ಮಡಿಕೇರಿ, ಮೇ ೨೭: ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಕೊಡಮಾಡುವ ವಾರ್ಷಿಕ ಪ್ರಶಸ್ತಿಗೆ ಮೂವರು ಪತ್ರಕರ್ತರು ಭಾಜನರಾಗಿದ್ದಾರೆ.
ಹಿರಿಯ ಪತ್ರಕರ್ತ ಕೆ.ಬಿ. ಮಹಂತೇಶ್ ಅವರ ಸ್ಮರಣಾರ್ಥ ಕೊಡಗು ಪ್ರೆಸ್ ಕ್ಲಬ್ ವತಿಯಿಂದ ನೀಡುವ ಅತ್ಯುತ್ತಮ ಪರಿಣಾಮಕಾರಿ ವರದಿ ಪ್ರಶಸ್ತಿಗೆ ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ ‘ಏಜೆಂಟರ ಮೋಸಕ್ಕೆ ಬಲಿಯಾಗಿ ವಿದೇಶದಲ್ಲಿ ಸಿಲುಕಿದ ಮಹಿಳೆ' ಎಂಬ ವರದಿಗೆ ಸಿದ್ದಾಪುರದ ವರದಿಗಾರ ಎ.ಎನ್. ವಾಸು ಪಡೆದುಕೊಂಡಿದ್ದಾರೆ.
ಕೋವರ್ ಕೊಲ್ಲಿ ಇಂದ್ರೇಶ್ ಮತ್ತು ಕುಟುಂಬ ವರ್ಗ ತಮ್ಮ ತಂದೆ ಬಿ.ವಿ ಚಂದ್ರಶೇಖರ್ ಹಾಗೂ ತಾಯಿ ಪುಷ್ಪಲತಾ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಮಾನವೀಯ ವರದಿ ಪ್ರಶಸ್ತಿಗೆ ಸ್ಟಾರ್ ಆಫ್ ಮೈಸೂರು ಪತ್ರಿಕೆಯಲ್ಲಿ ಪ್ರಕಟವಾದ 'ಆಚಿಡಿeಜeviಟ ಚಿಛಿಣ bಥಿ ಞoಜಚಿgu boಡಿಟಿ veಣ sಚಿves ಟeoಠಿಚಿಡಿಜ iಟಿ mಚಿಟಿgಚಿಟuಡಿu' ಎಂಬ ವರದಿಗೆ ಪಿ.ವಿ. ಅಕ್ಷಯ್ ಪಡೆದುಕೊಂಡಿದ್ದಾರೆ.
ಎಂ.ಎನ್. ಚಂದ್ರಮೋಹನ್ ಅವರು ತಮ್ಮ ತಂದೆ ಎಂ.ನಾರಾಯಣ ಹಾಗೂ ತಾಯಿ ಎನ್. ಪದ್ಮಾವತಿ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಪರಿಸರ ವರದಿ ಪ್ರಶಸ್ತಿಗೆ ಟಿ.ವಿ. ೯ ವಾಹಿನಿಯಲ್ಲಿ ಪ್ರಕಟವಾದ ಮಡಿಕೇರಿಯಲ್ಲಿ ಮರಗಳ ಮಾರಣ ಹೋಮ ಎಂಬ ವರದಿಗೆ ಐಮಂಡ ಗೋಪಾಲ್ ಸೋಮಯ್ಯ ಪಡೆದುಕೊಂಡಿದ್ದಾರೆ.
ಮೂರು ಪ್ರಶಸ್ತಿಯು ತಲಾ ೫ ಸಾವಿರ ರೂಪಾಯಿ ನಗದು ಹಾಗೂ ಫಲಕ ಒಳಗೊಂಡಿದೆ. ಜೂನ್ ೨ ರಂದು ಮಧ್ಯಾಹ್ನ ೧೨ ಗಂಟೆಗೆ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಪ್ರೆಸ್‌ಕ್ಲಬ್ ಪ್ರಧಾನ ಕಾರ್ಯದರ್ಶಿ ರೆಜಿತ್ ಕುಮಾರ್ ಗುಹ್ಯ ತಿಳಿಸಿದ್ದಾರೆ.