ್ಗೆ ಮಾಹಿತಿ ಪಡೆದರು.

ಸರ್ಕಾರದಿಂದ ಡೈರಿಗಳ ಮೂಲಕ ಹೈನುಗಾರರಿಗೆ ಸಿಗುವ ಸವಲತ್ತುಗಳು, ಫೀಡ್ಸ್, ಔಷಧಿಗಳ ಬಗ್ಗೆ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಯೋಗೇಂದ್ರ ವಿವರಣೆ ಒದಗಿಸಿದರು.