ಸಿಡ್ನಿ, ಮೇ ೨೭: ಆಸ್ಟೆçÃಲಿಯಾ ಖಂಡದ ಉತ್ತರ ಭಾಗದಲ್ಲಿರುವ ಪಪುವಾ ನ್ಯೂಗಿನಿ ರಾಷ್ಟçದಲ್ಲಿ ಸಂಭವಿಸಿದ ಭಾರಿ ಪ್ರಮಾಣದ ಭೂಕುಸಿತದಲ್ಲಿ ೨ ಸಾವಿರಕ್ಕೂ ಅಧಿಕ ಮಂದಿ ಭೂಸಮಾಧಿಯಾಗಿದ್ದಾರೆ ಎಂದು ಪಪುವಾ ನ್ಯೂಗಿನಿ ರಾಷ್ಟಿçÃಯ ವಿಪತ್ತು ಕೇಂದ್ರ ವಿಶ್ವಸಂಸ್ಥೆಗೆ ತಿಳಿಸಿದೆ. ಜನರ ಪ್ರಾಣಕ್ಕೆ ಹಾನಿಯಾಗಿದ್ದಲ್ಲದೆ ಕಟ್ಟಡಗಳು, ತೋಟಗಳು ನಾಶವಾಗಿವೆ. ದೇಶದ ಆರ್ಥಿಕ ಜೀವನಾಧಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ರಾಷ್ಟಿçÃಯ ವಿಪತ್ತು ಕೇಂದ್ರದ ಅಧಿಕಾರಿಯೊಬ್ಬರು ವಿಶ್ವಸಂಸ್ಥೆಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಭೂಕುಸಿತ ಮುಂದುವರಿದ ಕಾರಣ ಪರಿಸ್ಥಿತಿ ಅಸ್ಥಿರವಾಗಿಯೇ ಇದೆ. ಇದು ರಕ್ಷಣಾ ತಂಡಗಳು ಮತ್ತು ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ಬದುಕುಳಿದವರಿಗೂ ಅಪಾಯವನ್ನುಂಟು ಮಾಡಬಹುದು. ಪಪುವಾ ನ್ಯೂಗಿನಿಯ ಅಭಿವೃದ್ಧಿ ಪಾಲುದಾರರಿಗೆ ಇತರ ಅಂತರರಾಷ್ಟ್ರೀಯ ಸ್ನೇಹಿತರಿಗೆ ದೇಶದ ಪರಿಸ್ಥಿತಿಯ ಬಗ್ಗೆ ತಿಳಿಸಿ ಸಹಾಯ ಹಸ್ತ ಚಾಚುವಂತೆ ವಿಶ್ವಸಂಸ್ಥೆಯನ್ನು ಕೋರಿದೆ. ಅಸ್ಟೆçÃಲಿಯಾ ಸರಕಾರ ೨೫ ಲಕ್ಷ ಡಾಲರ್ ನೆರವು ಘೋಷಿಸಿದೆ.