ಮಡಿಕೇರಿ, ಮೇ ೨೬: ಅರೆಭಾಷೆ ಗೌಡ ಕುಟುಂಬಗಳ ನಡುವಿನ ೭ನೇ ವರ್ಷದ ಫುಟ್ಬಾಲ್ ಪಂದ್ಯಾಟದಲ್ಲಿ ಮುಕ್ಕಾಟಿ ತಂಡ ಜಯಗಳಿಸುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಪ್ರಬಲ ಪೈಪೋಟಿ ನೀಡಿದ ಬೊಳ್ಳೂರು ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ಮರಗೋಡು ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಫೈನಲ್ ಪಂದ್ಯಾಟ ನಡೆಯಿತು. ತಾ. ೧೮ ರಿಂದ ಆರಂಭಗೊAಡಿದ್ದ ಲೀಗ್ ಮಾದರಿಯ ಪಂದ್ಯಾಟದಲ್ಲಿ ಹಲವು ಗೌಡ ಮನೆತನಗಳು ಭಾಗವಹಿಸಿದ್ದವು.

ಸೆಮಿಫೈನಲ್ ಫಲಿತಾಂಶ

ಶನಿವಾರ ನಡೆದ ‘ಕ್ವಾಲಿಫೈರ್’ ಪಂದ್ಯಾಟದಲ್ಲಿ ಗೆಲುವು ಸಾಧಿಸಿ ಮುಕ್ಕಾಟಿ-ಕೊಳಂಬೆ ಹಾಗೂ ಮರದಾಳು-ಬೊಳ್ಳೂರು ತಂಡಗಳು ಉಪಾಂತ್ಯ (ಸೆಮಿಫೈನಲ್) ಪ್ರವೇಶಿಸಿದ್ದವು.

ಮೊದಲ ಪಂದ್ಯ ಮುಕ್ಕಾಟಿ ಹಾಗೂ ಕೊಳಂಬೆ ತಂಡಗಳ ನಡುವೆ ನಡೆಯಿತು. ಈ ಪಂದ್ಯಾವಳಿಯಲ್ಲಿ ೨-೧ ಗೋಲುಗಳ ಅಂತರದಲ್ಲಿ ಮುಕ್ಕಾಟಿ ಗೆಲುವು ಸಾಧಿಸಿ ಫೈನಲ್ ಪಂದ್ಯಾಟಕ್ಕೆ ಅರ್ಹತೆ ಗಳಿಸಿಕೊಂಡಿತು. ಕೊಳಂಬೆ ಪರ ಗಿರೀಶ್ ಏಕೈಕ ಗೋಲು ದಾಖಲಿಸಿದರು. ಮುಕ್ಕಾಟಿ ಪರ ತರುಣ್ ಹಾಗೂ ಮೋನಿಶ್ ತಲಾ ೧ ಗೋಲುಗಳ ನೆರವಿನಿಂದ ಮುಕ್ಕಾಟಿ ಫೈನಲ್‌ಗೆ ಪ್ರವೇಶ ಪಡೆಯಿತು.

ಎರಡನೇ ಸೆಮಿಫೈನಲ್ ಪಂದ್ಯ ಮರದಾಳು ಹಾಗೂ ಬೊಳ್ಳೂರು ತಂಡಗಳ ನಡುವೆ ನಡೆಯಿತು. ನಿಗದಿತ ಅವಧಿಯಲ್ಲಿ ಯಾವ ತಂಡವು ಗೋಲು ಭಾರಿಸದ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ಹಿನ್ನೆಲೆ ಟೈಬ್ರೇಕರ್ ಮೊರೆ ಹೋಗಲಾಯಿತು. ಇದರಲ್ಲಿ ಬೊಳ್ಳೂರು ತಂಡ ಗೆದ್ದು ಅಂತಿಮ ಪಂದ್ಯಾಟಕ್ಕೆ ಪ್ರವೇಶ ಗೊಂಡಿತು. ಸೆಮಿಫೈನಲ್ ನಲ್ಲಿ ಸೋತ ಮರದಾಳು ಮೂರನೇ ಸ್ಥಾನವನ್ನು, ಕೊಳಂಬೆ ನಾಲ್ಕನೇ ಸ್ಥಾನವನ್ನು ಪಡೆಯಿತು.

ಫೈನಲ್‌ನಲ್ಲಿ ಪ್ರಬಲ ಪೈಪೋಟಿ

ಸೆಮಿಫೈನಲ್‌ನಲ್ಲಿ ಗೆದ್ದು ಫೈನಲ್ ಸೆಣಸಾಟಕ್ಕೆ ಅರ್ಹತೆಗಳಿಸಿಕೊಂಡ ಬೊಳ್ಳೂರು ಹಾಗೂ ಮುಕ್ಕಾಟಿ ತಂಡಗಳು ಪ್ರಬಲ ಪೈಪೋಟಿ ನೀಡಿದವು. ನಿಗದಿತ ಸಮಯದಲ್ಲಿ ಬೊಳ್ಳೂರು ಪರ ಮೋನಿಶ್ ಹಾಗೂ ಗಗನ್ ತಲಾ ೧ ಗೋಲು ದಾಖಲಿಸಿದರೆ, ಮುಕ್ಕಾಟಿ ತಂಡದ ಪರ ಮೊನೀಶ್ ಹಾಗೂ ಸೋನಾ ತಲಾ ೧ ಗೋಲು ದಾಖಲಿಸಿ ಪಂದ್ಯಾಟ ‘ಡ್ರಾ’ಗೊಂಡಿತು. ನಂತರ ನಡೆದ ಟೈಬ್ರೇಕರ್‌ನಲ್ಲಿ ಮುಕ್ಕಾಟಿ ತಂಡ ಬೊಳ್ಳೂರು ಅನ್ನು ಸೋಲಿಸಿ ಚಾಂಪಿಯನ್ ಪಟ್ಟ ಮುಡಿಗೇರಿಸಿ ಕೊಂಡಿತು.

ಯೂನಿಟಿ ಕಪ್

ಮರಗೋಡು ವ್ಯಾಪ್ತಿಯ ೩ ಗ್ರಾಮಗಳನ್ನು ಒಳಗೊಂಡ ೩ನೇ ವರ್ಷದ ‘ಯುನಿಟಿ ಕಪ್’ನಲ್ಲಿ ಕಟ್ಟೆಮಾಡು ತಂಡ ಜಯಗಳಿಸಿತು. ಅರೆಕಾಡು ರನ್ನರ್ ಅಪ್ ಸ್ಥಾನ ತನ್ನದಾಗಿಸಿಕೊಂಡಿತು. ಕಟ್ಟೆಮಾಡು ಪರ ಜೈನೀರ ರೋಶನ್ ಬಾರಿಸಿದ ಏಕೈಕ ಗೋಲಿನ ನೆರವಿನಿಂದ ಕಟ್ಟೆಮಾಡು ಜಯಶೀಲಗೊಂಡಿತು.

ಸಭಾ ಕಾರ್ಯಕ್ರಮ

ಗೌಡ ಫುಟ್ಬಾಲ್ ಅಕಾಡೆಮಿ ಅಧ್ಯಕ್ಷ ಬಡುವಂಡ್ರ ಸುಜಯ್ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಕೆ.ಜಿ. ಬೋಪಯ್ಯ, ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಉದ್ಯಮಿ ಕೇಕಡ ನಂದ, ನಿವೃತ್ತ ಸೇನಾನಿ ಪರಿಚನ ಶಶಿ, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಕಾಂಗೀರ ಸತೀಶ್, ಕುಶಾಲನಗರ ಗೌಡ ಸಮಾಜ ಅಧ್ಯಕ್ಷ ಚಿಲ್ಲನ ಗಣಿ, ರಾಷ್ಷಿçÃಯ ಜೂನಿಯರ್ ಹಾಕಿ ತಂಡದ ಆಟಗಾರ ಕಾಳೇರಮ್ಮನ ರಾಯ್, ಕೃಷಿಕ ಎ.ಎಸ್. ರಾಮಣ್ಣ, ಮರಗೋಡು ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಕೆದಂಬಾಡಿ ಚಂದ್ರಕಲಾ ಭಾಗವಹಿಸಿದ್ದರು.

ಮೊದಲ ಸೆಮಿಫೈನಲ್ ಪಂದ್ಯಾಟವನ್ನು ಬಿಎಸ್‌ಎನ್‌ಎಲ್ ನಿವೃತ್ತ ವ್ಯವಸ್ಥಾಪಕ ಉಳುವಾರನ ಸುಬ್ಬಯ್ಯ, ವಕೀಲ ಮಳ್ಳಂದಿರ ಕೃಷ್ಣರಾಜು, ಹೊಸ್ಕೇರಿ ಗ್ರಾ.ಪಂ. ಉಪಾಧ್ಯಕ್ಷ ಮುಕ್ಕಾಟಿ ಚಿದಂಬರ, ೨ನೇ ಸೆಮಿಫೈನಲ್ ಪಂದ್ಯಾಟವನ್ನು ನೌಕದಳ ನಿವೃತ್ತ ಅಧಿಕಾರಿ ಕೊಂಪುಳಿರ ದಿನೇಶ್, ಕೃಷಿಕ ಉಳುವಾರನ ಸುನಿಲ್, ಯೂನಿಟಿ ಕಪ್ ಅನ್ನು ಉದ್ಯಮಿ ಬಳಪದ ಅಯ್ಯಪ್ಪ, ಕೃಷಿಕ ಬೊಳ್ಳೂರು ಪ್ರಕಾಶ್ ಉದ್ಘಾಟಿಸಿದರು.