ಕುಶಾಲನಗರ, ಮೇ ೨೬: ಜೆಸಿಐ ಕುಶಾಲನಗರ ಕಾವೇರಿ ವತಿಯಿಂದ ಅಳಿಲು ಸೇವಾ ಟ್ರಸ್ಟ್ ಸಹಯೋಗ ದೊಂದಿಗೆ ಮನೆಗೊಂದು ಗಿಡ ಊರಿಗೊಂದು ವನ ಎಂಬ ಎಂಬ ಶೀರ್ಷಿಕೆಯೊಂದಿಗೆ ಗಿಡ ನೆಡುವ ಕಾರ್ಯಕ್ರಮಕ್ಕೆ ತಾ. ೨೫ ರಂದು ಕುಶಾಲನಗರ ಜೆಸಿಐ ಅಧ್ಯಕ್ಷ ಜಗದೀಶ್ ಬಿ. ಚಾಲನೆ ನೀಡಿದರು.

ಒಂದು ತಿಂಗಳ ಕಾಲ ನಡೆಯಲಿರುವ ಈ ಅಭಿಯಾನಕ್ಕೆ ಸಾಂಕೇತಿಕವಾಗಿ ಕುಶಾಲನಗರ ರಾಧಾಕೃಷ್ಣ ಬಡಾವಣೆಯಲ್ಲಿ ಸಾರ್ವಜನಿಕರಿಗೆ ಗಿಡ ವಿತರಿಸುವ ಮೂಲಕ ಚಾಲನೆ ನೀಡಲಾಯಿತು.

ಒಂದು ತಿಂಗಳ ಈ ಕಾರ್ಯಕ್ರಮ ದಲ್ಲಿ ಸಾವಿರಕ್ಕೂ ಅಧಿಕ ಉಪಯುಕ್ತ ಗಿಡಗಳನ್ನು ಕುಶಾಲನಗರದ ಸುತ್ತಮುತ್ತ ಬಡಾವಣೆಗಳಿಗೆ, ಶಾಲಾ ಕಾಲೇಜುಗಳ ಹತ್ತಿರ, ಸಾರ್ವಜನಿಕ ರಸ್ತೆ ಬದಿಗಳಲ್ಲಿ ನೆಡುವುದು ಹಾಗೂ ಇದರ ಬಗ್ಗೆ ಆಸಕ್ತಿ ಇರುವ ಪ್ರತಿಯೊಬ್ಬರಿಗೂ ಗಿಡ ನೀಡುವುದು ಹಾಗೂ ಜೊತೆಗೆ ಟ್ರೀ ಗಾರ್ಡ್ ಅಳವಡಿಸುವುದಾಗಲಿ, ಬೇಸಿಗೆ ಅವಧಿಯಲ್ಲಿ ಗಿಡಕ್ಕೆ ನೀರೆರೆಯುವುದರ ಜೊತೆಗೆ ನಿರ್ವಹಣೆ ಮಾಡುವುದು ಅಭಿಯಾನದ ಮೂಲ ಉದ್ದೇಶ ಎಂದು ಕಾರ್ಯಕ್ರಮ ಆಯೋಜಕರು ತಿಳಿಸಿದ್ದಾರೆ.

ಕಾರ್ಯಕ್ರಮಕ್ಕೆ ಜೆಸಿಐನ ಪದಾಧಿಕಾರಿಗಳು ಹಾಗೂ ಟ್ರಸ್ಟ್ನ ನಿರ್ದೇಶಕರುಗಳು ಪೂರ್ಣ ಪ್ರಮಾಣದ ಸಹಕಾರ ನೀಡುವುದಾಗಿ ಕುಶಾಲನಗರ ಕಾವೇರಿ ಜೆಸಿಐನ ಅಧ್ಯಕ್ಷ ಜಗದೀಶ್ ಬಿ. ತಿಳಿಸಿದರು. ಟ್ರಸ್ಟ್ನ ಅಧ್ಯಕ್ಷ ಕೆ.ಜಿ. ಮನು ಮಾತನಾಡಿ, ಒಂದು ವರ್ಷ ಗಿಡವನ್ನು ಪೋಷಿಸಿ ಚೆನ್ನಾಗಿ ಬೆಳೆಸಿದಂತವರಿಗೆ ಆಕರ್ಷಕ ಬಹುಮಾನ ಮತ್ತು ಪ್ರೋತ್ಸಾಹ ನೀಡಲಾಗುವುದು ಎಂದು ತಿಳಿಸಿದರು.

ಪ್ರಮುಖರಾದ ರಂಗಸ್ವಾಮಿ, ನಾಗೇಗೌಡ, ರಾಜೇಂದ್ರ, ಪ್ರವೀಣ್, ಪ್ರಶಾಂತ್, ಪುನೀತ್, ರಜನಿಕಾಂತ್, ತೇಜ ದಿನೇಶ್ ಹಾಗೂ ಟ್ರಸ್ಟ್ನ ನಿರ್ದೇಶಕರುಗಳಾದ ಶಿವಾಜಿ ರಾವ್, ದಿನೇಶ್ ನಿಡ್ಯಮಲೆ, ಸಂಗೀತ ದಿನೇಶ್, ಚಂದ್ರಶೇಖರ್ ಸುಮನ್ ಮತ್ತಿತರರು ಇದ್ದರು.