ಸಿದ್ದಾಪುರ, ಮೇ ೨೮: ಶಾಲೆ ಪ್ರಾರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ವಿವಿಧ ಶಾಲೆಗಳು ಶಾಲೆಯ ಮುಂಭಾಗ ಆಕರ್ಷಕವಾಗಿ ವಿನ್ಯಾಸಗೊಳಿಸುವ ಮೂಲಕ ವಿದ್ಯಾರ್ಥಿಗಳನ್ನು ಶಾಲೆಗೆ ಬರಮಾಡಿಕೊಳ್ಳಲು ಸಿದ್ಧವಾಗಿದೆ. ಸಿದ್ದಾಪುರ ಸಮೀಪದ ಇಂಜಿಲಗೆರೆ ಮಕ್ಕಳಾದ ಮೋಹನ್ ದಾಸ್ ಹಾಗೂ ಜಗದಿ ದಂಪತಿಯ ಅವಳಿ ಸಹೋದರರಾದ ಅವಿನಾಶ್ ಮತ್ತು ಅಭಿನವ್ ಎಂಬ ವಿದ್ಯಾರ್ಥಿಗಳು ಸೇರಿ ತಮ್ಮ ಕೈಚಳಕದಿಂದ ಶಾಲೆ ಪ್ರಾರಂಭವಾಗಿದೆ ಸ್ವಾಗತ ಎಂಬ ಸಂದೇಶ ಸಾರುವ ಸುಂದರವಾದ ಚಿತ್ರವನ್ನು ಬಿಡಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. - ವಾಸು