ಅಮೇರಿಕಾದ ಟೆಕ್ಸಾಸ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಇತ್ತೀಚೆಗೆ ‘ಕೃತಕ ಬುದ್ಧಿಮತ್ತೆ ತಂತ್ರಜ್ಞಾನ’ ಬಳಸಿ ಮಾನವನ ಮೆದುಳನ್ನೇ ಓದುವ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದಾರೆ.

ಮೂವರು ವಿಜ್ಞಾನಿಗಳು ಫಂಕ್ಷನಲ್ ಮ್ಯಾಗ್ನೆಟಿಕ್ ರೆಸೊನೆನ್ಸ್ ಇಮೇಜಿಂಗ್ (ಎಫ್.ಎಂ.ಆರ್.ಐ.) ಯಂತ್ರ ಬಳಸಿ, ಮೆದುಳಿನ ಚಟುವಟಿಕೆಗಳನ್ನು ೧೬ ಗಂಟೆ ಕಾಲ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೆದುಳಿನ ಚಟುವಟಿಕೆ, ಯೋಚನಾ ಲಹರಿ ಡೀಕೋಡ್ ಮಾಡಿ, ಪಠ್ಯವಾಗಿಸಿ ಆಲೋಚನೆಯ ಸಾರವನ್ನು ದಾಖಲಿಸಿದ್ದಾರೆ!

ಇದೇ ರೀತಿ ಸ್ಯಾನ್‌ಫ್ರಾನ್ಸಿಸ್ಕೊ ಮತ್ತು ಕ್ಯಾಲಿಫೋರ್ನಿಯಾ ವಿಶ್ವ ವಿದ್ಯಾಲಯಗಳ ಸಂಶೋಧನಾ ತಂಡ ಪಾರ್ಶ್ವವಾಯು ಪೀಡಿತರ ಮೆದುಳಿನ ಸಂಕೇತಗಳ ಪತ್ತೆಗೆ ‘ನ್ಯೂರೊಪ್ರೊಸ್ಟೆಟಿಕ್’ ಸಾಧನವನ್ನೂ ಯಶಸ್ವಿಯಾಗಿ ಅಳವಡಿಸಿದ್ದಾರೆ.

ಇದೇ ಮಾದರಿಯಲ್ಲಿ, ನಾವು ಕೇಳುವ ಕ್ಲಿಷ್ಟಕರ ಪ್ರಶ್ನೆಗಳಿಗೆ ಪಠ್ಯಕ್ರಮದಲ್ಲಿ ತಟ್ಟನೆ ನಿರ್ದಿಷ್ಟ ಉತ್ತರ ನೀಡುವ ‘ಚಾಟ್ ಜಿಪಿಟಿ’ ಚಟ್‌ಪಟ್ ಚಾಟ್‌ಬಾಟ್ ಸಾಫ್ಟ್ವೇರ್ ಕೂಡಾ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಆವಿಷ್ಕಾರವೇ.

ಹೀಗೆಯೇ ಸೂರತ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟಿçÃಯ ತಂತ್ರಜ್ಞಾನ ಸಂಸ್ಥೆ ಮತ್ತು ಜರ್ಮನಿಯ ರೆನಿಶ್ ಅನ್ವಯಿಕ ವಿಜ್ಞಾನ ವಿಶ್ವ ವಿದ್ಯಾಲಯದ ಸಂಶೋಧಕರು, ಕೇವಲ ಮಾನವನ ಧ್ವನಿ ತರಂಗಗಳನ್ನು ಆಧರಿಸಿ ಶೀತ ಮತ್ತು ಜ್ವರವನ್ನು ಗುರುತಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ.

ಹೀಗೆ ನಾವು ಎಗ್ಗಿಲ್ಲದೆ ಬಳಸುವ ಸ್ಮಾರ್ಟ್ಫೋನ್ ಮತ್ತು ಸ್ವಯಂಚಾಲಿತ ಕಾರುಗಳು ಕೃತಕ ಬುದ್ಧಿಮತ್ತೆ ತಂತ್ರಜ್ಞಾನಕ್ಕೆ ಉತ್ತಮ ಉದಾಹರಣೆಗಳು. ಮೊಬೈಲ್ ಫೋನ್‌ನಲ್ಲಿ ಧ್ವನಿ ಸಹಾಯಕ ತಂತ್ರಜ್ಞಾನ, ನಿರ್ದಿಷ್ಟ ತಾಣಗಳಿಗೆ ತೆರಳಲು ಗೂಗಲ್ ಮ್ಯಾಪ್ ಮಾರ್ಗದರ್ಶನ, ಫೋನ್‌ನಲ್ಲಿ ಪದಗಳನ್ನು ಟೈಪ್ ಮಾಡಿದಾಗ ಕಾಗುಣಿತ ದೋಷ ಸರಿಪಡಿಸುವ ಪ್ರಕ್ರಿಯೆ, ಇವೆಲ್ಲವೂ ಕೃತಕ ಬುದ್ಧಿಮತ್ತೆ ತಂತ್ರಜ್ಞಾನಕ್ಕೆ ನಿದರ್ಶನವೇ. ಗೂಗಲ್ ಸರ್ಚ್ ಮಾಡಿದಾಗ ಸಂಬAಧಿಸಿದ ಜಾಹೀರಾತು ಪ್ರದರ್ಶನ, ನಾವು ಬ್ರೌಸ್ ಮಾಡುವುದನ್ನು ಆಧರಿಸಿದ ವಿಷಯಗಳಿಗೆ ಸಂಬAಧಿಸಿದ ಇತರ ವಿಷಯಗಳನ್ನೂ ಪ್ರದರ್ಶಿಸುವ ಜಾಲತಾಣಗಳು ಇದೇ ತಂತ್ರಜ್ಞಾನ ಬಳಸುತ್ತವೆ.

ಹೀಗೆ ಮಾನವನ ಬುದ್ಧಿಶಕ್ತಿಯಿಂದಲೇ ಜನ್ಮತಳೆದ ಕೃತಕ ಬುದ್ಧಿಮತ್ತೆ (ಂಡಿಣiಜಿiಛಿiಚಿಟ Iಟಿಣeಟಟigeಟಿಛಿe) ತಂತ್ರಜ್ಞಾನ ನಮ್ಮ ಬುದ್ಧಿಶಕ್ತಿಯನ್ನು ಮೀರಿಸುವ ಹಂತಕ್ಕೆ ಬೆಳೆಯಲಾರಂಭಿಸಿ, ನಮ್ಮ ಸಾಮರ್ಥ್ಯಕ್ಕೆ ಸವಾಲೆಸೆಯುತ್ತಿದೆ.

ಚದುರಂಗದ ಆಟ (ಚೆಸ್) ಮಾನವನ ಬುದ್ಧಿಮತ್ತೆ ಸಾಮರ್ಥ್ಯದ ಅಳತೆಗೋಲು. ವಿಶ್ವ ಚೆಸ್ ಚಾಂಪಿಯನ್ ರಷ್ಯಾದ ಗ್ಯಾರಿ ಕಾಸ್ಪೆರೊವ್ ಐಬಿಎಂ ಅಭಿವೃದ್ಧಿಪಡಿಸಿದ ‘ಡೀಪ್ ಬ್ಲೂ’ ಸೂಪರ್ ಕಂಪ್ಯೂಟರ್ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ವಿರುದ್ಧ ಪಂದ್ಯದಲ್ಲಿ ಸೆಣಸಿ ಸೋಲು ಅನುಭವಿಸಿದಾಗ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಶಕ್ತಿ ವಿಶ್ವಕ್ಕೆ ಪರಿಚಯವಾಯಿತು.

ಈಗ ಕ್ರಿಕೆಟ್‌ನಲ್ಲೂ ಪ್ರತಿಯೊಬ್ಬ ಆಟಗಾರನ ಶಕ್ತಿ ಮತ್ತು ದೌರ್ಬಲ್ಯದ ವಿವರ ಡಿಜಿಟಲ್ ದತ್ತಾಂಶದಲ್ಲಿ ಲಭ್ಯವಿರುವುದರಿಂದ, ಆಟಗಾರರು ಇದನ್ನು ಸಕಾಲದಲ್ಲಿ ಬಳಸಿಕೊಳ್ಳುತ್ತಾರೆ. ಹೀಗೆ ಆಧುನಿಕ ಕ್ರಿಕೆಟ್‌ನಲ್ಲಿ ಸವಾಲುಗಳನ್ನು ಮೆಟ್ಟಿ ನಿಲ್ಲುವುದು ಆಟಗಾರರ ಚಾಣಾಕ್ಷತೆಯನ್ನು ಒರೆಗೆ ಹಚ್ಚುತ್ತದೆ.

ಈಗ ವಿಶ್ವದಾದ್ಯಂತ ಆಯಾ ದೇಶಗಳ ರಕ್ಷಣಾ ಉದ್ಯಮಗಳು, ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ತಮ್ಮ ಸಮರ ತಂತ್ರಗಳಿಗೆ ಬಳಸಲು ಮುಂದಾಗಿವೆ. ಭಾರತ ಮತ್ತು ಅಮೇರಿಕಾ ಜಂಟಿ ಸೈಬರ್ ತರಬೇತಿ ಮತ್ತು ಚಟುವಟಿಕೆ ವಿಸ್ತರಿಸಿ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಸಂವಾದ ಆರಂಭಿಸಲು ಒಪ್ಪಿಕೊಂಡಿವೆ. ಇರಾಕ್, ಅಪ್ಫಾನಿಸ್ತಾನ, ಸಿರಿಯಾ ಯುದ್ಧ ಭೂಮಿಗಳಲ್ಲಿ ಗುಪ್ತಚರ ಮಾಹಿತಿ, ವಿಶ್ಲೇಷಣೆ, ಯುದ್ಧ ಸಾಮಗ್ರಿ ಸಾಗಾಣಿಕೆ, ಕಾರ್ಯಾಚರಣೆ, ಆದೇಶ, ನಿಯಂತ್ರಣಗಳಿಗೂ ಈ ತಂತ್ರಜ್ಞಾನ ಬಳಕೆಯಾಗಿದೆ.

‘ಸಮರ ತಂತ್ರ, ತರಬೇತಿ ವಿಧಾನ ಸೆನ್ಸರ್ ಒಗ್ಗೂಡಿಸುವಿಕೆ,ಸ್ವಾಯತ್ತ ಆಯುಧಗಳ ಬಳಕೆ, ತ್ವರಿತ ನಿರ್ಧಾರ, ಸನ್ನಿವೇಶದ ಬಗ್ಗೆ ಸುಧಾರಿತ ಅರಿವು, ಹೀಗೆ ಪ್ರಪಂಚದಾದ್ಯAತ ಎಲ್ಲ ಮಿಲಿಟರಿಗಳಿಗೂ ಇದು ಸವಾಲಾಗಿ ಉಳಿದಿದೆ.

ಈ ನಿಟ್ಟಿನಲ್ಲಿ ಪರಿಹಾರ ಕಾರ್ಯ ಪ್ರಗತಿಯಲ್ಲಿ ಎನ್ನುವುದು ಭಾರತ ಸೇನೆಯ ನಿಕಟಪೂರ್ವ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರ್ವಾಣೆ ಅವರ ಸ್ಪಷ್ಟ ನುಡಿಗಳು.

ದ್ವಿತೀಯ ವಿಶ್ವ ಮಹಾಯುದ್ಧ ಸಂದರ್ಭದಲ್ಲಿ ಜರ್ಮನಿಯ ನಾಜಿಗಳು ತಮ್ಮ ಮಿತ್ರಪಡೆಗಳಿಗೆ ಕಳುಹಿಸುತ್ತಿದ್ದ ಗುಪ್ತ ಸಂದೇಶಗಳನ್ನು, ಅಲ್ಟಾç ಇಂಟೆಲಿಜೆನ್ಸ್ ತಂತ್ರಜ್ಞಾನದ ಮೂಲಕ ಮತ್ತು ಟೆಲಿಪ್ರಿಂಟರ್ ಸಂವಹನದಲ್ಲಿ ಭೇದಿಸಿದ ಮಹಾಮೇಧಾವಿ ಅಲೆನ್ ಮ್ಯಾಥಿಸನ್ ಟ್ಯೂರಿಂಗ್, ಬ್ರಿಟನ್ ಮಿಶ್ರ ಪಡೆಗಳ ಗೆಲುವಿನ ರೂವಾರಿಯಾದರು.

ಇಂಗ್ಲೆAಡಿನ ಕಂಪ್ಯೂಟರ್ ವಿಜ್ಞಾನಿ ಟ್ಯೂರಿಂಗ್ ೧೯೫೦ ರಲ್ಲಿ ‘ಯಂತ್ರಗಳೂ ಆಲೋಚಿಸಬಲ್ಲವೆ?’ ಎಂಬ ಪ್ರಶ್ನೆ ಮುಂದಟ್ಟಿದ್ದರು. ಇದುವೇ ಕೃತಕ ಬುದ್ಧಿಮತ್ತೆಯ ಜೀವಾಳವಾಯಿತು. ಈ ಪ್ರಶ್ನೆಗೆ ‘ಹೌದು’ ಎಂಬ ಉತ್ತರ ಸ್ಪಷ್ಟವಾಗಿದೆ. ೧೯೫೬ ರಲ್ಲಿ ಜಾನ್‌ಮೆಕ್ ಕಾರ್ತಿ ಎನ್ನುವ ವಿಜ್ಞಾನಿ, ಎಲ್‌ಐಎಸ್‌ಪಿ ಎಂಬ ಪ್ರೋಗ್ರಾಮಿಂಗ್ ಲಾಂಗ್ವೇಜ್ ಅಭಿವೃದ್ಧಿ ಪಡಿಸಿ, ಅದಕ್ಕೆ ‘ಆರ್ಟಿಫಿಶಿಯಲ್ ಇಂಟೆಲಿಜೆನ್ಸ್’ ಎಂದು ಹೆಸರಿಸಿದರು.

ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಎಂದರೆ, ಆಯಾ ಪರಿಸ್ಥಿತಿಗೆ ಅನುಗುಣವಾಗಿ ತಾನೇ ನಿರ್ಣಯಗಳನ್ನು ತೆಗೆದುಕೊಳ್ಳುವ ಪ್ರೋಗ್ರಾಮ್. ಇದು ಅನೇಕ ಆಯಾಮಗಳನ್ನು ಒಳಗೊಂಡ ಕಂಪ್ಯೂಟರ್ ವಿಜ್ಞಾನ. ಈ ತಂತ್ರಜ್ಞಾನ ನವನವೀನ ಆವಿಷ್ಕಾರ ಆಗುತ್ತಿರುವ ಯಂತ್ರದ ಕಲಿಕೆ (ಒಚಿಛಿhiಟಿe ಐeಚಿಡಿಟಿiಟಿg) ಮತ್ತು ಆಳವಾದ ಕಲಿಕೆ (ಆeeಠಿ ಐeಚಿಡಿಟಿiಟಿg) ಶಾಖೆಗಳ ಸುಧಾರಿತ, ಸಂಯೋಜಿತ ಫಲ. ಯಂತ್ರ ನಿರ್ಮಾಣ ಜೊತೆಗೆ ಯಂತ್ರಗಳ ಸ್ವಯಂ ಜ್ಞಾನ ವೃದ್ಧಿಸುವ ಪ್ರಯತ್ನ, ತಂತ್ರಜ್ಞಾನದ ಪರಾಕಾಷ್ಠೆ ತಲುಪಿ, ಮಾನವನ ಮೆದುಳಿಗೆ ಕೆಲಸವಿಲ್ಲದಂತೆ ಮೂಲೆಗುಂಪು ಮಾಡುವ ಅಪಾಯ ಗೋಚರಿಸತೊಡಗಿದೆ.

ಕಂಪ್ಯೂಟರ್ ಮೂಲಕದ ನಿಯಂತ್ರಣದೊAದಿಗೆ, ರೋಬೋಗಳಿಗೆ ಮಾನವರು ಮಾಡುವ ಕಾರ್ಯಗಳನ್ನು ನಿರ್ವಹಿಸಲು ಪ್ರೇರೇಪಿಸುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಇನ್ನೊಂದು ದಶಕದಲ್ಲಿ ಮಾನವನ ಬುದ್ಧಿಶಕ್ತಿ ಸಾಮರ್ಥ್ಯವನ್ನು ಮೀರಿಸಬಹುದು.

ಸ್ವಯಂ ಚಾಲಿತ ವಾಹನ, ಯಂತ್ರ, ಚಾಟ್‌ಬೋಟ್ಸ್, ಪರ್ಸನಲ್ ಡಿಜಿಟಲ್ ಅಸಿಸ್ಟೆಂಟ್... ಹೀಗೆ ವಿಜ್ಞಾನ, ವಾಣಿಜ್ಯ, ವೈದ್ಯ, ಸೇನೆ, ಸೇವಾ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆಯ ಕಬಂಧ ಬಾಹುಗಳು ವಿಸ್ತರಿಸಿವೆ.

‘ಕೃತಕ ಬುದ್ಧಿಮತ್ತೆ ಮನುಕುಲವನ್ನೇ ಕೊನೆಗೊಳಿಸಬಹುದಾದ ಪರಿಕಲ್ಪನೆ’ ಎಂದು ವಿಜ್ಞಾನಿ ಸ್ಟೀಫನ್ ಹಾಕಿಂಗ್ ವಿಶ್ಲೇಷಿಸಿದರೆ, ‘ಇದು ಕಾಳಜಿ ವಹಿಸಬೇಕಾದ ವಿಚಾರ’ ಎಂದು ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್‌ಗೇಟ್ಸ್ ಅಭಿಪ್ರಾಯಪಟ್ಟಿದ್ದಾರೆ.

‘ಇದು ಮನುಕುಲ ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೆ ಅಂತಿಮ ಪರಿಹಾರ’ ಎನ್ನುವುದು ಗೂಗಲ್ ಡೀಪ್ ಮೈಂಡ್‌ನ ಸಂಸ್ಥಾಪಕ ಡೆಮಿನ್ ಹಸಾಬಿಸ್ ಪ್ರತಿಪಾದನೆ. ಇವು ಒತ್ತಟ್ಟಿಗಿರಲಿ. ಮಾನವನೇ ನಿರ್ಮಿಸಿದ ಯಂತ್ರಗಳು ಸ್ವಯಂ ನಿರ್ಣಯ ಕೈಗೊಳ್ಳುವುದರಿಂದ, ಈ ತಂತ್ರಜ್ಞಾನ ಮಾನವನ ನಿರ್ನಾಮಕ್ಕೆ ಕಾರಣವಾಗಿಬಿಡುವುದೋ ಎಂಬ ಆತಂಕ ತಪ್ಪಿದಲ್ಲ!

(ಸಂಗ್ರಹ)

ಕಲ್‌ಮಾಡಂಡ ದಿನೇಶ್ ಕಾರ್ಯಪ್ಪ,

ಮಡಿಕೇರಿ.

ಮೊ. ೯೮೪೫೪೯೯೧೧೨.