ಪೊನ್ನಂಪೇಟೆ, ಮೇ ೨೭: ಧಾರ್ಮಿಕ ಉತ್ಸವಗಳು ಮತ್ತು ಆಚರಣೆಗಳು ಆಯಾ ಊರಿನ ಮತ್ತು ಮಹಲಿನ ಒಂದು ಪ್ರಮುಖ ಪರಂಪರೆಯಾಗಿದೆ. ಸಾಮಾನ್ಯವಾಗಿ ಸಾರ್ವಜನಿಕರ ಒಂದುಗೂಡುವಿಕೆಯ ಉದ್ದೇಶಕ್ಕಾಗಿ ಕೊಡಗಿನ ಹಲವೆಡೆ ನಡೆಯುವ ಉರೂಸ್‌ಗಳು ಸಮಾಜದಲ್ಲಿ ಕೋಮು ಸಾಮರಸ್ಯ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ಹಾಜಿ ಹೇಳಿದರು.
ಬೇಟೋಳಿ ಗ್ರಾಮದ ಚಿಟ್ಟಡೆ ಮೊಹಿದ್ದೀನ್ ಜುಮಾ ಮಸೀದಿಯ ಆಶ್ರಯದಲ್ಲಿ ಸೋಮವಾರದಂದು ನಡೆದ ಚಿಟ್ಟಡೆ ಉರೂಸ್‌ನ ಸೌಹಾರ್ದ ಸಮ್ಮೇಳನದಲ್ಲಿ ಪ್ರಧಾನ ಭಾಷಣಗಾರರಾಗಿ ಪಾಲ್ಗೊಂಡು ಮಾತನಾಡಿದ ಅವರು, ಕೊಡಗಿನ ಹಲವೆಡೆ ನಡೆಯುವ ಉರೂಸ್ ಕಾರ್ಯಕ್ರಮಗಳಲ್ಲಿ ಹಿಂದೂ-ಮುಸಲ್ಮಾನ ಸಮುದಾಯವರು ಮತಬೇಧವನ್ನು ಮರೆತು ಒಂದಾಗಿ ಭಾಗವಹಿಸುತ್ತಾರೆ. ಹೀಗಾಗಿ ಹಲವಾರು ಉರೂಸ್‌ಗಳು ಹಿಂದೂ-ಮುಸ್ಲಿA ಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ಜನ ಸಮುದಾಯಗಳ ನಡುವೆ ಭಾವೈಕ್ಯತೆಯನ್ನು ಮೂಡಿಸುವಲ್ಲಿ ಹಾಗೂ ವಿವಿಧ ಕೋಮುಗಳ ನಡುವೆ ಸಾಮರಸ್ಯವನ್ನು ಸಾರುವಲ್ಲಿ ಯಶಸ್ವಿಯಾಗಿವೆ. ಈ ರೀತಿಯ ಆಚರಣೆಗಳೇ ನಿಜವಾದ ಭಾವೈಕ್ಯತೆಯ ಸಂಗಮ. ತಮ್ಮ ಧರ್ಮಗಳನ್ನು ಪಾಲಿಸುತ್ತಾ ಇತರ ಧರ್ಮಗಳನ್ನೂ ಗೌರವದಿಂದ ಕಂಡಾಗ ಮಾತ್ರ ಪ್ರಜಾಪ್ರಭುತ್ವ ಹಾಗೂ ಸಾಮರಸ್ಯ ಉಳಿಯಲು ಸಾಧ್ಯ. ಎಲ್ಲ ಧರ್ಮಗಳು ಶ್ರೇಷ್ಠ ಎಂದು ತಿಳಿದಾಗ ಮಾತ್ರವೇ ಇಲ್ಲಿನ ಧರ್ಮ, ಸಂಪ್ರದಾಯ ಹಾಗೂ ಭಾಷೆಗಳ ಬಗ್ಗೆ ಗೌರವ ಭಾವನೆ ಮೂಡುತ್ತದೆ ಎಂದು ಹೇಳಿದರು.
ವಿವಿಧತೆಯಲ್ಲಿ ಏಕತೆ ಹೊಂದಿದ ನಮ್ಮ ರಾಷ್ಟಿçÃಯ ಭಾವೈಕ್ಯತೆಯು ವಿಶ್ವ ಪರಿವಾರದ ಕಲ್ಪನೆಗೆ ಸಮಾನವಾಗಿದೆ. ಭಾರತ ಬಹುಭಾಷೆ, ಸಂಸ್ಕೃತಿ, ಅನೇಕ ವೇಷಭೂಷಣಗಳಿಂದ ಕೂಡಿದ ದೇಶ. ಬೇರೆ ಬೇರೆ ವರ್ಗಗಳಿಗೆ ಸೇರಿದ ಜನರು ಇಲ್ಲಿ ಒಂದಾಗಿ ಬಾಳುತ್ತಿದ್ದಾರೆ. ರಾಷ್ಟಿçÃಯ ಭಾವೈಕ್ಯತೆಯ ಭಾವನೆಗಳ ಬಗ್ಗೆ ಮುಂದಿನ ಪೀಳಿಗೆಗೆ ಅರಿವು ಮೂಡಿಸುವುದು ಪ್ರಸ್ತುತ ಕಾಲಘಟ್ಟದ ಅಗತ್ಯತೆಗಳಲ್ಲಿ ಒಂದಾಗಿದೆ ಎಂದು ಹೇಳಿದರು. ಧರ್ಮಾಂಧರು ಸಮಾಜದಲ್ಲಿ ಎಷ್ಟೇ ದ್ವೇಷ ಹರಡುವ ಪ್ರಯತ್ನ ಮಾಡಿದರೂ ಎಲ್ಲಾ ಧರ್ಮದವರು ಶಾಂತಿ, ಸಾಮರಸ್ಯ ಕಾಪಾಡಲು ಕಟಿಬದ್ಧರಾಗಿರಬೇಕು. ದ್ವೇಷ ಹರಡುವವರ ಮಾತುಗಳಿಗೆ ಯಾರು ಮರುಳಾಗಬಾರದು ಎಂದು ಸೂಫಿ ಹಾಜಿ ಒತ್ತಿ ಹೇಳಿದರು.
ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ ಎ.ಎಸ್. ಪೊನ್ನಣ್ಣ ಮಾತನಾಡಿ, ಜನರ ಬದುಕಿಗೆ ಸಂಬAಧಿಸಿದAತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಜವಾಬ್ದಾರಿ ಸರಕಾರದಾದರೂ, ಅದಕ್ಕಿಂತ ಮುಖ್ಯವಾಗಿ ಸಮಾಜದಲ್ಲಿ ನೆಲೆಸಬೇಕಾದ ಶಾಂತಿ, ಸೌಹಾರ್ದತೆ ಮತ್ತು ಸಾಮರಸ್ಯ ಕಾಪಾಡುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ. ನಮ್ಮ ಸಂವಿಧಾನದ ಆಶಯದಂತೆ ಸಮಾಜದಲ್ಲಿ ಸಮಾನತೆ ಇರಬೇಕು. ದೇಶದ ಭವಿಷ್ಯ ಎಂದು ಪರಿಗಣಿಸಲ್ಪಡುವ ಮುಂದಿನ ಪೀಳಿಗೆಗೂ ಸಮಾನತೆಯ ವಾತಾವರಣ ಸೃಷ್ಟಿಯಾಗಬೇಕು. ಸಂವಿಧಾನದಲ್ಲಿ ಪ್ರತಿಪಾದಿಸಿರುವ ಹಕ್ಕುಗಳಿಂದ ಯಾವುದೇ ಸಮುದಾಯ ವಂಚಿತರಾಗಬಾರದು ಎಂದು ಹೇಳಿದರಲ್ಲದೆ, ಜನರ ಧಾರ್ಮಿಕ ಭಾವನೆಗಳ ಬಗ್ಗೆ ಚೆಲ್ಲಾಟವಾಡದೇ ಸೌಹಾರ್ದತೆಯಿಂದ ಬದುಕು ಸಾಗಿಸುವುದೇ ಇಂದಿನ ಅನಿವಾರ್ಯತೆಗಳಲ್ಲಿ ಪ್ರಮುಖವಾಗಿದೆ ಎಂದು ತಿಳಿಸಿದರು.
ಸಮ್ಮೇಳನದಲ್ಲಿ ಭಾಗವಹಿಸಿದ್ದ ಕೊಡಗು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಪಿ.ಎ. ಹನೀಫ್ ಮಾತನಾಡಿದರು. ದಕ್ಷಿಣ ಕನ್ನಡದ ಪ್ರಸಿದ್ಧ ವಿದ್ವಾಂಸ ಸಿರಾಜುದ್ದೀನ್ ಸಖಾಫಿ ಕನ್ಯಾನ ಸಮ್ಮೇಳನದಲ್ಲಿ ಸೌಹಾರ್ದತೆ ಕುರಿತು ಧಾರ್ಮಿಕ ಉಪನ್ಯಾಸ ನೀಡಿದರು. ಚಿಟ್ಟಡೆ ಮೊಹಿದ್ದೀನ್ ಜುಮಾ ಮಸೀದಿಯ ಆಡಳಿತ ಮಂಡಳಿ ಅಧ್ಯಕ್ಷ ಕೆ.ಯು. ಫಕ್ರುದ್ದೀನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಚಿಟ್ಟಡೆ ಉರೂಸ್‌ನ ಪ್ರಮುಖ ಆಕರ್ಷಣೆಯಾಗಿ ನಡೆದ ಸೌಹಾರ್ದ ಸಮ್ಮೇಳನವನ್ನು ವೀರಾಜಪೇಟೆಯ ಅನ್ವಾರುಲ್ ಹುದಾ ಸಂಸ್ಥೆಯ ಪ್ರಾಂಶುಪಾಲ ಅಶ್ರಫ್ ಅಹ್ಸನಿ ಉದ್ಘಾಟಿಸಿದರು. ವೇದಿಕೆಯಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಟಾನ ಪ್ರಾಧಿಕಾರದ ಉಪಾಧ್ಯಕ್ಷ ಸಿ.ಎ. ನಾಸರ್, ವೀರಾಜಪೇಟೆ ಪುರಸಭಾ ಸದಸ್ಯ ಮೊಹಮ್ಮದ್ ರಾಫಿ, ಕೆದಮುಳ್ಳೂರು ಗ್ರಾ.ಪಂ. ಸದಸ್ಯ ಎಂ.ಎA. ಇಸ್ಮಾಯಿಲ್, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೋಳುಮಂಡ ರಫೀಕ್, ಕಾಫಿ ಬೆಳಗಾರರಾದ ಮಾಳೇಟಿರ ಚಿಣ್ಣಪ್ಪ ಬಾಲು, ಲತೀಫ್ ಉಸ್ತಾದ್, ಆಡಳಿತ ಮಂಡಳಿ ಪದಾಧಿಕಾರಿಗಳಾದ ವೈ.ಎಂ. ಹಸನ್, ಕೆ.ಯು. ರಜಾಕ್, ಸಿ.ಯು. ಹಂಸು, ವೈ.ಎಂ. ಮುಸ್ತಫಾ, ಕೆ.ಯು. ಮೊಹಮ್ಮದ್, ವೈ. ಈ. ಹನೀಫಾ, ಸಿ.ಎ. ಅಜೀಜ್, ಸಿ.ಎಸ್. ಹನೀಫ್ ಮೊದಲಾದವರು ಉಪಸ್ಥಿತರಿದ್ದರು.
ಆರಂಭದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಗೆ ಚಿಟ್ಟಡೆ ಜಮಾಅತ್ತಿನ ಖತೀಬ ಅಬ್ದುಲ್ಲಾ ಅಲ್ ಖಾಸಿಮಿ ನೇತೃತ್ವ ನೀಡಿದರು. ಜುಮಾ ಮಸೀದಿಯ ಸದರ್ ಉಸ್ತಾದ್ ಹ್ಯಾರಿಸ್ ಬಯಾನಿ ಸ್ವಾಗತಿಸಿದರು. ಅಬ್ದುಲ್ ಲತೀಫ್ ಝಹ್ರಿ ವಂದಿಸಿದರು. ಕಾರ್ಯಕ್ರಮದ ನಂತರ ಮೌಲೂದ್ ಪಾರಾಯಣ ಮತ್ತು ನೆರೆದಿದ್ದ ಜನರಿಗೆ ಸಾಮೂಹಿಕ ಅನ್ನಸಂತರ್ಪಣೆ ನಡೆಯಿತು.