ಕೂಡಿಗೆ, ಮೇ ೨೬: ಕೂಡಿಗೆ ಸರಕಾರಿ ಕ್ರೀಡಾ ಪ್ರೌಢಶಾಲೆಯ ಕೊಠಡಿಗಳ ನವೀಕರಣ, ಬಾಲಕ, ಬಾಲಕಿಯರ ವಸತಿ ಗೃಹಗಳ ದುರಸ್ತಿ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಇನ್ನಿತರ ಕಾಮಗಾರಿಗಳನ್ನು ರೂ. ೮೫ ಲಕ್ಷದಲ್ಲಿ ಕೈಗೊಳ್ಳಲಾಗಿದೆ.
ಶಾಲೆಯ ಪ್ರಸ್ತಾವನೆಯ ಆಧಾರದ ಮೇಲೆ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಾಜ್ಯಮಟ್ಟದ ಅಧಿಕಾರಿಗಳ ತಂಡ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಈಗಾಗಲೇ ೩೦ ವರ್ಷಗಳನ್ನು ಪೂರೈಸಿರುವ ಶಾಲೆಯ ದುರಸ್ತಿ ಕಾರ್ಯಕ್ಕೆ ಮುಂದಾಗಿ ಅದಕ್ಕೆ ಬೇಕಾಗುವಷ್ಟು ಕಾಮಗಾರಿಗಳ ಕ್ರಿಯಾ ಯೋಜನೆಯಡಿಯಲ್ಲಿ ರೂ. ೮೫ ಲಕ್ಷ ಬಿಡುಗಡೆಗೊಳಿಸಿದೆ.