ಕಾಯಪಂಡ ಶಶಿ ಸೋಮಯ್ಯ
ಮಡಿಕೇರಿ, ಮೇ ೨೬: ರಾಜ್ಯ ವಿಧಾನ ಪರಿಷತ್ನಲ್ಲಿ ೧೧ ಸದಸ್ಯರುಗಳ ಅಧಿಕಾರಾವಧಿ ಜೂನ್ ೧೭ಕ್ಕೆ ಮುಕ್ತಾಯಗೊಳ್ಳಲಿದೆ. ಒಟ್ಟಿಗೆ ೧೧ ಸದಸ್ಯ ಸ್ಥಾನ ಖಾಲಿಯಾಗುತ್ತಿರುವ ಹಿನ್ನೆಲೆ ಈ ಸ್ಥಾನಕ್ಕೆ ಅವಕಾಶ ಗಿಟ್ಟಿಸಿಕೊಳ್ಳುವ ನಿಟ್ಟಿನಲ್ಲಿ ಇದೀಗ ಭಾರೀ ರಾಜಕೀಯ ಚಟುವಟಿಕೆಗಳೂ ಆರಂಭಗೊAಡಿವೆ. ವಿಧಾನಸಭೆಯಿಂದ ವಿಧಾನ ಪರಿಷತ್ಗೆ ೧೧ ಸದಸ್ಯರ ನೇಮಕಾತಿಯಾಗಬೇಕಿದೆ. ಪ್ರಸ್ತುತ ವಿಧಾನ ಪರಿಷತ್ನಲ್ಲಿ ಇರುವ ಸಂಖ್ಯಾಬಲದAತೆ ಅಧಿಕ ಸ್ಥಾನ ಹೊಂದಿರುವ ಕಾಂಗ್ರೆಸ್ ಪಕ್ಷದಿಂದ ೭ ಮಂದಿ, ಬಿಜೆಪಿಯಿಂದ ೩ ಹಾಗೂ ಜೆಡಿಎಸ್ನಿಂದ ಓರ್ವರಿಗೆ ವಿಧಾನ ಪರಿಷತ್ ಸದಸ್ಯರಾಗುವ ಅವಕಾಶ ವಿದೆ. ಇದರಂತೆ ಇದೀಗ ಮೂರು ಪಕ್ಷಗಳಲ್ಲಿ ಆಕಾಂಕ್ಷಿಗಳ ದಂಡೇ ಇದಕ್ಕಾಗಿ ಲಾಬಿ ನಡೆಸುತ್ತಿರುವುದು ಹೊಸ ರಾಜಕೀಯ ಬೆಳವಣಿಗೆಯಾಗಿದೆ.
ಯರ್ಯಾರು ನಿವೃತ್ತಿ
ಹಾಲಿ ಸದಸ್ಯರುಗಳಾಗಿರುವ ಅರವಿಂದ ಕುಮಾರ್ ಅರಲಿ, ಎನ್.ಎಸ್. ಭೋಸರಾಜ್, ಕೆ. ಗೋವಿಂದರಾಜ್, ಡಾ. ತೇಜಸ್ವಿನಿಗೌಡ, ಮುನಿರಾಜುಗೌಡ ಪಿ.ಎಂ, ಕೆ.ಪಿ. ನಂಜುAಡಿ, ಬಿ.ಎಂ. ಫಾರೂಕ್, ರಘುನಾಥ್ರಾವ್ ಮಲ್ಕಾಪುರೆ, ಎನ್. ರವಿಕುಮಾರ್, ಎಸ್. ರುದ್ರೇಗೌಡ ಹಾಗೂ ಕೆ. ಹರೀಶ್ ಕುಮಾರ್ ಅವರುಗಳ ಅಧಿಕಾರಾವಧಿ ಜೂನ್ ೧೭ಕ್ಕೆ ಮುಕ್ತಾಯಗೊಳ್ಳಲಿದೆ. ಈಗಾಗಲೇ ಈ ಸ್ಥಾನಕ್ಕೆ ಚುನಾವಣೆಯೂ ನಿಗದಿಯಾಗಿದ್ದು, ತಾ.೨೭ರಿಂದ (ಇಂದಿನಿAದ) ಅಧಿಸೂಚನೆ ಜಾರಿಯಾಗುತ್ತಿದೆ. ನಾಮಪತ್ರ ಸಲ್ಲಿಕೆಗೆ ಜೂನ್ ೩ ಕೊನೆಯ ದಿನವಾಗಿದ್ದು, ಜೂನ್ ೧೩ ರಂದು ಚುನಾವಣೆ ನಡೆಯಲಿದೆ.
ಕೊಡಗಿನಿಂದಲೂ ಆಕಾಂಕ್ಷಿಗಳು
ಪ್ರಸ್ತುತ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ೭ ಸದಸ್ಯ ಸ್ಥಾನ ಖಚಿತವಾಗಿರುವುದರಿಂದ ಅವಕಾಶಕ್ಕಾಗಿ ಕೊಡಗಿನಿಂದಲೂ ಹಲವು ಆಕಾಂಕ್ಷಿಗಳು ತಮ್ಮ ಬೇಡಿಕೆ ಮುಂದಿರಿಸಿದ್ದಾರೆನ್ನಲಾಗಿದೆ. ಸದ್ಯದ ಮಾಹಿತಿಯಂತೆ ಪ್ರಬಲವಾಗಿ ನಾಲ್ವರು ಈ ನಿಟ್ಟಿನಲ್ಲಿ ಸ್ಪರ್ಧೆಯಲ್ಲಿದ್ದಾರೆ. ಕಳೆದ ಬಾರಿ ವಿಧಾನ ಪರಿಷತ್ ಸದಸ್ಯೆಯಾಗಿದ್ದ ವೀಣಾ ಅಚ್ಚಯ್ಯ, ಮಾಜಿ ಎಂ.ಎಲ್.ಸಿ. ಸಿ.ಎಸ್. ಅರುಣ್ ಮಾಚಯ್ಯ, ಹೆಚ್.ಎಸ್. ಚಂದ್ರಮೌಳಿ ಹಾಗೂ ಕೆ.ಪಿ. ಚಂದ್ರಕಲಾ (ಮೊದಲ ಪುಟದಿಂದ) ಅವರುಗಳ ಹೆಸರು ಕೇಳಿ ಬಂದಿದ್ದು, ನಾಲ್ವರೂ ತಮ್ಮದೇ ಆದ ಪ್ರಯತ್ನದಲ್ಲಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ನ ಇಬ್ಬರು ಶಾಸಕರು ಚುನಾಯಿತರಾಗಿದ್ದರೂ ನಿಗಮ ಮಂಡಳಿ ಅಥವಾ ಇತರ ನಾಮ ನಿರ್ದೇಶನದಲ್ಲಿ ಕೊಡಗಿಗೆ ಪ್ರಾತಿನಿಧ್ಯ ಸಿಗದಿರುವ ಹಿನ್ನೆಲೆಯಲ್ಲಿ ಕೊಡಗಿಗೆ ವಿಧಾನ ಪರಿಷತ್ ಸ್ಥಾನದ ಅವಕಾಶ ನೀಡಬೇಕು ಎಂಬುದಾಗಿ ಹೈಕಮಾಂಡ್ ಮೇಲೆ ಒತ್ತಡ ಹಾಕಲಾಗುತ್ತಿದೆ ಎನ್ನಲಾಗಿದೆ.
ಮಾಜಿ ಎಂ.ಎಲ್.ಸಿಗಳಿಬ್ಬರು ಮತ್ತೊಂದು ಅವಕಾಶಕ್ಕೆ ಬೇಡಿಕೆಯಿರಿಸಿದ್ದರೆ, ಈ ಹಿಂದಿನಿAದಲೂ ಪಕ್ಷದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಅವಕಾಶ ನೀಡಲು ಚಂದ್ರಕಲಾ ಒತ್ತಡ ಹಾಕುತ್ತಿದ್ದಾರೆ. ಹೆಚ್.ಎಸ್. ಚಂದ್ರಮೌಳಿ ಅವರು ಈ ಹಿಂದೆ ಜಿಲ್ಲೆಯಿಂದ ವಿಧಾನ ಪರಿಷತ್ ಸ್ಥಾನಕ್ಕೆ ಸ್ಪರ್ಧಿಸಿ ಪರಾಭವಗೊಂಡಿದ್ದು, ಇದೀಗ ಮತ್ತೊಂದು ಅವಕಾಶಕ್ಕಾಗಿ ಹೈಕಮಾಂಡ್ ಮುಂದೆ ಪ್ರಯತ್ನ ದಲ್ಲಿದ್ದಾರೆ. ಪ್ರಸ್ತುತ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಹಲವು ಅಸಮಾಧಾನಿತ ರನ್ನು ಸರಿಪಡಿಸುವ ಅನಿವಾರ್ಯತೆ ಯಲ್ಲಿದ್ದು, ಯಾರಿಗೆ ಮಣೆ ಹಾಕಲಿದೆ ಎಂಬ ಕೌತುಕ ಎದುರಾಗಿದೆ. ರಾಜ್ಯದ ಇತರ ಆಕಾಂಕ್ಷಿಗಳ ಜತೆ ಕೊಡಗಿನವರ ಬೇಡಿಕೆಗೆ ಮನ್ನಣೆ ಸಿಗಲಿದೆಯೇ ಎಂಬದನ್ನು ಕಾದುನೋಡಬೇಕಿದೆ. ಜೂನ್ ೩ರಂದೇ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿರು ವುದರಿಂದ ಇನ್ನು ಒಂದೆರಡು ದಿನದಲ್ಲಿ ಅಭ್ಯರ್ಥಿಗಳು ಯಾರಾಗಬಹುದೆಂಬ ಪ್ರಶ್ನೆಗೆ ಉತ್ತರ ಸಿಗಲಿದೆ.