ಮಡಿಕೇರಿ, ಮೇ ೨೭: ಕುಶಾಲನಗರದ ಅರಣ್ಯ ಇಲಾಖೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುವ ವಿ.ಕೆ. ವಿನೋದ್ ಕುಮಾರ್ ಮತ್ತು ಕುಶಾಲನಗರದ ಆರ್.ಕೆ. ಲೇಔಟ್ನ ನಿವಾಸಿ ಐಟಿ ಉದ್ಯೋಗಿ ಸಂದೀಪ್ ಸಿ.ಹೆಚ್. ಅವರು ಸೇರಿ ಜಂಟಿಯಾಗಿ, Sಚಿve ಏoಜಚಿgu, ಓಂಖಿUಖಇ ಅUP-೨೦೨೪ ಎನ್ನುವ ಶೀರ್ಷಿಕೆಯಲ್ಲಿ ಶಟಲ್ ಬ್ಯಾಡ್ಮಿಂಟನ್ ಲೀಗ್ ಪಂದ್ಯಾವಳಿ ಯನ್ನು ಜಂಪ್ ಸ್ಮಾö್ಯಶ್ ಬ್ಯಾಡ್ ಮಿಂಟನ್ ಅಕಾಡೆಮಿಯಲ್ಲಿ ಆಯೋಜಿಸಿದ್ದರು.
ಒಟ್ಟು ೭ ವಿವಿಧ ತಂಡಗಳು ಭಾಗವಹಿಸಿದ್ದು, ಒಟ್ಟು ೮೬ ಆಟಗಾರರು ಭಾಗವಹಿಸಿದ್ದರು. ಕುಶಾಲನಗರ, ವೀರಾಜಪೇಟೆ ಮತ್ತು ಮಡಿಕೇರಿ ತಾಲೂಕಿನಿಂದ ಆಯ್ದ ಆಟಗಾರರನ್ನು ಐಕಾನ್ ಆಟಗಾರರಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಮಡಿಕೇರಿ ಯವರಾದ, ಭಾರತವನ್ನು ಶಟಲ್ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಅಂತರರಾಷ್ಟಿçÃಯ ಮಟ್ಟದಲ್ಲಿ ಪ್ರತಿನಿಧಿಸಿ ಹಲವಾರು ರಾಷ್ಟç ಮತ್ತು ಅಂತರರಾಷ್ಟಿçÃಯ ಪ್ರಶಸ್ತಿ ಪದಕಗಳನ್ನು ಪಡೆದಂತಹ ಶಟಲ್ ಬ್ಯಾಡ್ ಮಿಂಟನ್ ಆಟಗಾರ್ತಿ ಮತ್ತು ಕೋಚ್ ಜ್ಯೋತಿ ಸೋಮಯ್ಯ, ಕುಶಾಲನಗರ ಬ್ಯಾಡ್ಮಿಂಟನ್ ಕೋಚ್ ಶ್ರೀ ಪ್ರಶಾಂತ್ಮಯ್ಯ ಮತ್ತು ಜಂಪ್ ಸ್ಮಾö್ಯಶ್ ಬ್ಯಾಡ್ಮಿಂಟನ್ ಅಕಾಡೆಮಿಯ ಸ್ಥಾಪಕ ಮತ್ತು ಮಾಲೀಕ ಶರತ್ ಕ್ರೀಡಾಕೂಟವನ್ನು ಉದ್ಘಾಟಿಸಿದರು.
ಬ್ಯಾಡ್ಮಿಂಟನ್ ಕೋರ್ಟ್ನಲ್ಲಿ ಆಯೋಜಕ ವಿ.ಕೆ. ವಿನೋದ್ ಕುಮಾರ್ ಅವರು ತೆಗೆದ ಹಕ್ಕಿಗಳ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಿದ್ದು ಆಟಗಾರರು ವಿವಿಧ ಹಕ್ಕಿಗಳ ಚಿತ್ರಗಳನ್ನು ನೋಡಿ ಖುಷಿಪಟ್ಟರು. ೨ ದಿನಗಳ ಕಾಲ ನಡೆದ ಕ್ರೀಡಾ ಕೂಟ ಭಾನುವಾರ ರಾತ್ರಿ ಮುಕ್ತಾಯವಾಯಿತು.
ಆಯುಧಿ ತಂಡ ಚಾಂಪಿಯನ್ ಆಗಿ, ಆಕರ್ಷಕ ಫಲಕ ಮತ್ತು ೫೦೦೦೦/- ನಗದು ಬಹುಮಾನ, ಕಾವೇರಿ ರೈಡರ್ಸ್ ತಂಡ ೨ನೇ ಸ್ಥಾನಕ್ಕೆ ಆಕರ್ಷಕ ಫಲಕ ಮತ್ತು ೩೦೦೦೦/- ನಗದು ಬಹುಮಾನ ಮತ್ತು ಗೋಲ್ಡನ್ ರಾಕೆಟ್ ತಂಡ ಮೂರನೇ ಸ್ಥಾನಕ್ಕೆ ಆಕರ್ಷಕ ಫಲಕ ಮತ್ತು ೨೦೦೦೦/- ನಗದು ಬಹುಮಾನ ಪಡೆದುಕೊಂಡರು.
೭ ತಂಡದ ಮಾಲೀಕರಿಗೆ ಮತ್ತು ಅತಿಥಿಗಳಿಗೆ ನೆನಪಿನ ಕಾಣಿಕೆ ಮತ್ತು ಹೊಂಗೆ ಗಿಡವನ್ನು ಕೊಟ್ಟು ಗೌರವಿಸುವುದರ ಮೂಲಕ ಪರಿಸರ ಪ್ರೀತಿಯನ್ನು ತೋರಲಾಯಿತು.