‘ಎಲ್ಲರಿಗಾಗಿ ಒಬ್ಬನು ಮತ್ತು ಒಬ್ಬನಿಗಾಗಿ ಎಲ್ಲರು’ ಎಂಬುದು ಸಹಕಾರ ಸಂಘಗಳ ಪ್ರಮುಖ ಧ್ಯೇಯವಾಗಿದೆ. ಭೂಮಿಯಲ್ಲಿ ಮನುಷ್ಯನಾಗಿ ಹುಟ್ಟಿದ ಮೇಲೆ ಆಹಾರ, ನೀರು, ಬಟ್ಟೆ ಮತ್ತು ವಸತಿ ಹೇಗೆ ಅವಶ್ಯಕವೋ ಹಾಗೆಯೇ ಸುಖವಾದ ಮತ್ತು ಶಾಂತವಾದ ಜೀವನ ನಡೆಸಲು ಹೊಂದಿಕೊAಡು ಬಾಳುವುದು ಅತೀ ಅವಶ್ಯಕವಾಗಿದೆ. ‘ಸಮರಸವೇ ಜೀವನ’ ಎಂಬAತೆ ಹೊಂದಿಕೊAಡು ಬಾಳುವುದರಿಂದ ಒಬ್ಬರು ಮತ್ತೊಬ್ಬರ ಸುಖ-ದುಃಖಗಳನ್ನು ತಿಳಿದುಕೊಳ್ಳಬಹುದಾದ ಪರಸ್ಪರ ಸಹಾಯ ಮಾಡುವ ಮನೋಭಾವನೆ ಬೆಳೆಯುತ್ತದೆ. ಇದೇ ಸಹಕಾರದ ತಳಹದಿಯಾಗಿದೆ. ಸಹಕಾರದ ತಳಹದಿಯ ಮೇಲೆ ಸಾಮಾಜಿಕ ವ್ಯವಸ್ಥೆ ನಿಂತಿದೆ.

ಬಸವಣ್ಣನವರು ಹನ್ನೆರಡನೆಯ ಶತಮಾನದಲ್ಲಿ ಸಹಕಾರ ತತ್ವದ ಬಗ್ಗೆ ಹೀಗೆ ಹೇಳಿದ್ದಾರೆ:

ಕಾಗೆಯೊಂದಗುಳ ಕಂಡರೆ

ಕರೆಯದೇ ತನ್ನ ಬಳಗವನು;

ಕೋಳಿಯೊಂದು ಕುಟುಕ ಕಂಡರೆ

ಕೂಗಿ ಕರೆಯದೇ ತನ್ನ ಕುಲವೆಲ್ಲವನ್ನು;

ಶಿವಭಕ್ತನಾಗಿ ಭಕ್ತಿಪಕ್ಷವಿಲ್ಲದಿದ್ದರೆ

ಕಾಗೆ ಕೋಳಿಗಿಂತ ಕರಕಷ್ಟ

ಕೂಡಲ ಸಂಗಮದೇವ.

ಹೀಗೆ ಹಂಚಿಕೊAಡು ತಿನ್ನುವ ಬುದ್ಧಿ ಮನುಷ್ಯನಿಗೆ ಬಂದಾಗ ಅಂದೇ ಅವನ ಕಲ್ಯಾಣಸಿದ್ಧಿ. ಸಹಕಾರಿ ಸಂಘಗಳು, ಇವು ಪ್ರಪಂಚದಾದ್ಯAತ ಕಂಡು ಬರುತ್ತವೆ. ಇವು ವ್ಯಕ್ತಿಗಳ ಸ್ವಯಂ ಪ್ರೇರಿತ ಸಂಸ್ಥೆಗಳಾಗಿದ್ದು, ಆರ್ಥಿಕವಾಗಿ ಹಿಂದುಳಿದಿರುವವರು ತಮ್ಮ ಸದಸ್ಯರ ಅನುಕೂಲತೆಗಾಗಿ ಸ್ಥಾಪಿಸಿಕೊಂಡಿರುವ ಸಂಸ್ಥೆಗಳಾಗಿವೆ. ಪ್ರಪಂಚದ ಮೊದಲ ಸಹಕಾರಿ ಸಂಘವು ಕ್ರಿ.ಶ. ೧೮೮೪ರಲ್ಲಿ ರಾಬರ್ಟ್ ಓವನ್ ಎಂಬವರಿAದ ಇಂಗ್ಲೆAಡ್‌ನಲ್ಲಿ ಸ್ಥಾಪಿಸಲ್ಪಟ್ಟಿತು.

ಇದು ಗ್ರಾಹಕರ ಸಹಕಾರ ಸಂಘವಾಗಿತ್ತು. ಸಾಮಾನ್ಯವಾಗಿ ಸಹಕಾರಿ ಸಂಘಗಳು ಆರ್ಥಿಕ ಪ್ರಗತಿ ಸಾಧಿಸಲು ಮತ್ತು ಆರ್ಥಿಕ ಶೋಷಣೆಯಿಂದ ಮುಕ್ತವಾಗಲು ಆರ್ಥಿಕ ಸಮಾನತೆ ಹೊಂದಿರುವ ವ್ಯಕ್ತಿಗಳು ಈ ಸಂಘಗಳನ್ನು ಸ್ಥಾಪಿಸಿಕೊಳ್ಳುತ್ತಾರೆ.

ಭಾರತದಲ್ಲಿ ಸಹಕಾರಿ ಪದ್ಧತಿಯ ಆಂದೋಲನ

ಭಾರತದಲ್ಲಿ ಸಹಕಾರಿ ಸಂಘಗಳ ಕಾಯಿದೆಯನ್ನು ಜಾರಿಗೆ ತರುವುದರ ಮೂಲಕ ಕ್ರಿ.ಶ.೧೯೦೪ರಲ್ಲಿ ಸಹಕಾರಿ ಸಂಘಗಳು ಪ್ರಾರಂಭವಾದವು. ಕ್ರಿ.ಶ. ೧೯೧೨ರಲ್ಲಿ ಒಂದು ಶಾಸನವು ಜಾರಿಗೆ ಬಂದು ನೋಂದಣಿ ಮಾಡುವುದನ್ನು ಕಡ್ಡಾಯಗೊಳಿಸಲಾಯಿತು. ಸ್ವಾತಂತ್ರö್ಯದ ನಂತರ ಪಂಚವಾರ್ಷಿಕ ಯೋಜನೆಗಳ ಅಡಿಯಲ್ಲಿ ಸಹಕಾರಿ ಸಂಘಗಳು ಹೆಚ್ಚು ಪ್ರವರ್ಧಮಾನಕ್ಕೆ ಬಂದವು. ಈಗ ನಮ್ಮ ದೇಶದಲ್ಲಿ ಸುಮಾರು ೮ ಲಕ್ಷ ಸಹಕಾರಿ ಸಂಘಗಳಿವೆ. ಕರ್ನಾಟಕದಲ್ಲಿ ಮೊದಲ ಸಹಕಾರಿ ಸಂಘವು ಈಗಿನ ಗದಗ ಜಿಲ್ಲೆಯ ಗದಗ ತಾಲೂಕಿನ ಕಣಗಿನ ಹಾಳ್ ಎಂಬಲ್ಲಿ ಪ್ರಾರಂಭವಾಯಿತು. ಬೆಂಗಳೂರು ನಗರ ಕೇಂದ್ರ ಸಹಕಾರಿ ಸಂಘವು ಕ್ರಿ.ಶ. ೧೯೦೫ರಲ್ಲಿ ಪ್ರಾರಂಭವಾಯಿತು. ಧಾರವಾಡ ಜಿಲ್ಲೆಯಲ್ಲಿ ಸಹಕಾರಿ ಸಂಘಗಳ ಸ್ಥಾಪನೆಗೆ ಹೆಚ್ಚು ಮಹತ್ವ ಕೊಟ್ಟಿದ್ದರಿಂದ ಈ ಜಿಲ್ಲೆಯನ್ನು ‘‘ಸಹಕಾರಿ ಸಂಘಗಳ ತೊಟ್ಟಿಲು’’ ಎಂದು ಕರೆಯುತ್ತಾರೆ.

ಭಾರತದಲ್ಲಿ ಸಹಕಾರಿ ಸಂಘಗಳ ರಚನೆ ಭಾರತದ ಸಹಕಾರ ಸಂಘಗಳ ಕಾಯಿದೆ ೧೯೧೨ರಂತೆ ನಿಯಂತ್ರಿಸಲ್ಪಡುತ್ತದೆ. ಬೇರೆ ಬೇರೆ ರಾಜ್ಯಗಳಲ್ಲಿ ಅಲ್ಲಿರುವ ಕಾಯಿದೆಗನುಸಾರವಾಗಿ ಸಹಕಾರಿ ಸಂಘಗಳ ರಚನೆ ಆಗುತ್ತದೆ. ಸಹಕಾರಿ ಸಂಘಗಳನ್ನು ರಚಿಸಲು ಕನಿಷ್ಟ ಹತ್ತು ಮಂದಿ ಸದಸ್ಯರಿರಬೇಕು. ಇವರು ಒಂದೇ ಸ್ಥಳದಲ್ಲಿ ನೆಲೆಸಿದವರಾಗಿರಬೇಕು ಅಥವಾ ಯಾವುದಾದರೂ ಒಂದೇ ರೀತಿಯ ವೃತ್ತಿಯನ್ನು ಅನುಸರಿಸುತ್ತಿರು ವವರಾಗಿರಬೇಕು. ಇವರಲ್ಲಿ ಒಂದು ಸಾಮಾನ್ಯ ಆರ್ಥಿಕ ಅವಶ್ಯಕತೆ ಇರಬೇಕು. ಇವರನ್ನು ಪ್ರವರ್ತಕರೆಂದು (Pಡಿomoಣeಡಿs) ಕರೆಯುತ್ತಾರೆ.

ಇವರು ನಿಗದಿತ ನಮೂನೆಯಲ್ಲಿ ಎಲ್ಲಾ ವಿವರಗಳನ್ನು ಸಿದ್ಧಪಡಿಸಿ ಆ ಜಿಲ್ಲಾ ಮಟ್ಟದ ಸಹಕಾರಿ ಸಂಘಗಳ ನೋಂದಣಾಧಿಕಾರಿಗೆ ನಿಗದಿತ ದಾಸ್ತಾವೇಜು ಜಾಗದ ವಿಳಾಸ, ಸಂಘದ ಗುರಿಗಳು ಮತ್ತು ಉದ್ದೇಶಗಳು, ಸಂಘದ ಕಾರ್ಯಕ್ಷೇತ್ರದ ವ್ಯಾಪ್ತಿ, ಷೇರುಗಳ ನೀಡಿಕೆಯಿಂದ ಸಂಗ್ರಹಿಸಬಹುದಾದ ಬಂಡವಾಳ ಸದಸ್ಯರ ಹೊಂದಾಣಿಕೆ ಮುಂತಾದವು ಪೂರ್ಣವಾಗಿ ನಮೂದಿಸಿರಬೇಕು.

ಈ ನಿಬಂಧನೆಗಳು ಮತ್ತು ಉಪನಿಬಂಧನೆಗಳನ್ನು ಪಡೆದ ಬಳಿಕ ಪ್ರಾಂತ್ಯದ ನೋಂದಣಾಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸಿ ತಮಗೆ ನಿಯಮಾನುಸಾರವಾಗಿದೆ ಎಂದು ತೃಪ್ತಿಯಾದರೆ ಸಂಘವನ್ನು ನೋಂದಣಿ ಮಾಡಿಕೊಂಡು ನೋಂದಣಿ ಪ್ರಮಾಣ ಪತ್ರವನ್ನು ನೀಡುತ್ತಾರೆ. ಈ ಪತ್ರ ಬಂದ ಮೇಲೆ ಸಂಘವು ಕಾನೂನು ಬದ್ಧವಾಗಿ ಅಸ್ತಿತ್ವಕ್ಕೆ ಬರುತ್ತದೆ.

ಸಾಮಾನ್ಯ ಲಕ್ಷಣಗಳು:

೧. ಇವು ವ್ಯಕ್ತಿಗಳ ಸ್ವಯಂ ಪ್ರೇರಿತ ಸಂಸ್ಥೆಗಳಾಗಿವೆ.

೨. ಇಲ್ಲಿ ಸದಸ್ಯತ್ವವು ಜಾತಿ, ಧರ್ಮ, ಲಿಂಗ ಮತ್ತು ವರ್ಗ ಭೇದವಿಲ್ಲದೆ ಎಲ್ಲಾ ವಯಸ್ಕರಿಗೂ ತೆರೆದಿರುತ್ತದೆ.

೩. ಇಲ್ಲಿ ಸದಸ್ಯರ ಸಂಖ್ಯೆಗೆ ಗರಿಷ್ಠ ಮಿತಿ ಇರುವುದಿಲ್ಲ.

೪. ಇಲ್ಲಿ ಪ್ರಜಾಪ್ರಭುತ್ವದ ಮಾದರಿಯ ಆಡಳಿತ ಇರುತ್ತದೆ. ಅಂದರೆ, ಸಂಘದ ಸರ್ವ ಸಾಮಾನ್ಯ ಸಭೆಗೆ ಎಲ್ಲಾ ಸದಸ್ಯರೂ ಭಾಗವಹಿಸುವಂತೆ ಹಾಗೂ ಪ್ರತಿ ಸದಸ್ಯನಿಗೂ ಎಷ್ಟೇ ಬಂಡವಾಳ ಹೂಡಿದ್ದರೂ ಒಂದೇ ಮತ ಚಲಾಯಿಸುವ ಹಕ್ಕಿರುತ್ತದೆ.

೫. ಲಾಭದ ಒಂದು ಭಾಗವು ಸಂಘದ ಸಾಮಾನ್ಯ ನಿಧಿಗೆ ವರ್ಗಾಯಿಸಬೆಕು.

೬. ಇವುಗಳ ಸ್ಥಾನಮಾನ ಮತ್ತು ನಿಯಂತ್ರಣ ಸರ್ಕಾರದ ಮೇಲ್ವಿಚಾರಣೆಗೆ ಒಳಗಾಗಿರುತ್ತದೆ.

ಸಹಕಾರಿ ಸಂಘದ ವಿಧಗಳು

೧. ಸಾಲದ ಸಹಕಾರಿ ಸಂಘಗಳು

೨. ಮಾರುಕಟ್ಟೆ ಸಹಕಾರಿ ಸಂಘಗಳು

೩. ಉತ್ಪಾದಕ ಸಹಕಾರಿ ಸಂಘಗಳು

೪. ಗ್ರಾಹಕರ ಸಹಕಾರಿ ಸಂಘಗಳು

೫. ಬೇಸಾಯಗಾರರ ಸಹಕಾರಿ ಸಂಘಗಳು

೬. ಗೃಹ ನಿರ್ಮಾಣ ಸಹಕಾರಿ ಸಂಘಗಳು

೭. ವಿವಿಧ ರೀತಿಯ ಸೇವೆಗಳಿಗಾಗಿ ಸಹಕಾರಿ ಸಂಘಗಳು.

ಹಳ್ಳಿಗಳಲ್ಲಿ ಬೇಸಾಯ ಮಾಡುವಾಗ, ರೈತರು ಪರಸ್ಪರ ಸಹಾಯ ಮಾಡುತ್ತಾರೆ. ಶಾರೀರಿಕ ಶ್ರಮದೊಂದಿಗೆ ಪರಸ್ಪರ ಪ್ರೀತ, ವಿಶ್ವಾಸ, ಸ್ನೇಹ, ಸಹಕಾರದ ಭಾವನೆಯು ಮೂಡುತ್ತದೆ. ಈ ರೀತಿಯಾಗಿ ಒಬ್ಬರು ಮತ್ತೊಬ್ಬರಿಗೆ ಸಹಾಯ ಮಾಡುವ ವಿಧಾನವೇ ‘‘ಸಹಕಾರ ಗ್ರಾಮೀಣ ಪ್ರದೇಶಗಳಲ್ಲಿ ಸಾಲವನ್ನು ಪಡೆಯುವುದಕ್ಕೋಸ್ಕರ ಸಹಕಾರಿ ಬ್ಯಾಂಕುಗಳ ವ್ಯವಸ್ಥೆ ಇದೆ. ಈ ಸಾಲಗಳನ್ನು ಮಾಸಿಕ ಮತ್ತು ವಾರ್ಷಿಕ ವಸೂಲಾತಿ ಮಾಡುವ ವ್ಯವಸ್ಥೆ ಇದೆ. ಸಹಕಾರಿ ಬ್ಯಾಂಕ್‌ಗಳಲಿ ತಮ್ಮ ಶಕ್ತಿಗನುಸಾರವಾಗಿ ಹಣವನ್ನು ಉಳಿತಾಯ ಮಾಡಬಹುದು. ಒಂದು ತಿಂಗಳಿಗೆ ನೂರು ರೂಪಾಯಿಯಂತೆ ಇಟ್ಟರೆ ಮೂರು ವರ್ಷಕ್ಕೆ ಮೂರು ಸಾವಿರದ ಆರುನೂರು ರೂಪಾಯಿಗಳು ಸಂಗ್ರಹವಾಗುತ್ತದೆ. ಇಂತಹ ಪದ್ಧತಿಯನ್ನು ‘ಸಂರಕ್ಷಣಾಕೋಶ ಪದ್ಧತಿ’ ಎನ್ನುವರು.

ಹಳ್ಳಿಗಳಲ್ಲಿ ಜನರು ತಾವು ಬೆಳೆದಂತಹ ಧಾನ್ಯಗಳನ್ನು ಪಟ್ಟಣಗಳಿಗೆ ಹೋಗಿ ಮಾರಾಟ ಮಾಡುತ್ತಾರೆ. ಅದರಿಂದ ದೊರೆತ ಹಣದಿಂದ ಇತರ ವಸ್ತುಗಳನ್ನು ಕೊಂಡುಕೊಳ್ಳುತ್ತಾರೆ.ಆಗ ಅವರು ವ್ಯಾಪಾರಗಳಿಂದ ಮೋಸ ಹೋಗುವ ಸಾಧ್ಯತೆಗಳಿವೆ. ಹಳ್ಳಿಯ ಜನರಲ್ಲಿ ಸಹಕಾರ ಮನೋಭಾವನೆ ಇದ್ದರೆ ಒಬ್ಬ ಬುದ್ಧಿವಂತ ವ್ಯಕ್ತಿಯು ಆ ಹಳ್ಳಿಗೆ ಬೇಕಾದಂತಹ ವಸ್ತುಗಳನ್ನು ಕಡಿಮೆ ದರದಲ್ಲಿ ಕೊಂಡುಕೊಳ್ಳುವAತಹ ವ್ಯವಸ್ಥೆಯನ್ನು ಮಾಡಿಕೊಳ್ಳಬಹುದು. ಇದೇ ರೀತಿ ಬೆಳೆದಂತಹ ಭತ್ತ, ಗೋಧಿ, ರಾಗಿ, ಸೂರ್ಯಕಾಂತಿ, ಜೋಳ ಮುಂತಾದ ಧಾನ್ಯಗಳನ್ನು ಹಳ್ಳಿಯಲ್ಲಿರುವ ಒಬ್ಬನೇ ವ್ಯಕ್ತಿಗೆ ಮಾರಾಟ ಮಾಡಿ ಹೆಚ್ಚು ಬೆಲೆಯನ್ನು ಪಡೆಯಬಹುದು. ಜೀವನದಲ್ಲಿ ಸಹಕಾರ ಪದ್ಧತಿಯಿಂದ ಶ್ರೀಮಂತರಿAದ ಬಡವರಿಗೆ ಉಂಟಾಗುವAತಹ ಶೋಷಣೆ ನಿಲ್ಲುತ್ತದೆ. ಸಹಕಾರಿ ಸಂಘಗಳು ಮಾನವರಿಗೆ ಒಂದು ವರದಾನ. ಇದರಿಂದ ಮಾನವ ಸುಖದಿಂದ ಜೀವನ ಸಾಗಿಸಬಹುದು.

ಪ್ರಯೋಜನಗಳು

ಇವುಗಳ ರಚನೆ ಸುಲಭ. ಹೆಚ್ಚು ಬಂಡವಾಳದ ಅಗತ್ಯವಿಲ್ಲ. ಎಲ್ಲಾ ಸದಸ್ಯರಿಗೂ ಸಮಾನವಾದ ಹಕ್ಕು ಬಾಧ್ಯತೆಗಳಿರುತ್ತದೆ. ಸದಸ್ಯರಲ್ಲಿ ತಾರತಮ್ಯವಿರುವುದಿಲ್ಲ. ಪ್ರಜಾಪ್ರಭುತ್ವ ಮಾದರಿಯ ರೀತಿಯಲ್ಲಿ ನಡೆಯುತತದೆ. ಪ್ರತಿ ಸದಸ್ಯನಿಗೂ ಒಂದೇ ಮತದಾನದ ಹಕ್ಕಿರುತ್ತದೆ. ಸದಸ್ಯರ ಹೊಣೆಗಾರಿಕೆ ಸೀಮಿತವಾಗಿರುತ್ತದೆ. ಸದಸ್ಯರು ಉಳಿತಾಯ ಮಾಡುವ ಅಭ್ಯಾಸ ಮಾಡಿಕೊಳ್ಳುತ್ತಾರೆ. ಇದು ಬಂಡವಾಳ ಶಾಹಿ ಮತ್ತು ಸಮಾಜ ಶಾಹಿ ಪದ್ಧತಿಗಳ ಮಧ್ಯೆ ಉತ್ತಮ ವ್ಯವಸ್ಥೆಯಾಗಿದೆ.

- ಆರ್. ಜಯನಾಯಕ್, ಸಹಶಿಕ್ಷಕರು,

ಸಂಪಾಜೆ ಸಂಯುಕ್ತ ಪದವಿಪೂರ್ವ ಕಾಲೇಜು.

ಮೊ.೮೨೭೭೨೩೬೦೭೫, ರಿಚಿಥಿಚಿಟಿಚಿiಞ೮೨೭೭@gmಚಿiಟ.ಛಿom