ಮಡಿಕೇರಿ, ಮೇ ೨೮: ಇತಿಹಾಸ ಪ್ರಸಿದ್ಧ ಹಾಗೂ ಕೊಡಗಿನ ಕೊನೆಯ ಬೋಡ್ ನಮ್ಮೆ ಎಂದು ಹೆಸರಾದ "ಪಾರಣ ನಮ್ಮೆ" ಇದೇ ಮೇ-೩೧ ಹಾಗೂ ಜೂನ್-೧ರಂದು ನಡೆಯಲಿದೆ ಎಂದು ಬೇರಳಿ ನಾಡ್ ತಕ್ಕರಾದ ಮಳವಂಡ ಭುವೇಶ್ ದೇವಯ್ಯ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ವಿ.ಬಾಡಗ, ಕಂಡAಗಾಲ, ಪೊದಕೇರಿ, ಮರೋಡಿ, ಪೆಗ್ಗರಿಮಾಡ್ ಸೇರಿದಂತೆ ಇಲ್ಲಿನ ಸುತ್ತಮುತ್ತಲ ಗ್ರಾಮಗಳಿಗೆ ಸೇರಿದ ಬೇರಳಿ ನಾಡಿನ "ಪಾರಣ ನಮ್ಮೆ" ಕೊಡಗಿನ ಕೊನೆಯ ಬೋಡ್ ನಮ್ಮೆ ಆಗಿದೆ. ಅಕ್ಟೋಬರ್ -೧೭ರಂದು ಕಾವೇರಿ ತೀರ್ಥೋದ್ಭವ ಸಮಯದಲ್ಲಿ ಬೊಟ್ಟಿಯತ್ ನಾಡಿನ ಕುಂದ ಬೆಟ್ಟದಲ್ಲಿ ನಡೆಯುವ "ಕುಂದತ್ ಬೋಡ್ ನಮ್ಮೆ" ಜಿಲ್ಲೆಯ ಮೊದಲ ಬೋಡ್ ನಮ್ಮೆ ಆಗಿದೆ.

ಜಿಲ್ಲೆಯ ವಿವಿಧೆಡೆ ನಡೆಯುವ ಬೋಡ್ ನಮ್ಮೆಗಳಿಗೂ ವಿಭಿನ್ನವಾಗಿ ಬೇರಳಿ ನಾಡಿನ "ಪಾರಣ ನಮ್ಮೆ" ನಡೆಯುತ್ತಿದ್ದು, ವಿವಿಧೆಡೆ ನಡೆಯುವ ಬೋಡ್ ನಮ್ಮೆಗಳಲ್ಲಿ ಶೃಂಗರಿಸುವ ಕುದುರೆಗಳನ್ನು ಮುಂದಿನ ವರ್ಷಕ್ಕೆ ಜೋಪಾನವಾಗಿಟ್ಟರೆ, ಪಾರಣ ಬೋಡ್ ನಮ್ಮೆಗೆ ತಯಾರಿಸುವ ಹಸಿ ಬಿದಿರಿನ ಕುದುರೆ ಹಾಗೂ ಆನೆಗಳನ್ನು ಹಬ್ಬದ ಕೊನೆಯಲ್ಲಿ ಕತ್ತರಿಸಿ ನಾಶ ಪಡಿಸಲಾಗುತ್ತದೆ. ಇದರಿಂದಲೇ ಬೋಡ್ ನಮ್ಮೆಯ ಹಾಡಿನಲ್ಲಿ "ಕುಂದತ್ ಬೊಟ್ಟ್'ಲ್ ನೇಂದ ಕುದುರೆ... ಪಾರಣ ಮಾನಿಲ್ ಅಳ್‌ಂಜ ಕುದುರೆ" ಎಂಬ ಉಲ್ಲೇಖವಿದೆ. ಕಳೆದ ಕೆಲ ವರ್ಷದ ಹಿಂದೆ ಜಿಲ್ಲೆಯ ವಿವಿಧೆಡೆ ಬಿದಿರುಗಳಿಗೆ ರೋಗ ತಗುಲಿ ಸಂಪೂರ್ಣ ನಾಶವಾಗಿತ್ತು, ಆದರೆ ಪಾರಣ ನಮ್ಮೆಗೆ ಕಡಿಯುವ ಕಮ್ಮಾರ್ಟಪ್ಪ ದೇವರ "ಕುದುರೆ ಪುಂಡ" ರೋಗ ತಗುಲದೆ ಹಾಗೆ ಉಳಿದಿದ್ದು, ಇದು ದೇವರ ಪವಾಡ ಎನ್ನಬಹುದು. ಹಾಗೇ ಆನೆಗಳು ಕೂಡ ಈ ಬಿದಿರನ್ನು ತಿನ್ನುವುದಿಲ್ಲ, ಬೇರೆ ಸಮಯದಲ್ಲಿ ಇದನ್ನು ಯಾರು ಕೂಡ ಮುಟ್ಟುವುದಿಲ್ಲ ಎಂದು ಮಾಹಿತಿ ನೀಡಿದ್ದರು.

ಹಬ್ಬದ ಆಚರಣೆ ಹೇಗೆ.?!!

ಮೇ-೨೬ಕ್ಕೆ ಹಬ್ಬ ಕಟ್ಟು ಬೀಳುವ ಮೂಲಕ ವಿವಿಧ ಕಟ್ಟುಪಾಡುಗಳಿಗೆ ಚಾಲನೆ ದೊರೆಯುತ್ತದೆ. ಮೇ-೩೧ರಂದು ಬೆಳಿಗ್ಗಿನ ಜಾವ ಸೂರ್ಯೋದಯಕ್ಕೆ ಮುನ್ನ ತಕ್ಕಮುಖ್ಯಸ್ಥರಾದ ಕೋಲತಂಡ ಕುಟುಂಬದ ನೇತೃತ್ವದಲ್ಲಿ ತಳಿಯತಕ್ಕಿ ಬೊಳಕ್‌ನೊಂದಿಗೆ ತೆರಳಿ ಕುದುರೆ ಪುಂಡ ಕಡಿಯುವ ಶಾಸ್ತç ಮಾಡಲಾಗುತ್ತದೆ. ನಂತರ ರಾತ್ರಿ ವಿವಿಧ ವೇಷಧಾರಿಗಳು ಸಾಂಪ್ರದಾಯಿಕ ಬೋಡ್ ನಮ್ಮೆ ಹಾಡಿನೊಂದಿಗೆ ಮನೆ ಮನೆ ಕಳಿ ಹೊರಡುತ್ತಾರೆ, ಬೇರಳಿ ನಾಡಿನ ಪ್ರತಿ ಮನೆಯಲ್ಲೂ ಬೋಡ್‌ಕಳಿಯನ್ನು ಜನರು ಪ್ರೀತಿಯಿಂದ ಬರಮಾಡಿಕೊಳ್ಳುತ್ತಾರೆ.

ಜೂನ್-೧ರಂದು ಸಂಜೆ ೫ ಗಂಟೆಗೆ ಕಂಡAಗಾಲ ಹಾಗೂ ಮರೋಡಿ ಗ್ರಾಮದಲ್ಲಿರುವ "ನಾಡ್ ಮಾನಿ"ಯಲ್ಲಿ ಕುದುರೆ ಹಾಗೂ ಆನೆಗಳ ಸಮಾಗಮವಾಗಲಿದೆ. ವಿ.ಬಾಡಗ, ಪೊದಕೇರಿ ಹಾಗೂ ಕಂಡAಗಾಲದಿAದ ತಲಾ ಒಂದೊAದು ಕುದುರೆ ಸೇರಿದಂತೆ ಒಟ್ಟು ಮೂರು ಕುದುರೆ ಹಾಗೂ ಪೆಗ್ಗರಿಮಾಡ್ ಹಾಗೂ ಮರೋಡಿಯಿಂದ ತಲಾ ಒಂದೊAದು ಆನೆಗಳು ಹೊರಟು ಪಾರಣ ಮಾನಿಯಲ್ಲಿ ಸೇರಿ ಪರಸ್ಪರ ಜನರು ಆಲಂಗಿಸಿಕೊAಡು ಹಬ್ಬವನ್ನು ವಿಭಿನ್ನವಾಗಿ ಆಚರಿಸುತ್ತಾರೆ ಎಂದು ಬೇರಳಿ ನಾಡಿನ ತಕ್ಕಮುಖ್ಯಸ್ಥರಾದ ಮಳವಂಡ ಭುವೇಶ್ ದೇವಯ್ಯ ಸೇರಿದಂತೆ ವಿವಿಧ ತಕ್ಕಮುಖ್ಯಸ್ಥರು ಮಾಹಿತಿ ನೀಡಿದರು.