ಮಡಿಕೇರಿ, ಮೇ ೨೮: ಸಿದ್ದಾಪುರ ಸಮೀಪದ ಹುಂಡಿ ನಿವಾಸಿ ಪಿ.ಎ ಸರೀನಾ ಎಂಬವರ ಖಾತೆಯಿಂದ ತಾ.೧೦ ರಂದು ರೂ.೧೯,೫೦೦ ಹಣ ಅವರಿಗೆ ಗೊತ್ತಿಲ್ಲದೆ ಅಪರಿಚತರಿಗೆ ವರ್ಗಾವಣೆ ಆಗಿತ್ತು. ತಾ.೨೨ ರಂದು ಹಾಸನ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರ ಕೊಡಗಿನ ಬ್ಯಾಂಕ್ ಖಾತೆಗಳಿಂದ ರೂ ೧೫,೯೮,೭೬೧ ಹಣವನ್ನು ಅಪರಿಚಿತ ಖದೀಮರು ತಮ್ಮ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡು ವಂಚನೆ ಮಾಡಿದ್ದರು. ಅಯ್ಯಂಗೇರಿ ನಿವಾಸಿ ಕೆ.ಎ ಆಲಿ ಅವರು ರೂ.೯೯,೮೪೩ ಅನ್ನು ವಂಚಕರ ಬಲೆಗೆ ಬಿದ್ದು ಕಳೆದುಕೊಂಡಿದ್ದರು. ಒಂದೇ ಜಿಲ್ಲೆಯಲ್ಲಿ ೧೫ ದಿನಗಳ ಅವಧಿಯಲ್ಲಿ ಅಮಾಯಕರು ರೂ.೧೭ ಲಕ್ಷಕ್ಕೂ ಮಿಗಿಲು ಕಳೆದುಕೊಂಡಿದ್ದು, ಜಿಲ್ಲೆಯಲ್ಲಿನ ಎಲ್ಲ ಬ್ಯಾಂಕ್ ಗ್ರಾಹಕರು ಸಹಜವಾಗಿ ಆತಂಕಕ್ಕೆ ಒಳಗಾಗಿದ್ದಾರೆ. ಈ ಮೂರು ಘಟನೆಗಳ ಸಂಬAಧ ಪ್ರಕರಣಗಳು ದಾಖಲಾಗಿವೆಯಾದರೂ ಮೋಸಕ್ಕೆ ಒಳಗಾಗಿದ್ದೇನೆ ಎಂಬ ನಾಚಿಕೆಯಿಂದ ವಂಚನೆಗೊಳಗಾದ ಇನ್ನೂ ಹಲವಾರು ಮಂದಿ ಪ್ರಕರಣಗಳನ್ನು ದಾಖಲಿಸದೆ ಸುಮ್ಮನೆ ಕುಳಿತ್ತಿದ್ದಾರೆ.
ಇವೆಲ್ಲ ಪ್ರಕರಣಗಳ ಹಿಂದೆ ಜಾಡು ಬಿದ್ದಿರುವ ಆಯಾ ಬ್ಯಾಂಕ್ಗಳ ವ್ಯವಸ್ಥಾಪಕರು ಹಾಗೂ ಜಿಲ್ಲಾ ಲೀಡ್ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕರು, ಗ್ರಾಹಕರು ಮೋಸ ಹೋಗದಂತೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಬ್ಯಾಂಕ್ ಹೆಸರಿನಲ್ಲಿ ಅಪರಿಚಿತ ಸಂಖ್ಯೆಯಿAದ ಸಂದೇಶ ಬಂದರೆ ನಿರ್ಲಕ್ಷಿಸಿ, ಸಂಶಯಾಸ್ಪದ ಲಿಂಕ್, ಅಪ್ಲಿಕೇಷನ್ ಕ್ಲಿಕ್ ಮಾಡಬೇಡಿ, ಬ್ಯಾಂಕ್ ಸಂದೇಶಗಳ ಬಗ್ಗೆ ಏನೇ ಸಂದೇಹಗಳಿದ್ದರೂ ಬ್ಯಾಂಕ್ ಅನ್ನು ನೇರವಾಗಿ ಸಂಪರ್ಕಿಸಿ ಎಂಬ ಸಲಹೆಗಳನ್ನು ಪತ್ರಿಕೆಯ ಮೂಲಕ ಸಂದೇಶ ಇತ್ತಿದ್ದಾರೆ.
“ಈ ಆ್ಯಪ್ ಇನ್ಸಾ÷್ಟಲ್ ಮಾಡಿ” ಎಂಬ ಸಂದೇಶ ನಿರ್ಲಕ್ಷಿಸಿ
ಕೊಡಗಿನಲ್ಲಿ ಇತ್ತೀಚೆಗೆ ವರದಿಯಾದ ಬಹುತೇಕ ಎಲ್ಲ ವಂಚನೆ ಪ್ರಕರಣಗಳಲ್ಲಿಯೂ ವಂಚನೆಗೊಳಗಾದವರು ಅಪರಿಚಿತ ಆ್ಯಪ್ವೊಂದನ್ನು ಇನ್ಸಾ÷್ಟಲ್ ಮಾಡಿದ ಪರಿಣಾಮ ವಂಚನೆಗೊಳಗಾಗಿದ್ದಾರೆ. ಅಪರಿಚಿತ ಸಂಖ್ಯೆಯೊAದರಿAದ ವಾಟ್ಸಾö್ಯಪ್ ಮೂಲಕ ಚಿತ್ರದಲ್ಲಿರುವಂತೆ ಸಂದೇಶ ಬಂದಿದೆ.
(ಮೊದಲ ಪುಟದಿಂದ) “ನಿಮ್ಮ ಬ್ಯಾಂಕ್ ಖಾತೆಯ ಎಲ್ಲ ವಹಿವಾಟುಗಳು ನೀವು ಮಾಡಿರುವ ತಪ್ಪು ಟ್ರಾನ್ಸಾಕ್ಷನ್ನಿಂದಾಗಿ ನಿಂತು ಹೋಗಿವೆ. ಮತ್ತೆ ನಿಮ್ಮ ಖಾತೆಯನ್ನು ಸಕ್ರಿಯಗೊಳಿಸಲು ಕೆಳಗಿರುವ ಬ್ಯಾಂಕ್ ಅಪ್ಲಿಕೇಷನ್ ಅನ್ನು ಡೌನ್ಲೋಡ್ ಮಾಡಿ” ಎಂಬ ಸಂದೇಶದ ಕೆಳಗೆ ಬ್ಯಾಂಕ್ ಹೆಸರಿನಲ್ಲಿ .ಚಿಠಿಞ ಫೈಲ್ ಅನ್ನು ಕೂಡ ಖದೀಮರು ಕಳುಹಿಸಿದ್ದಾರೆ. ತಮ್ಮ ಬ್ಯಾಂಕ್ ಖಾತೆ ನಿಷ್ಕಿçಯವಾಗಬಹುದೆಂಬ ಭಯದಿಂದ ಅಮಾಯಕರು ಈ ಫೈಲ್ ಅನ್ನು ಕ್ಲಿಕ್ ಮಾಡಿದಾಕ್ಷಣ ಅಪ್ಲಿಕೇಷನ್ ತಮ್ಮ ಫೋನ್ನಲ್ಲಿ ಇನ್ಸಾ÷್ಟಲ್ ಆಗಿದೆ. ಬಳಿಕ ಖದೀಮರು ಹಣವನ್ನು ಲಪಟಾಯಿಸಿದ್ದಾರೆ.
ನಿಜವಾಗಿ ಇದು ಯಾವುದೇ ಬ್ಯಾಂಕ್ ಅಪ್ಲಿಕೇಷನ್ ಅಲ್ಲ. ಇದು ‘ಖemoಣe ಂಛಿess ಖಿooಟ’ (ರಿಮೋಟ್ ಆಕ್ಸಸ್ ಟೂಲ್) ಆಗಿದ್ದು, ಇದು ಫೋನ್ನಲ್ಲಿ ಇನ್ಸಾ÷್ಟಲ್ ಆದ ಕೂಡಲೆ ಖದೀಮರಿಗೆ ಅಮಾಯಕ ಗ್ರಾಹಕರ ಫೋನ್ನ ನಿಯಂತ್ರಣ ದೊರಕುತ್ತದೆ. ಅಮಾಯಕರ ಫೋನ್ ಸಂಖ್ಯೆಗೆ ಬರುವ ಎಲ್ಲ ಒ.ಟಿ.ಪಿ ಗಳನ್ನು ಕಳ್ಳರು ಸುಲಭವಾಗಿ ತಮ್ಮ ಫೋನ್ಗಳಲ್ಲಿ ವೀಕ್ಷಿಸಿ ಅಮಾಯಕರ ಖಾತೆಗಳಿಗೆ ಮೊಬೈಲ್ ಬ್ಯಾಂಕಿAಗ್ ಸರ್ವಿಸ್ಗಳನ್ನು ಅಳವಡಿಸಿಕೊಂಡು ತಮ್ಮ ಖಾತೆಗಳಿಗೆ ಹಣ ವರ್ಗಾಯಿಸಿಕೊಳ್ಳುತ್ತಾರೆ. ಖದೀಮರು ಬಳಸುವ ವಾಟ್ಸಾö್ಯಪ್ ಸಂಖ್ಯೆಯ ಡಿ.ಪಿಯಲ್ಲಿ ಬ್ಯಾಂಕ್ನ ಅಧಿಕೃತ ಲೋಗೋ ಕೂಡ ಇರುವ ಕಾರಣ ವಂಚಕರಿಗೆ ಅಮಾಯಕರನ್ನು ಸುಲಭವಾಗಿ ನಂಬಿಸಬಹುದಾಗಿದೆ.
ಅಮಾಯಕರ ಹೆಸರಿನ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ
ವಂಚಕರು ಮೋಸದಿಂದ ವರ್ಗಾವಣೆಗೊಳಿಸಿಕೊಂಡ ಖಾತೆಯ ಬೆನ್ನ ಹಿಂದೆ ಬಿದ್ದರೆ ಬಹುತೇಕ ಪ್ರಕರಣಗಳಲ್ಲಿ ಆ ಖಾತೆಯು ಅಮಾಯಕರ ಹೆಸರಿನಲ್ಲಿರುತ್ತವೆ. ಅವಿದ್ಯಾವಂತ ಕೆಲವರನ್ನು ಮೊದಲಿಗೆ ಗುರಿಯಾಗಿಸುವ ವಂಚಕರು, ಅವರುಗಳ ಹೆಸರಿನಲ್ಲಿಯೇ ಬ್ಯಾಂಕ್ ಖಾತೆಗಳನ್ನು ತೆರೆದು ಅವರಿಗೆ ಸ್ವಲ್ಪ ಹಣವನ್ನು ನೀಡಿ ಖಾತೆಗೆ ಬಂದ ಹಣವನ್ನು ಡ್ರಾ ಮಾಡುತ್ತಾರೆ ಎಂದು ಸಂಶಯಿಸಲಾಗಿದೆ. ಪೊಲೀಸರು ವಂಚನೆ ಪ್ರಕರಣದ ಬೆನ್ನ ಹಿಂದೆ ಬಿದ್ದರೆ ಅಮಾಯಕರು ಸಿಕ್ಕಿ ಬೀಳುತ್ತಾರೆಯೇ ಹೊರತು ನೈಜ ವಂಚಕರು ಪರಾರಿಯಾಗಿರುತ್ತಾರೆ. - ಪಿ.ಜಿ.ಆರ್