ಮಡಿಕೇರಿ, ಮೇ.೨೮: ಕೊಡಗು ಜಿಲ್ಲೆಯಲ್ಲಿ ೨೦೨೩-೨೪ ನೇ ಸಾಲಿನ ಬರ ಪರಿಹಾರಕ್ಕೆ ಸಂಬAಧಿಸಿದAತೆ ಫ್ರೂಟ್ಸ್ ಐಡಿ ಮುಖಾಂತರ ಫೇಸ್-೧ ರಿಂದ ಫೇಸ್-೯ ಹಂತದವರೆಗೆ ಒಟ್ಟು ೧೧,೯೩೫ ಫಲಾನುಭವಿ ರೈತರಿಗೆ ರೂ.೧೯೧.೪೨ ಲಕ್ಷ ಬೆಳೆ ಪರಿಹಾರ ಪಾವತಿಯಾಗಿದೆ.

ಫೇಸ್-೧ ರಿಂದ ಫೇಸ್-೯ ನೇ ಹಂತದವರೆಗೆ ಪ್ರತಿ ಫಲಾನುಭವಿಗೆ ಕನಿಷ್ಟ ಬೆಳೆ ಪರಿಹಾರ ಮೊತ್ತ ರೂ. ೧,೦೦೦ ಹಾಗೂ ಗರಿಷ್ಠ ಮೊತ್ತ ರೂ. ೨,೦೦೦ ಗಳಾಗಿರುತ್ತದೆ. ಫೇಸ್-೧೦ ರಲ್ಲಿ ೫೩೬೫ ಫಲಾನುಭವಿ ರೈತರಿಗೆ ರೂ.೨೮೩.೬೬ ಲಕ್ಷ ಬೆಳೆ ಪರಿಹಾರ ಪಾವತಿಯಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದ್ದಾರೆ.